Breakfast Drink : ಬೆಳಗ್ಗೆ ತಡವಾಗಿ ಎದ್ದಾಗ ಥಟ್ಟನೆ ಮಾಡಿ ಈ ಆರೋಗ್ಯಕರ ‌ ಬ್ರೇಕ್‌ ಪಾಸ್ಟ್‌ ಡ್ರಿಂಕ್‌

ಒಂದು ಕಡೆ ಹೊರಗಡೆ ಕೆಲಸ ಹಾಗೂ ಮತ್ತೊಂದು ಕಡೆ ಮನೆಕೆಲಸ ಮಾಡುವ ಮಹಿಳೆಯರಿಗೆ ದಿನಕ್ಕೊಂದು ರೀತಿಯ ತಿಂಡಿಯನ್ನು ತಯಾರಿಸುವುದು ಕಷ್ಟವಾಗಿರುತ್ತದೆ. ಅದರಲ್ಲೂ (Breakfast Drink)ಬೆಳಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಅಡುಗೆ ಎರಡನ್ನು ಬೇಗನೆ ಮಾಡಬೇಕಿರುವುದು ಮನೆಯ ಹೆಂಗಸರಿಗೆ ಹರಸಾಹಸವೆನ್ನಿಸುವುದು ಸುಳ್ಳಲ್ಲ. ಚಿಕ್ಕ ಮಕ್ಕಳು, ವಯಸ್ಸಾದವರು ಹಾಗೂ ಕೆಲಸಕ್ಕೆ ಹೋಗುವವರು ಇರುವುದರಿಂದ ಮನೆಯಲ್ಲಿ ತಿಂಡಿ ಬೇಗ ಆಗುತ್ತದೆ. ಬೆಳಗ್ಗಿನ ಗಡಿಬಿಡಿಯಲ್ಲಿ ಕೆಲವೊಮ್ಮೆ ತಿಂಡಿಯನ್ನು ಮಾಡಲು ಕಷ್ಟವಾಗುತ್ತದೆ. ತಿಂಡಿ ತಿನ್ನದೇ ಹಾಗೆ ಇರಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅಂತಹ ಸಮಯದಲ್ಲಿ ತಿಂಡಿ ಬದಲು ಆರೋಗ್ಯಕರವಾದ ಬ್ರೇಕ್‌ ಪಾಸ್ಟ್‌ ಡ್ರಿಂಕ್‌ನ್ನು ಮಾಡಿ ಕುಡಿಯುವುದರ ಮೂಲಕ ಹೊಟ್ಟೆಯನ್ನು ತುಂಬಿಸಿಕೊಳ್ಳಬಹುದಾಗಿದೆ. ಈ ಆರೋಗ್ಯಕರವಾದ ಬ್ರೇಕ್‌ ಪಾಸ್ಟ್‌ ಡ್ರಿಂಕ್‌ನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :

  • ರೋಲ್ಡ್‌ ಓಟ್ಸ್‌
  • ಬಾಳೆಹಣ್ಣು
  • ಬಾದಾಮಿ
  • ಖರ್ಜೂರ
  • ಕೊಕೊ ಪೌಡರ್‌
  • ಬೆಲ್ಲ

ತಯಾರಿಸುವ ವಿಧಾನ :
ಮೊದಲಿಗೆ ಒಂದು ಪಾತ್ರೆಗೆ ಒಂದು ಕಪ್‌ ರೋಲ್ಡ್‌ ಓಟ್ಸ್‌ ಸ್ವಲ್ಪ ನೀರನ್ನು ಸೇರಿಸಿ 15 ನಿಮಿಷಗಳವರೆಗೂ ನೆನೆಸಿ ಇಡಬೇಕು. ಹೀಗೆ ನೆನೆಸಿ ಇಟ್ಟ ಓಟ್ಸ್‌ನ್ನು ನೀರಿನ ಸಮೇತವಾಗಿ ಜ್ಯೂಸ್‌ ಮಾಡುವಂತಹ ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ನಂತರ ಅದೇ ಮಿಕ್ಸಿ ಜಾರಿಗೆ ನಾಲ್ಕು ಬಾಳೆಹಣ್ಣು (ಏಲಕ್ಕಿ ಬಾಳೆಹಣ್ಣು ಆಗಿದ್ದರೆ ಒಳ್ಳೆಯದು), ಹತ್ತು ನೆನೆಸಿದ ಸಿಪ್ಪೆ ತೆಗೆದ ಬಾದಾಮಿ, ಬೀಜ ತೆಗೆದ ನಾಲ್ಕು ಖರ್ಜೂರ, ಒಂದು ಚಮಚ ಕೊಕೊ ಪೌಡರ್‌ ಮತ್ತು ಒಂದು ಚಮಚ ಬೆಲ್ಲ(ಬೆಲ್ಲ ಬೇಡವೆನಿಸಿದ್ದರೆ ಖರ್ಜೂರವನ್ನು ಹಾಕಿಕೊಳ್ಳಬಹುದು)ಹಾಕಿ ಸ್ವಲ್ಪ ಸ್ವಲ್ಪವೇ ನೀರನ್ನು ಬೆರೆಸಿಕೊಂಡು ರುಬ್ಬಿಕೊಳ್ಳಬೇಕು.

