Parents sold their own children :ಮಾಡಿದ ಸಾಲ ತೀರಿಸಲು ಹೆತ್ತ ಕಂದಮ್ಮನನ್ನೇ ಮಾರಿದ ಪೋಷಕರು

ಚಾಮರಾಜನಗರ : Parents who sold their own children : ಜೀವನದಲ್ಲಿ ಬಡತನ ಒಮ್ಮೊಮ್ಮೆ ಎಂತಹುದೇ ಕೆಲಸ ಮಾಡಲು ಬೇಕಾದರೂ ಪ್ರೇರಿಪಿಸುತ್ತದೆ. ಇದೇ ರೀತಿ ಇಲ್ಲೊಬ್ಬ ತಂದೆ ಬಡತನ ಎಂಬ ಕಾರಣಕ್ಕಾಗಿ ತಮ್ಮದೇ 25 ದಿನಗಳ ಹಸುಗೂಸನ್ನು ಮಾರಾಟ ಮಾಡಲು ಮುಂದಾದ ಘಟನೆ ಬೆಳಕಿಗೆ ಬಂದಿದೆ.

ಚಾಮರಾಜನಗರದಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರ ನೆರೆಹಾವಳಿ ಸ್ಥಿತಿಗತಿ ಪರಿಶೀಲನೆ ವೇಳೆ ಈ ಮಗು ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ. ಲಿಂಗತ್ವ ಅಲ್ಪಸಂಖ್ಯಾತ ಸಂಘಟನೆ ಸಮತಾ ಸೊಸೈಟಿಯ ದೀಪಾಬುದ್ದೆ ಅವರಿಂದ ಈ ಘಟನೆ ಬೆಳಕಿಗೆ ಬಂದಿದೆ. ಹೊಟೆಲ್ ಕಾರ್ಮಿಕ ಬಸವ ಎಂಬವನು 25 ದಿನಗಳ ಹಸುಗೂಸನ್ನು ಮಾರಾಟ ಮಾಡಲು ಮುಂದಾಗಿದ್ದ ತಂದೆ ಎಂದು ಗೊತ್ತಾಗಿದೆ‌.

ತಂದೆ ಬಸವ ಸಹಕಾರ್ಮಿಕನ ಮೂಲಕ ತನ್ನ ಮಗುವನ್ನು ಬೆಂಗಳೂರಿನ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ.‌‌ ಮಾರಾಟ ಮಾಡಿದಕ್ಕಾಗಿ 50 ಸಾವಿರ ರೂಪಾಯಿ ಹಣವನ್ನು ಸಹ ಪಡೆದಿದ್ದಾನೆ. ಇದೀಗ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಬಡತನ ಹಾಗು ಪತ್ನಿಗೆ ಹೃದಯ ಕಾಯಿಲೆ,ಇತ್ತು ಅದಕ್ಕಾಗಿ ಸಾಲ ಮಾಡಿದ್ದೆ. ಸಾಲ ತೀರಿಸಲು ಮಗು ಮಾರಾಟ ಮಾಡಿದೆ ಎಂದು ತಂದೆ ಬಸವ ಹೇಳಿಕೆ ನೀಡಿದ್ದಾನೆ.

ಸದ್ಯ ಪೊಲೀಸರೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ನೀಡಿ ಮಗು ಮಾರಾಟ ಮಾಡಿದ ತಂದೆ ಹಾಗೂ ತಾಯಿಯನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಬಳಿಕ ತಾಯಿ ಹಾಗು ಆಕೆಯ ದೊಡ್ಡಮಗುವಿಗೆ ಸ್ವಾಧಾರ ಕೇಂದ್ರದಲ್ಲಿ ಆಶ್ರಯ ನೀಡಲು ಕ್ರಮ ಕೈಗೊಂಡಿದ್ದಾರೆ. ಇನ್ನು ಈ ಘಟನೆಯ ಕುರಿತಂತೆ ಪ್ರಕರಣ ದಾಖಲಿಸಿ ತನಿಖೆ ಮಾಡುತ್ತೇವೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

25 ದಿನಗಳ ಹಸುಗೂಸನ್ನು ಮಾರಾಟ ಮಾಡುವ ಈ ಕಠೋರ ನಿರ್ಧಾರವನ್ನು ದಂಪತಿಗಳು ತೆಗೆದುಕೊಳ್ಳಲು ನಿಜವಾದ ಕಾರಣ ಏನೆಂದು ಇನ್ನು ಗೊತ್ತಾಗಿಲ್ಲ. ಬಡತನ‌ ಮತ್ತು ತಾಯಿಯ ಅನಾರೋಗ್ಯಕ್ಕೆಂದೆ ಈ ರೀತಿ ಮಾಡಿದ್ರಾ ಎಂಬ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ. ಒಂದು ವೇಳೆ ಕ್ಷುಲ್ಲಕ ಕಾರಣಕ್ಕೆ ತಮ್ಮದೇ ಮಗುವನ್ನು ಈ ರೀತಿ‌ ಮಾರಾಟ ಮಾಡಿದ್ದಾದರೆ ದಂಪತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಹೀಗಾಗಿ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕಾಗಿದೆ.

ಇದನ್ನು ಓದಿ : Billava Samaj :ಮುಖ್ಯಮಂತ್ರಿ ಹಾಗೂ ಸಚಿವ ಸುನಿಲ್​ ಕುಮಾರ್​ರಿಂದ ಬಿಲ್ಲವ ಸಮಾಜದ ವಿರುದ್ಧ ಷಡ್ಯಂತ್ರ : ಪ್ರಣವಾನಂದ ಸ್ವಾಮೀಜಿ

ಇದನ್ನೂ ಓದಿ : Comedian Raju Srivastava Passes Away :ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್​ ವಿಧಿವಶ

Parents sold their own children to pay off their debts

Comments are closed.