Kohinoor Diamond : ಕರ್ನಾಟಕದಲ್ಲೇ ಸಿಕ್ಕಿತ್ತು ಕೊಹಿನೂರ್​​ ವಜ್ರ : ದುಸ್ಥಿತಿಯಲ್ಲಿದೆ ಜಗತ್ಪ್ರಸಿದ್ಧ ವಜ್ರ ಸಿಕ್ಕ ಈ ಜಾಗ

ಯಾದಗಿರಿ : Kohinoor Diamond : ಬ್ರಿಟಿನ್​​ ರಾಣಿ ಎರಡನೇ ಎಲೆಜಬೆತ್​ ಮರಣದ ಬಳಿಕ ಕೊಹಿನೂರ್​ ವಿಚಾರವಾಗಿ ಸಾಕಷ್ಟು ಚರ್ಚೆಗಳು ಸೋಶಿಯಲ್​ ಮೀಡಿಯಾದಲ್ಲಿ ಆರಂಭಗೊಂಡಿದೆ. ಈಗಾಗಲೇ ಬ್ರಿಟನ್​ನಲ್ಲಿರುವ ಬೆಲೆಬಾಳುವ ಈ ಕೊಹಿನೂರ್​ ವಜ್ರವನ್ನು ಭಾರತಕ್ಕೆ ವಾಪಾಸ್​ ಕೊಡಿ ಎಂಬ ಬೇಡಿಕೆಗಳೂ ಸಹ ಕೇಳಿ ಬರ್ತಿದೆ. ಅಂದಹಾಗೆ ಬ್ರಿಟನ್​ನ ದೀರ್ಘಾವಧಿ ಕಾಲದ ರಾಣಿ ಎಲೆಜಬೆತ್​ ತನ್ನ ಕಿರೀಟದಲ್ಲಿ ಧರಿಸುತ್ತಿದ್ದ ಈ ಕೊಹಿನೂರ್​​ ವಜ್ರವು ಕರ್ನಾಟಕಕ್ಕೆ ಸೇರಿದ್ದಾಗಿದೆ. ಆದರೆ ಇದೀಗ ಕೊಹಿನೂರ್​ ವಜ್ರ ಸಿಕ್ಕ ಜಾಗವು ಸಂಪೂರ್ಣ ಪಾಳು ಬಿದ್ದಿದೆ.


ಶಹಾಪುರ ತಾಲೂಕಿನ ಕೊಳ್ಳೂರು ಗ್ರಾಮದ ಬಳಿಯಲ್ಲೇ ಇರುವ ಕೃಷ್ಣಾ ನದಿಯ ತಟದಲ್ಲಿ ಈ ಬೆಲೆಬಾಳುವ ವಜ್ರವು ಸಿಕ್ಕಿತ್ತು. ಹೀಗಾಗಿ ಬ್ರಿಟನ್​​ನ ರಾಣಿ ಧರಿಸುತ್ತಿದ್ದ ಬೆಲೆಬಾಳುವ ಕಿರೀಟದಲ್ಲಿ ಕರ್ನಾಟಕದ್ದೂ ಪಾಲಿದೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬಹುದು.


ಬ್ರಿಟನ್​​ನ ರಾಣಿಯಾಗಿದ್ದ 2ನೇ ಎಲಿಜಬೆತ್​​ ಧರಿಸುತ್ತಿದ್ದ ಕಿರೀಟದಲ್ಲಿ 2900 ವಜ್ರದ ಹರಳುಗಳು ಇದ್ದವು. ಇದರಲ್ಲಿ ಅತ್ಯಂತ ಬೆಲೆಬಾಳುವ ವಜ್ರವು ಕೊಹಿನೂರ್​ ಆಗಿತ್ತು.ಈ ಕೊಹಿನೂರ್​ ವಜ್ರವು 105.06 ಕ್ಯಾರೆಟ್​ ಶುಭ್ರತೆಯನ್ನು ಹೊಂದಿದೆ. ಈ ಕಿರೀಟದ ಬೆಲೆಯು ಬರೋಬ್ಬರಿ 4500 ಕೋಟಿ ರೂಪಾಯಿ ಮೌಲ್ಯವಾಗಿದೆ. ಬ್ರಿಟನ್​ನ ರಾಣಿ ಹಾಗೂ ಆಕೆ ಧರಿಸುತ್ತಿದ್ದ ವಜ್ರದ ಕಿರೀಟ ಮತ್ತು ಅದರಲ್ಲಿರುವ ಕೊಹಿನೂರ್​ ವಜ್ರವೆನೋ ಇಷ್ಟೆಲ್ಲ ಪ್ರಸಿದ್ಧಿಯನ್ನು ಪಡೆದಿದೆ. ಆದರೆ ಇಂತಹ ವಜ್ರವನ್ನು ವಿಶ್ವಕ್ಕೆ ಕೊಟ್ಟಂತಹ ಜಾಗ ಮಾತ್ರ ಯಾವುದೇ ಅಭಿವೃದ್ಧಿಯನ್ನು ಕಾಣದೇ ಸಂಪೂರ್ಣ ಪಾಳು ಬಿದ್ದಿದೆ.