ಎಲ್ಲವನ್ನೂ ಚೆನ್ನಾಗಿ ರುಬ್ಬಿಕೊಂಡಾಗ ರುಚಿಯಾದ ಬೆಳಗ್ಗಿನ ಆರೋಗ್ಯಕರವಾದ ಬ್ರೇಕ್‌ ಪಾಸ್ಟ್‌ ಡ್ರಿಂಕ್‌ ಕುಡಿಯಲು ಸಿದ್ಧವಾಗಿರುತ್ತದೆ. ಇದರಲ್ಲಿ ರೋಲ್ಡ್‌ ಓಟ್ಸ್‌ ಬದಲು ಹಾಲನ್ನು ಹಾಕಿಕೊಳ್ಳಬಹುದಾಗಿದೆ. ಈ ಡ್ರಿಂಕ್‌ನಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಪೋಷಕಾಂಶವನ್ನು ಒಳಗೊಂಡಿರುವುದರಿಂದ ಬೆಳಗ್ಗಿನ ಹೊತ್ತಿಗೆ ಉತ್ತಮ ಆಹಾರವಾಗಲಿದೆ. ರೋಲ್ಡ್‌ ಓಟ್ಸ್‌ನಲ್ಲಿ ಹೆಚ್ಚಿನ ವಿಟಮಿನ್‌ಗಳನ್ನು ಒಳಗೊಂಡಿರುತ್ತದೆ. ಈ ಡ್ರಿಂಕ್‌ನ್ನು ಪಥ್ಯ (Diet)ವನ್ನು ಮಾಡುವವರು ಇದನ್ನು ಸೇವಿಸಬಹುದಾಗಿದೆ.

ಇದನ್ನೂ ಓದಿ : Beet root halwa : ಬೀಟ್‌ ರೂಟ್‌ ಹಲ್ವಾದ ರುಚಿ ನಿಮಗೆ ಗೊತ್ತಾ ? ಮನೆಯಲ್ಲೇ ಮಾಡಿ ಅಪರೂಪದ ಖಾದ್ಯ

ಇದನ್ನೂ ಓದಿ : Potato Samosas : ಮನೆಯಲ್ಲೇ ಮಾಡಿ ಬೇಕರಿ ಶೈಲಿಯ ಆಲೂ ಸಮೋಸ

ಇದನ್ನೂ ಓದಿ : Chocolate Desserts:ನೀವು ಚಾಕೊಲೆಟ್ ಪ್ರಿಯರೇ ? ಸುಲಭವಾಗಿ ತಯಾರಿಸಿ ಚಾಕೋಲೆಟ್ ಡೆಸಾರ್ಟ್

ಈ ಡ್ರಿಂಕ್‌ ಕುಡಿಯುವುದರಿಂದ ಹೆಚ್ಚಿನ ಸಮಯದವರೆಗೂ ಹೊಟ್ಟೆ ತುಂಬಿರುವ ಅನುಭವನ್ನು ನೀಡುತ್ತದೆ. ಹಾಗೆ ಹಸಿವೆಯನ್ನು ತುಂಬಾ ಸಮಯದವರೆಗೆ ತಡೆಹಿಡಿಯುತ್ತದೆ. ಈ ಡ್ರಿಂಕ್‌ನ್ನು ಮಕ್ಕಳು ಕುಡಿಯುವುದರಿಂದ ಹೆಚ್ಚಿನ ಲಾಭವನ್ನು ಕೊಡುತ್ತದೆ. ಯಾಕೆಂದರೆ ಇದರಲ್ಲಿ ಬಾದಾಮಿ, ಓಟ್ಸ್‌, ಖರ್ಜೂರ ಇವೆಲ್ಲವೂ ಮಕ್ಕಳ ಉತ್ತಮ ಬೆಳವಣಿಗೆ ಸಹಾಯ ಮಾಡುತ್ತದೆ. ಈ ಡ್ರಿಂಕ್‌ ಜೀರ್ಣಕ್ರಿಯೆಗೂ ಉತ್ತಮವಾಗಿರುತ್ತದೆ.

Drink this healthy post-breakfast drink when you wake up late in the morning

Comments are closed.