Koragajja: ಮತ್ತೆ ಪವಾಡ ತೋರಿದ ಕೊರಗಜ್ಜ; ಸಮಸ್ಯೆಗೆ ಮುಕ್ತಿ ಸಿಕ್ಕ ಖುಷಿಯಲ್ಲಿ ಅಗೇಲು ಸೇವೆ ನೀಡಿದ ಉಕ್ರೇನ್ ದಂಪತಿ

ಉಡುಪಿ: ತುಳುನಾಡಿನ ದೈವ ಕೊರಗಜ್ಜನ (Koragajja) ಬಗ್ಗೆ ಕೇಳದವರಿಲ್ಲ. ಹಲವಾರು ಪವಾಡಗಳಿಂದಲೇ ತನ್ನ ಇರುವಿಕೆಯನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿರುವ ಕೊರಗಜ್ಜನ ಮೇಲೆ ತುಳುನಾಡಿನ ಜನರಿಗೆ ಎಲ್ಲಿಲ್ಲದ ಪ್ರೀತಿ. ಅಪಾರ ಭಕ್ತಿ. ಆದರೆ ಇತ್ತೀಚಿನ ದಿನಗಳಲ್ಲಿ ಕೊರಗಜ್ಜನ ಪವಾಡ ಉಡುಪಿ, ಮಂಗಳೂರಷ್ಟೆ ಇಲ್ಲ. ಹೊರರಾಜ್ಯ, ಹೊರದೇಶಗಳಿಗೂ ವ್ಯಾಪಿಸಿದೆ. ಅಲ್ಲಿನ ಜನರು ತಮ್ಮ ಕಷ್ಟದ ದಿನಗಳಲ್ಲಿ ಕೊರಗಜ್ಜನನ್ನು ಪ್ರಾರ್ಥಿಸಿ ಹರಕೆ ಸಲ್ಲಿಸುತ್ತಿದ್ದಾರೆ. ಅಂಥದ್ದೇ ಪವಾಡಕ್ಕೆ ಸಾಕ್ಷಿಯಾಗಿದೆ ಉಕ್ರೇನ್ ದಂಪತಿಗಳ ಜೀವನದಲ್ಲಿ ನಡೆದ ಘಟನೆ.

ಇದನ್ನೂ ಓದಿ: Human Sacrifice: ಸತ್ತ ಅಪ್ಪನನ್ನು ಬದುಕಿಸಲು 2 ತಿಂಗಳ ಹಸುಗೂಸನ್ನೇ ಬಲಿ ಕೊಡಲು ಮುಂದಾದ ಮಹಿಳೆ.. ಆಮೇಲೆ ನಡೆದಿದ್ದೇ ಬೇರೆ..

ಉಕ್ರೇನ್ ಕುಟುಂಬವೊಂದು ಶುಕ್ರವಾರ(ನ.11) ರಾತ್ರಿ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅಗೇಲು ಸೇವೆಯನ್ನು ನೀಡಿದೆ. ತಮ್ಮ 6 ವರ್ಷದ ಮಗ ಹೈಶುಗರ್ ನಿಂದ ಬಳಲುತ್ತಿದ್ದು, ಈ ನಿಮಿತ್ತ ಕೊರಗಜ್ಜನ ಕೋಲದಲ್ಲಿ ಕೊಡುವುದಾಗಿ ಹೇಳಿದ್ದ ಹರಕೆಯನ್ನು ತೀರಿಸಿರುವ ಕುಟುಂಬ ಸಂತೃಪ್ತ ಮನೋಭಾವದೊಂದಿಗೆ ಉಕ್ರೇನ್ ಗೆ ಹೊರಡಲು ಸಜ್ಜಾಗಿ ನಿಂತಿದೆ.

