Krishna Janmashtami: ಶ್ರೀ ವಿಧ್ಯೇಶ ವಿದ್ಯಾಮಾನ್ಯ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಬಾರ್ಕೂರು ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಾಲೆಯ LKG.ಮತ್ತು UKG ವಿದ್ಯಾರ್ಥಿ ಗಳಿಗಾಗಿ ಮುದ್ದುಕೃಷ್ಣ ಮತ್ತು ಮುದ್ದುರಾಧಾ ವೇಷ ಸ್ಪರ್ಧೆ ಯನ್ನು ಏರ್ಪಡಿಸಲಾಯಿತು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾರಾದ ಪ್ರೀತಿ ರೇಖಾ ವಹಿಸಿದ್ದರು,

SRSNHP ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಯಾಗಿ ನಿವೃತಿ ಹೊಂದಿದ ಗೌರಿ ಟೀಚರ್ ರವರು ದೀಪ ಬೆಳಗಿಸುವ ಮೂಲಕ ಸ್ಪರ್ಧೆ ಯನ್ನು ಉದ್ಘಾಟಿಸಿ, “ಕೃಷ್ಣಮತ್ತು ರಾಧೆ ಯ ವೇಷ ತೊಟ್ಟ ಮಕ್ಕಳು ನಮ್ಮನ್ನು ದ್ವಾಪರ ಯುಗಕ್ಕೆ ಕರೆದುಕೊಂಡು ಹೋಗಿ ಕೃಷ್ಣ ಮತ್ತು ರಾಧಾ ಲೀಲೆಯನ್ನು ತೋರಿಸಿದರು “ಎಂದಿದ್ದಾರೆ. ಸ್ಪರ್ಧೆ ಯ ತೀರ್ಪುಗಾರ ರಾಗಿ ಉಡುಪಿಯ ಮಾಸ್ಟರ್ ಡ್ರಾಮ್ ದ ಭರತ ನಾಟ್ಯ ಶಿಕ್ಷಕಿ ಕಲ್ಯಾಣಿ ಮತ್ತು S.V.V.N ಹೇರಾಡಿ ಶಾಲೆಯಲ್ಲಿ ಭರತ ನಾಟ್ಯ ಶಿಕ್ಷಕಿ ಯಾದ ಸ್ಮಿತಾ ಶಾಸ್ತ್ರೀ ರವರು ಕಾರ್ಯ ನಿರ್ವಹಿಸಿದ್ದರು. ಶಾಲೆಯ 32 ಮಕ್ಕಳು ವೇಷ ತೊಟ್ಟು ರಂಜಿಸಿದರು.

ಈ ಕಾರ್ಯಕ್ರಮ ವನ್ನು ಶಾಲಾ ಶಿಕ್ಷಕಿ ರಾದ ಚಂದ್ರ ಕಲಾ, ಕುಸುಮ, ಶುಭ ರಾವ್, ಶಾಲಾ ಕಚೇರಿ ಸಹಾಯಕರಾದ ನಾಗರಾಜ್ ಶೇರಿಗಾರ್ ಮತ್ತು ಅಟೆಂಡರ್ ವಿಜಯ ಪೂಜಾರಿ , ಶಾಲಾ ಶಿಕ್ಷಕ, ಶಿಕ್ಷಕೇತರರು ಸಂಯೋಜನೆ ಮಾಡಿ ಸಹಕರಿಸಿದರು. ವಿದ್ಯಾರ್ಥಿ ಗಳಿಗೆ ಮಾಸ್ತರ್ ಡ್ರಾಮಾ ದವರು ವೇಷಭೂಷಣದ ವ್ಯವಸ್ಥೆ ಮಾಡಿಸಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ವಿಶೇಷ ರೀತಿಯ ಉಡುಗೊರೆ ನೀಡಲಾಯಿತು.
ಇದನ್ನೂ ಓದಿ : Soaked Almonds : ಹೃದಯದ ಆರೋಗ್ಯ ಕಾಪಾಡಲು ಸೇವಿಸಿ, ನೀರಿನಲ್ಲಿ ನೆನೆಸಿದ ಬಾದಾಮಿ
Krishna Janmashtami svvn School Barkur