ವಿಶ್ವ ಪ್ರಸಿದ್ಧ ಕೊಹಿನೂರ್​ ವಜ್ರವು ಕೃಷ್ಣಾ ನದಿ ದಡದಲ್ಲಿರುವ ಕೊಳ್ಳೂರು ಗಣಿಯಲ್ಲಿ ಸಿಕ್ಕಿತ್ತು ಎಂಬ ವಿಚಾರವನ್ನು ಖ್ಯಾರ ವಜ್ರ ಪರೀಕ್ಷಕ ಡಾ. ಬಾಲೆ ಹಾಗೂ ಲೇಖಕ ರಾಬರ್ಟ್​ ಸಿವಿಲ್​​​ ತಮ್ಮ ಫಾರ್ಗಟನ್​ ಎಂಪೈರ್​ ಎಂಬ ಪುಸ್ತಕದಲ್ಲಿ ವರ್ಣಿಸಿದ್ದಾರೆ. ಈ ಕೃತಿಯಲ್ಲಿರುವ ಮಾಹಿತಿಯ ಪ್ರಕಾರ ಬೆಲೆ ಬಾಳುವ ಕೊಹಿನೂರ್​ ವಜ್ರವು 1656ರಲ್ಲಿ ವಜ್ರದ ಗಣಿ ಮಾಲೀಕ ಮೀರ್​​ ಜುಮುಲಾನಿಗೆ ಸಿಕ್ಕಿತ್ತು. ಈತ ಈ ವಜ್ರವನ್ನು ಗೋಲ್ಕೊಂಡ ಸುಲ್ತಾನನಿಗೆ ನೀಡಿದ್ದ. ಗೋಲ್ಕೊಂಡ ಸುಲ್ತಾನ ಕಾಲಾಂತರದಲ್ಲಿ ಈ ವಜ್ರವನ್ನು ದೆಹಲಿಯ ಸುಲ್ತಾನ ಶಹಜಹಾನನಿಗೆ ಕಾಣಿಕೆ ರೂಪದಲ್ಲಿ ನೀಡಿದ್ದನು ಎನ್ನಲಾಗಿದೆ.


ಇದಾದ ಬಳಿಕ 1739ರಲ್ಲಿ ನಾದಿರ್​ ಶಾ ದೆಹಲಿ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಈ ವಜ್ರವು ಮೊಘಲ್​​ ರಾಜನಿಂದ ಈತನ ಕೈಗೆ ಸೇರಿತ್ತು. ಈತ ಈ ವಜ್ರದ ಸೌಂದರ್ಯವನ್ನು ಕಂಡು ಕೊಹಿನೂರ್​ ಎಂದು ಉದ್ಘರಿಸಿದ್ದನಂತೆ. ಅಂದಿನಿಂದ ಈ ಬೆಲೆಬಾಳುವ ವಜ್ರವು ಕೊಹಿನೂರ್​ ಎಂಬ ಹೆಸರನ್ನುಪಡೆದುಕೊಂಡಿತಯ. 1813ರಲ್ಲಿ ಲಾಹೋರ್​ನ ರಣಜೀತ್​ ಸಿಂಗ್​ಗೆ ಕೊಹಿನೂರ್​ ಉಡುಗೊರೆ ರೂಪದಲ್ಲಿ ಸಿಕ್ಕಿತ್ತು. 1849ರಲ್ಲಿ ಬ್ರಿಟಿಷ್‌ ಅಧಿಕಾರಿ ಸರ್‌ ಜಾನ್‌ ಲಾರೆನ್ಸ್‌ ಪಂಜಾಬ್‌ ಪ್ರಾಂತ್ಯವನ್ನು ವಶಪಡಿಸಿಕೊಂಡಾಗ ಕೊಹಿನೂರ್‌ ವಜ್ರ ಅವನ ಮೂಲಕ ಇಂಗ್ಲೆಂಡ್‌ ರಾಣಿ ಮುಡಿಗೆ ಸೇರಿತ್ತು.

ಇದನ್ನು ಓದಿ : ICC T20 World Cup India Squad : ಸೆಪ್ಟೆಂಬರ್ 16ಕ್ಕೆ ಟೀಮ್ ಇಂಡಿಯಾ ಆಯ್ಕೆ, ವರ್ಲ್ಡ್ ಕಪ್‌ನಲ್ಲಿ ಆಡಲಿರುವ 15 ಮಂದಿ ಆಟಗಾರರು ಇವರೇ..!

ಇದನ್ನೂ ಓದಿ : ICC T20 World Cup India Squad : ಸೆಪ್ಟೆಂಬರ್ 16ಕ್ಕೆ ಟೀಮ್ ಇಂಡಿಯಾ ಆಯ್ಕೆ, ವರ್ಲ್ಡ್ ಕಪ್‌ನಲ್ಲಿ ಆಡಲಿರುವ 15 ಮಂದಿ ಆಟಗಾರರು ಇವರೇ..!

Kohinoor Diamond In Britain Queen Elizabeth 2 Crown Was Extracted From Yadgir District Kollura Village

Comments are closed.