ಕಳೆದ ಕೆಲ ತಿಂಗಳ ಹಿಂದೆ ಭಾರತ ಪ್ರವಾಸ ಕೈಗೊಂಡಿದ್ದ ಉಕ್ರೇನ್ ಪ್ರಜೆಗಳಾದ ಆಂಡ್ರೋ, ಪತ್ನಿ ಎಲೆನಾ ತಮ್ಮ ಮಗ ಮ್ಯಾಕ್ಸಿಂ ಉಡುಪಿಯ ಮಲ್ಪೆ ಕಡಲ ತೀರಕ್ಕೆ ಬಂದಿದ್ದರು. ಈ ಸಂದರ್ಭ ಉಡುಪಿಯ ಗೋಶಾಲೆಗೆ ತೆರಳಿದ್ದ ಅವರು ನಾಡಿ ನೋಡಿ ಔಷಧಿ ಕೊಡುವ ಭಕ್ತಿ ಭೂಷಣ್ ಪ್ರಭೂಜಿ ಎಂಬುವರನ್ನು ಭೇಟಿ ಮಾಡಿದ್ದರು. ಅವರ ಬಳಿ ಉಕ್ರೇನ್ ದಂಪತಿ ತಮ್ಮ ಮಗನ ಅನಾರೋಗ್ಯದ ವಿಚಾರವನ್ನು ತಿಳಿಸಿದ್ದಾರೆ. ಗುರೂಜಿ ಸೂಚಿಸಿದಂತೆ ಆತನಿಗೆ ದೇಸಿ ಹಸುವಿನ ಜೊತೆಗೆ ವಿಹಾರ ಸಹಿತ ನಾಟಿ ಚಿಕಿತ್ಸೆಯನ್ನು ಆರಂಭಿಸಿದ್ದರು. ಈ ಹಿನ್ನೆಲೆ ಅವರು ಕಳೆದ 3 ತಿಂಗಳಿನಿಂದ ಗೋವಿನ ತೋಟದ ಶ್ರೀ ರಾಧಾ ಸುರಭೀ ಗೋಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು.

ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ನಡೆದ ಕೊರಗಜ್ಜನ ಕೋಲದಲ್ಲಿ ಭಾಗಿಯಾಗಿದ್ದ ಅವರು ತಮ್ಮ ಮಗನ ಅನಾರೋಗ್ಯವನ್ನು ದೂರ ಮಾಡಿದ್ದಲ್ಲಿ ಉಕ್ರೇನ್ ಗೆ ತೆರಳುವ ಮುನ್ನ ಅಗೇಲು ಸೇವೆ ನೀಡುವುದಾಗಿ ಹರಕೆ ಹೇಳಿಕೊಂಡಿದ್ದರು.

ಇದನ್ನೂ ಓದಿ: SS Rajamouli : ತೆರೆಗೆ ಬರಲಿದೆ ಆರ್‌ಆರ್‌ಆರ್‌ – 2 : ಸಿನಿಮಾದ ಬಗ್ಗೆ ಸುಳಿವು ನೀಡಿದ ಎಸ್‌ ಎಸ್‌ ರಾಜಮೌಳಿ

ಕೊರಗಜ್ಜನ ಪವಾಡ ಎಂಬಂತೆ ಉಕ್ರೇನ್ ದಂಪತಿ ಮಗ ಮ್ಯಾಕ್ಸಿಂ ಸಂಪೂರ್ಣ ಗುಣಮುಖನಾಗಿದ್ದಾನೆ. ಈ ಹಿನ್ನೆಲೆ ಅವರು ಶುಕ್ರವಾರ ರಾತ್ರಿ ನಡೆದ ಕೊರಗಜ್ಜನ ಕೋಲದಲ್ಲಿ ಅಗೇಲು ಸೇವೆ ನೀಡಿದ್ದಾರೆ. ಸದ್ಯ ಮಗ ಸಂಪೂರ್ಣ ಆರೋಗ್ಯವಂತನಾದ ಖುಷಿಯಲ್ಲಿರುವ ಈ ದಂಪತಿ ಹರಕೆಯನ್ನು ಸಲ್ಲಿಸಿದ್ದು, ಇನ್ನೆರಡು ದಿನಗಳಲ್ಲಿ ಟರ್ಕಿಗೆ ಪ್ರಯಾಣ ಬೆಳೆಸಿ, ಅಲ್ಲಿಂದ ಉಕ್ರೇನ್ ಗೆ ತೆರಳಲಿದ್ದಾರೆ.

Koragajja: Koragajja who performed a miracle again; A couple from Ukraine who gave their Agelu service was happy to get rid of the problem

Comments are closed.