Heart Attack: ಸುಳ್ಯದಲ್ಲಿ 2ನೇ ತರಗತಿ ವಿದ್ಯಾರ್ಥಿಗೆ ಹೃದಯಾಘಾತ: ತಂದೆಯ ಎದುರೇ ಕುಸಿದುಬಿದ್ದ ಬಾಲಕ

ಸುಳ್ಯ: Heart Attack boy dies : ಈ ಹಿಂದೆ ವಯಸ್ಕರಿಗೆ ಇದ್ದ ಹೃದಯಾಘಾತ ಇದೀಗ ಏನೂ ಅರಿಯದ ಮಕ್ಕಳನ್ನೂ ಕಾಡುತ್ತಿರುವುದು ಪೋಷಕರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ. 2ನೇ ತರಗತಿಯಲ್ಲಿ ಓದುತ್ತಿದ್ದ 7 ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಂಟಿನಾಕ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿನ ಕಕ್ಕುಜಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದ 7 ವರ್ಷದ ಮೋಕ್ಷಿತ್ ಕೆ.ಸಿ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.

ಇದನ್ನೂ ಓದಿ: School Close : ನಾಳೆಯಿಂದ ಪ್ರಾಥಮಿಕ ಶಾಲೆಗಳು ಬಂದ್‌

ಮಾಹಿತಿಯ ಪ್ರಕಾರ, ಬಾಲಕ ಎಂದಿನಂತೆ ಇಂದು ಕೂಡಾ ಶಾಲೆಗೆ ಹಾಜರಾಗಿದ್ದನು. ಶಾಲೆಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲೂ ಉತ್ಸಾಹದಿಂದ ಭಾಗಿಯಾಗಿದ್ದನು. ಆದರೆ ಮಧ್ಯಾಹ್ನದ ವೇಳೆಗೆ ಆತನಿಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಶಿಕ್ಷಕರು ಮೋಕ್ಷಿತ್ ಹೆತ್ತವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ. ಕೂಡಲೇ ಮೋಕ್ಷಿತ್ ತಂದೆ ಚಂದ್ರಶೇಖರ್ ಆಚಾರ್ಯ ಮಗನನ್ನು ಮನೆಗೆ ಕರೆದುಕೊಂಡು ಹೋಗಲು ಶಾಲೆಗೆ ತೆರಳಿದ್ದರು. ಶಾಲೆಯಲ್ಲಿ ತಂದೆಯ ಎದುರಲ್ಲೇ ಬಾಲಕ ನಿಂತಲ್ಲಿಯೇ ಕುಸಿದುಬಿದ್ದಿದ್ದಾನೆ. ಕೂಡಲೇ ಆತನನ್ನು ಸುಳ್ಯದ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಯಲ್ಲಿ ಆತನನ್ನು ಪರೀಕ್ಷಿಸಿದ ವೈದ್ಯರು ತುರ್ತು ಚಿಕಿತ್ಸಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಿದ್ದಾರೆ. ಆದರೆ ವೈದ್ಯರ ಚಿಕಿತ್ಸೆಗೆ ಬಾಲಕ ಸ್ಪಂದಿಸದ ಕಾರಣ ಆತನಿಗೆ ಹೃದಯಾಘಾತ ಸಂಭವಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: A terrible accident : ಕಾರು – ಬಸ್ ನಡುವೆ ಭೀಕರ ಅಪಘಾತ  : 11‌ಮಂದಿ ದಾರುಣ ಸಾವು

ಬಾಲಕನ ತಂದೆ ಚಂದ್ರಶೇಖರ್ ಆಚಾರ್ಯ ಮೋಕ್ಷಿತ್ ಓದುತ್ತಿದ್ದ ಶಾಲೆಯಲ್ಲಿ ಎಸ್‍ಡಿಎಂಸಿ ಉಪಾಧ್ಯಕ್ಷರಾಗಿದ್ದಾರೆ ಎನ್ನಲಾಗಿದೆ. ಮೋಕ್ಷಿತ್ ಅತೀ ಚಿಕ್ಕ ವಯಸ್ಸಿನಲ್ಲೇ ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿದ್ದು, ತಂದೆ, ತಾಯಿ, ಸಹೋದರನನ್ನು ಅಗಲಿದ್ದಾನೆ.

ಒಂದೇ ವಾರದಲ್ಲಿ 3 ಪ್ರಕರಣಗಳು:

ಚಿಕ್ಕ ಮಕ್ಕಳಲ್ಲಿ ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇಂದು ಹೃದಯಾಘಾತಕ್ಕೆ ಬಲಿಯಾದ ಮೋಕ್ಷಿತ್ ನನ್ನು ಸೇರಿಸಿ ಒಂದೇ ವಾರದಲ್ಲಿ ಮೂವರು ಮಕ್ಕಳು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ 14 ವರ್ಷದ ವೈಷ್ಣವಿ ಎಂಬ ಬಾಲಕಿ ಹೃದಯಾಘಾತದಿಂದ ಮೃತಪಟ್ಟಿದ್ದಳು. ಅದಾದ ಬಳಿಕ ಉಡುಪಿ ಜಿಲ್ಲೆಯ ಕುಂದಾಪುರಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ 13 ವರ್ಷದ ಬಾಲಕಿ ಅನುಶ್ರೀ ಮನೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕುಸಿದುಬಿದ್ದು ಸಾವನ್ನಪ್ಪಿದ್ದಳು. ಇದೀಗ ಮೋಕ್ಷಿತ್ ಎಂಬ 7 ವರ್ಷದ ಬಾಲಕ ಕೂಡಾ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

Heart Attack: 7 year old boy dies due to heart attack in sullia

Comments are closed.