mangalore : ಕೇವಲ ಕಿಸ್​ ಮಾತ್ರವಲ್ಲ, ಸೆಕ್ಸ್​ ಕೂಡ ಮಾಡಿದ್ದ ವಿದ್ಯಾರ್ಥಿಗಳು : ತನಿಖೆ ವೇಳೆ ಹೊರಬಿತ್ತು ಸೆಕ್ಸ್​ ವಿಡಿಯೋದ ಅಸಲಿಯತ್ತು

ಮಂಗಳೂರು : ನಗರದ ಪ್ರತಿಷ್ಠಿತ ಪಿಯು ಕಾಲೇಜಿನ ವಿದ್ಯಾರ್ಥಿಗಳ (Mangalore college students) ಕಿಸ್ಸಿಂಗ್​ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೋಷಕರು ಭಯಪಡುವಂತಾಗಿದೆ. ಒಂದೊಂದು ರೂಪಾಯಿಯನ್ನು ಕೂಡಿಟ್ಟು ಮಕ್ಕಳನ್ನು ದೊಡ್ಡ ದೊಡ್ಡ ಕಾಲೇಜಿಗೆ ಕಳಿಸಿದ್ರೆ ಆ ಮಕ್ಕಳು ಓದೋದು ಬಿಟ್ಟು ಇಂತಹ ಕೆಲಸ ಮಾಡಿದರೆ ಆ ಪೋಷಕರು ಯಾರಲ್ಲಿ ತಮ್ಮ ಕಷ್ಟವನ್ನು ಹೇಳಿಕೊಳ್ಳಬೇಕು. ಒಂದು ವಿಡಿಯೋವೇ ಇಷ್ಟೊಂದು ಭಯ ಹುಟ್ಟಿಸಿರುವ ನಡುವೆಯೇ ಇದೀಗ ವಿಡಿಯೋ ವೈರಲ್ ಮಾಡಿದ ವಿದ್ಯಾರ್ಥಿಯ ಮೊಬೈಲ್​ನಲ್ಲಿ ವಿದ್ಯಾರ್ಥಿಗಳ ಸೆಕ್ಸ್​ ವಿಡಿಯೋ ಪತ್ತೆಯಾಗಿದ್ದು ಇದನ್ನು ನೋಡಿದ ಮಂಗಳೂರು ಸಿಸಿಬಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಕುಡ್ಲದ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ರೂಮೊಂದರಲ್ಲಿ ಟ್ರತ್​ & ಡೇರ್​ ಆಟವಾಡುತ್ತಿದ್ದರು ಎನ್ನಲಾಗಿದೆ. ಟ್ರತ್​ನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿ ಕೇಳುವ ಪ್ರಶ್ನೆಗೆ ಸತ್ಯ ಉತ್ತರವನ್ನು ನೀಡಬೇಕು. ಡೇರ್ ಎಂದು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿ ಅಲ್ಲಿ ಯಾವ ಚಟುವಟಿಕೆಯನ್ನು ಮಾಡು ಎಂದು ಹೇಳುತ್ತಾರೋ ಅದನ್ನು ಮಾಡಬೇಕು. ಇದೇ ಆಟದ ಭಾಗವಾಗಿ ವಿದ್ಯಾರ್ಥಿಗಳು ಲಿಪ್​ ಕಿಸ್​ ಮಾಡಿಕೊಂಡಿದ್ದರು.

ಕಿಸ್​ ಮಾಡಿದ ವಿದ್ಯಾರ್ಥಿ ಹಾಗೂ ಅಲ್ಲಿ ಕುಳಿತಿದ್ದ ವಿದ್ಯಾರ್ಥಿ ಎಲ್ಲರೂ ಇಂಗ್ಲೀಷ್​ನಲ್ಲಿ ಮಾತನಾಡಿದ್ದು ಇವರು ಮಂಗಳೂರಿನ ವಿದ್ಯಾರ್ಥಿಗಳಾ ಅಥವಾ ಬೇರೆ ರಾಜ್ಯಕ್ಕೆ ಸೇರಿದವರಾ ಎಂಬುದು ತನಿಖೆಯಲ್ಲಿ ತಿಳಿದು ಬರಬೇಕಿದೆ. 20 ಸೆಕೆಂಡುಗಳ ಕಿಸ್ಸಿಂಗ್​ ವಿಡಿಯೋ ವೈರಲ್​ ಆದ ಬಳಿಕ ಅಲರ್ಟ್​ ಆದ ಮಂಗಳೂರು ಸಿಸಿಬಿ ಪೊಲೀಸರು ವಿಡಿಯೋ ವೈರಲ್​ ಮಾಡಿದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಈ ವೇಳೆ ಮತ್ತೊಂದು ವಿಡಿಯೋ ಪೊಲೀಸರ ಗಮನಕ್ಕೆ ಬಂದಿದ್ದು ಇದನ್ನೂ ಆತ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಎನ್ನಲಾಗಿದೆ.

ಈ ವಿಡಿಯೋದಲ್ಲಿ ವಿದ್ಯಾರ್ಥಿನಿಯೊಬ್ಬಳು ಸಂಪೂರ್ಣ ಬೆತ್ತಲೆಯಾಗಿದ್ದು ವಿದ್ಯಾರ್ಥಿಯ ಜೊತೆಯಲ್ಲಿ ಸೆಕ್ಸ್​ ಮಾಡಿದ್ದಾಳೆ. ಮೂವರು ಯುವತಿಯರು ಯೂನಿಫಾರಂ ಧರಿಸಿದ್ದರೆ ವಿದ್ಯಾರ್ಥಿಗಳು ಯೂನಿಫಾರಂ ಧರಿಸಿಲ್ಲ. ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಇದು ಯಾರದ್ದೋ ವಿದ್ಯಾರ್ಥಿಗಳ ರೂಮಿನಲ್ಲಿ ಮಾಡಿದ ಕೃತ್ಯವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಈ ಸಂಬಂಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ : Give me 20 mins with Virat Kohli : “ಜಸ್ಟ್ 20 ನಿಮಿಷದಲ್ಲಿ ಕೊಹ್ಲಿ ಸಮಸ್ಯೆಗೆ ಪರಿಹಾರ..” ಸುನೀಲ್ ಗವಾಸ್ಕರ್ ಕೈಯಲ್ಲಿದ್ಯಂತೆ ವಿರಾಟ್ ಯಶಸ್ಸಿನ ಮಂತ್ರ

ಇದನ್ನೂ ಓದಿ : Paneer Butter Masala Trend: ಟ್ವಿಟರ್ ನಲ್ಲಿ ಟ್ರೆಂಡ್ ಆದ ಪನೀರ್ ಬಟರ್ ಮಸಾಲಾ

Mangalore college students nude video goes viral accused arrested

Comments are closed.