Pet animals: ನೊಯ್ಡಾದಲ್ಲಿ ಹೊಸ ರೂಲ್ಸ್: ಸಾಕು ನಾಯಿ ಕಚ್ಚಿದ್ರೆ 10 ಸಾವಿರ ಫೈನ್.. ಗಾಯಾಳುಗಳ ಚಿಕಿತ್ಸೆಯ ವೆಚ್ಚವೂ ಮಾಲೀಕರದ್ದೇ..

ನೊಯ್ಡಾ: Pet animals: ನೊಯ್ಡಾದಲ್ಲಿ ಇತ್ತೀಚೆಗೆ ಸಾಕು ನಾಯಿಗಳ ಕಾಟ ಜೋರಾಗಿದೆ. ಮನೆಯಲ್ಲಿ ಸಾಕಿದ ನಾಯಿಗಳನ್ನು ಹೊರಗೆ ಕರೆದುಕೊಂಡು ಹೋದಲ್ಲಿ ಅಪರಿಚಿತರ ಮೇಲೆ ದಾಳಿ ಮಾಡುವ ಘಟನೆಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದೆ ಲಿಫ್ಟ್ ನಲ್ಲಿ ಬಾಲಕನಿಗೆ ಸಾಕು ನಾಯಿ ಕಚ್ಚಿದ್ದರೂ ಅದನ್ನು ಸಾಕಿದ ಮಹಿಳೆ ಸುಮ್ಮನಿದ್ದ ಸಿಸಿಟಿವಿ ಫೂಟೇಜ್ ವೈರಲ್ ಆಗಿತ್ತು. ತಮ್ಮ ಸಾಕುಪ್ರಾಣಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳದವರ ಮೇಲೆ ಇದೀಗ ನೊಯ್ಡಾ ಆಡಳಿತ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ಇದನ್ನೂ ಓದಿ: Human Sacrifice: ಸತ್ತ ಅಪ್ಪನನ್ನು ಬದುಕಿಸಲು 2 ತಿಂಗಳ ಹಸುಗೂಸನ್ನೇ ಬಲಿ ಕೊಡಲು ಮುಂದಾದ ಮಹಿಳೆ.. ಆಮೇಲೆ ನಡೆದಿದ್ದೇ ಬೇರೆ..

ನೊಯ್ಡಾ ಪ್ರಾಧಿಕಾರವು ಸಾಕುಪ್ರಾಣಿಗಳ ಬಗ್ಗೆ ಹೊಸ ನೀತಿಯನ್ನು ರೂಪಿಸಿದೆ. ಮನೆಯಲ್ಲಿ ಸಾಕಿದ ನಾಯಿ, ಬೆಕ್ಕುಗಳು ಅಪರಿಚಿತರ ಮೇಲೆ ದಾಳಿ ಮಾಡಿದರೆ, ಕಚ್ಚಿದರೆ, ಅವುಗಳ ಮಾಲೀಕರಿಗೆ 10 ಸಾವಿರ ರೂ. ದಂಡ ವಿಧಿಸುವುದಾಗಿ ನೊಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಮನುಷ್ಯರಿಗೆ ಮಾತ್ರವಲ್ಲ, ಒಬ್ಬರ ಸಾಕು ಪ್ರಾಣಿ ಇನ್ನೊಬ್ಬರ ಮನೆಯ ಪ್ರಾಣಿಗಳ ಮೇಲೆ ದಾಳಿ ಮಾಡಿದರೂ ದಂಡ ವಿಧಿಸಲಾಗುತ್ತದೆ. ಮಾತ್ರವಲ್ಲ, ಸಾಕು ಪ್ರಾಣಿಗಳಿಂದ ದಾಳಿಗೊಳಗಾದವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಮಾಲೀಕರು ಭರಿಸಬೇಕು ಎಂದು ಅವರು ಆದೇಶ ಹೊರಡಿಸಿದ್ದಾರೆ.

ಹಾಗೆಯೇ ಸಾಕುಪ್ರಾಣಿಗಳ ಮಾಲೀಕರು ತಮ್ಮ ನಾಯಿ, ಬೆಕ್ಕುಗಳನ್ನು 2013ರ ಜನವರಿ 31ರೊಳಗೆ ಕಡ್ಡಾಯವಾಗಿ ನೋಂದಾವಣಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ದಂಡ ಪಾವತಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಭಾರತದ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗೆ ಅನುಗುಣವಾಗಿ ನೊಯ್ಡಾ ಪ್ರಾಧಿಕಾರದ 207ನೇ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಪ್ರಾಧಿಕಾರದ ಹೊಸ ನಿಯಮದ ಅನುಸಾರ ಸಾಕು ನಾಯಿ, ಬೆಕ್ಕುಗಳ ನೋಂದಣಿಗೆ ಮುಂಬರುವ ಜನವರಿ 31ರವರೆಗೆ ಅವಕಾಶ ನೀಡಲಾಗಿದ್ದು, ನೋಂದಣಿ ಆಗದಿದ್ದಲ್ಲಿ ದಂಡ ತೆರಬೇಕಾಗುತ್ತದೆ. ಇನ್ನು ಸಾಕು ನಾಯಿಗಳಿಗೆ ಆಂಟಿರೇಬಿಸ್ ಲಸಿಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ಪ್ರತಿ ತಿಂಗಳು 2 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: Koragajja: ಮತ್ತೆ ಪವಾಡ ತೋರಿದ ಕೊರಗಜ್ಜ; ಸಮಸ್ಯೆಗೆ ಮುಕ್ತಿ ಸಿಕ್ಕ ಖುಷಿಯಲ್ಲಿ ಅಗೇಲು ಸೇವೆ ನೀಡಿದ ಉಕ್ರೇನ್ ದಂಪತಿ

ಇನ್ನುಳಿದಂತೆ ಬೀದಿ ನಾಯಿಗಳಿಗೆ ಶ್ವಾನಧಾಮ ನಿರ್ಮಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಸಾಕು ನಾಯಿಗಳು ಗಲೀಜು ಮಾಡಿದರೆ ಅದರ ಹೊಣೆಯನ್ನು ಮಾಲೀಕರೇ ವಹಿಸಬೇಕಾಗುತ್ತದೆ. ಅವರೇ ಅದನ್ನು ಸ್ವಚ್ಛಗೊಳಿಸಬೇಕು. ಅಕಸ್ಮಾತ್ ಸಾಕು ನಾಯಿಯು ಯಾರಿಗಾದರೂ ಕಚ್ಚಿದರೆ ಅವರ ವೈದ್ಯಕೀಯ ಚಿಕಿತ್ಸೆಯನ್ನು ಪ್ರಾಣಿಗಳ ಮಾಲೀಕರೇ ಭರಿಸಬೇಕು ಎಂದು ನೊಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ ತಿಳಿಸಿದ್ದಾರೆ.

Pet animals: Noida Authority to Charge Pet Owners Rs 10,000 in Case of Mishap Due to Dog

Comments are closed.