ಕೊಡಗು ಕಾಪಾಡುವಲ್ಲಿ ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​​​ ವಿಫಲ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

0

ಕೊಡಗು : ಕೊಡಗು ಜನರ ಹಿತ ಕಾಯುವಲ್ಲಿ ಆಡಳಿತರೂಢ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​​​​ ಸೇರಿದಂತೆ ಎಲ್ಲಾ ಪಕ್ಷಗಳು ಸೋತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೊಡಗಿನ ಭೂಕುಸಿತವಾಗಿರುವ ಬ್ರಹ್ಮಗಿರಿ ಬೆಟ್ಟದಲ್ಲಿ ಕಣ್ಮರೆಯಾಗಿರುವ ಅರ್ಚಕರ ಕುಟುಂಬದ ರಕ್ಷಣಾ ಕಾರ್ಯಚರಣೆ ಪರಿಶೀಲನೆ ನಡೆಸಿದ್ದಾರೆ, ನಂತರ ನೊಂದ ಕುಟುಂಬದವರಿಗೆ ಸಾಂತ್ವನ ಹೇಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ಮಳೆ ಪ್ರವಾಹ ಬಂದು ಮೂರು ವರ್ಷಗಳಿಂದ ಆಸ್ತಿ ಪಾಸ್ತಿಯೆಲ್ಲಾ ನಷ್ಟವಾಗುತ್ತಿರುವಾಗ ಯಾವ ಪಕ್ಷಗಳು ಅದನ್ನು ರಕ್ಷಿಸುವ ಕೆಲಸ ಮಾಡುತ್ತಿಲ್ಲ. ಮೂರು ವರ್ಷಗಳ ಹಿಂದೆ ಮನೆಗಳನ್ನು ಕಳೆದುಕೊಂಡವರಿಗೆ ಮನೆ ನಿರ್ಮಿಸಲು ಖಾಸಗಿಯವರು ಜಾಗಕೊಟ್ಟರು ಅದಕ್ಕೆ ಪರ್ಮಿಷನ್ ಸಿಕ್ಕಿಲ್ಲ ಎಂದರೆ ಏನು ಅರ್ಥ. ಕೊಡಗಿನ ಜನರಿಗೆ ಸಿಗಬೇಕಾಗಿರುವ ಸೌಲಭ್ಯಗಳ ದೊರಕಿಸುವಲ್ಲಿ ಇಲ್ಲಿಯ ಶಾಸಕರು ವಿಫಲರಾಗಿದ್ಧಾರೆ. ಇವರಿಗೆ ಧಮ್ಮಿಲ್ಲ ಎಂದು ಟೀಕಿದರು.

ಕರ್ನಾಟಕದಲ್ಲಿ ಐದು ದಿನ ಸುರಿದ ಮಳೆಗೆ 8 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೊಡಗಿನಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ಮಣ್ಣಿನಡಿ ಹೂತು ಹೋಗಿದ್ದ ತಲಕಾವೇರಿ ಅರ್ಚಕರ ಕುಟುಂಬದ ಶೋಧ ಕಾರ್ಯಾಚರಣೆ ನಿನ್ನೆ ನಡೆಸಲಾಗಿದೆ. ಐದು ದಿನಗಳು ಸುರಿದ ರಣಭೀಕರ ಮಳೆಗೆ ಬ್ರಹ್ಮಗಿರಿ ಬೆಟ್ಟ ಕುಸಿದು ನಾಪತ್ತೆಯಾಗಿದ್ದ ನಾರಾಯಣ ಆಚಾರ್ಯರ ಸಹೋದರ ಆನಂದತೀರ್ಥ ಅವರ ಮೃತದೇಹ ಕೊನೆಗೂ ಮೂರು ದಿನಗಳ ಬಳಿಕ ಪತ್ತೆಯಾಗಿದೆ. ಬ್ರಹ್ಮಗಿರಿ ಬೆಟ್ಟ ಕುಸಿದ ಪರಿಣಾಮ ಆಚಾರ್ಯರ ಕುಟುಂಬದ ಐವರು ಮಣ್ಣಿನಡಿ ಸಿಲುಕಿದ್ದರು. ಉಳಿದವರ ಶವ ಇನ್ನೂ ಪತ್ತೆಯಾಗಿಲ್ಲ.

ಮೂರು ದಿನಗಳ ಹಿಂದೆ ಬೆಟ್ಟದಡಿಯಲ್ಲಿ ಹೂತುಹೋದ ನಾರಾಯಣ ಆಚಾರ್ಯ ಅವರ ಕುಟುಂಬದವರನ್ನು ತೀವ್ರ ಮಳೆಯಿಂದಾಗಿ ಹುಡುಕಲು ಸಾಧ್ಯವೇ ಆಗಿರಲಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ಮಾಡಿದ ಸಚಿವ ವಿ ಸೋಮಣ್ಣ ಇಂದು ಹೇಗಾದರೂ ಸರಿ ರಕ್ಷಣಾ ಕಾರ್ಯಾಚರಣೆ ಮಾಡಲೇಬೇಕು ಅಂತಾ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಷ್ಟರಲ್ಲೇ ಭೂ ಕುಸಿತದ ಸ್ಥಳದಲ್ಲಿ ಬೀಡುಬಿಟ್ಟಿದ್ದ ಎನ್ ಡಿಆರ್ ಎಫ್ ತಂಡ ಮಳೆ ಕಡಿಮೆ ಆಗಿದ್ದೇ ತಡ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಮತ್ತೊಂದೆಡೆ ತಮ್ಮನ ಕುಟುಂಬ ಭೂ ಕುಸಿತದಲ್ಲಿ ಕಣ್ಮರೆಯಾಗಿರುವ ಸುದ್ದಿ ತಿಳಿದು ಮಂಗಳೂರಿನಿಂದ ಬಂದಿದ್ದ ನಾರಾಯಣ ಆಚಾರ್ಯ ಅವರ ಸಹೋದರಿ ಸುಶೀಲಾ ತಮ್ಮನ ಕುಟುಂಬ ಬದುಕಿರುವ ಬಗ್ಗೆ ಯಾವುದೇ ನಂಬಿಕೆ ಇಲ್ಲ. ಕೊನೆ ಪಕ್ಷ ಅವರ ದೇಹಗಳನ್ನಾದರೂ ಹುಡುಕಿ ಕೊಡಿ ಅಂತ ಕಣ್ಣೀರು ಸುರಿಸಿದರು.

‘ಕರ್ನಾಟಕದ ಕಾಶ್ಮೀರ’ ಎಂದೇ ಕರೆಸಿಕೊಳ್ಳುವ ಕೊಡಗು ಜಿಲ್ಲೆ ರಾಜ್ಯದ ಬೊಕ್ಕಸಕ್ಕೆ ಅಪಾರ ಆದಾಯ ತಂದುಕೊಡುತ್ತದೆ. ಇಲ್ಲಿ ಹುಟ್ಟಿ ಹರಿಯುವ ಕಾವೇರಿಯಿಂದಲೇ ಹಲವು ಜಿಲ್ಲೆಗಳು ಬದುಕಿವೆ. ದೇಶದ ಸೇನೆಗೆ ಹಲವು ಧೀಮಂತ ನಾಯಕರನ್ನು ಈ ಜಿಲ್ಲೆ ನೀಡಿದೆ ಎಂದರು.

Leave A Reply

Your email address will not be published.