ಶಿವಮೊಗ್ಗ : lady constable death : ಪ್ರೀತಿಯಲ್ಲಿ ಬಿದ್ದರು ಅಂದರೆ ಮುಗೀತು. ಅದು ನಮ್ಮಿಂದ ಏನೇನೋ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಿ ಬಿಡುತ್ತದೆ.ಇದೇ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಶಿವಮೊಗ್ಗದಲ್ಲಿ ಮಹಿಳಾ ಪೊಲೀಸ್ ತನ್ನ ಆರು ವರ್ಷದ ಪ್ರೀತಿಗೆ ಜಾತಕ ಅಡ್ಡಿ ಬಂತೆಂದು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯು ವರದಿಯಾಗಿದೆ. ಮೃತ ಸುಧಾ(29) ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ನಿವಾಸಿಯಾಗಿದ್ದು ತೀರ್ಥಹಳ್ಳಿ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿದ್ದರು. ಮೇ 30ರಂದು ಸುಧಾ ವಿಷ ಸೇವನೆ ಮಾಡಿದ್ದು ಬಳಿಕ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುಧಾ ಮೃತಪಟ್ಟಿದ್ದಾರೆ.
ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರವೀಣ್ ಮೊಕಾಶಿ ಹಾಗೂ ಸುಧಾ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಮದುವೆ ವಿಚಾರ ಬಂದಾಗ ಪ್ರವೀಣ್ ಮೊಕಾಶಿ ತಾಯಿ ಲಕ್ಷ್ಮೀ ಸುಧಾರ ಜಾತಕವನ್ನು ಜ್ಯೋತಿಷಿಗಳಿಗೆ ತೋರಿಸಿದ್ದರು. ಜಾತಕ ನೋಡಿದ ಜ್ಯೋತಿಷಿಗಳು ಸುಧಾ ಜಾತಕದಲ್ಲಿ ಕುಜ ದೋಷವಿದ್ದು ಈಕೆಯೊಂದಿಗೆ ಪ್ರವೀಣ್ ವಿವಾಹವಾದರೆ ಆತ ಸಾಯುತ್ತಾನೆ ಎಂದು ಹೇಳಿದ್ದಾರೆ. ಇದರಿಂದ ಭಯಗೊಂಡ ಲಕ್ಷ್ಮೀ ಈ ಮದುವೆ ಬೇಡವೆಂದು ಹೇಳಿದ್ದಾರೆ.
ತಾಯಿ ಹೇಳಿದ ಬಳಿಕ ಪ್ರವೀಣ್ ಕೂಡ ಸುಧಾರನ್ನು ಭೇಟಿಯಾಗಿರಲಿಲ್ಲ. ಮೇ 31ರಂದು ಪ್ರವೀಣ್ರ ಉಬ್ರಾಣಿಯಲ್ಲಿರುವ ಕಚೇರಿಗೆ ತೆರಳಿದ ಸುಧಾ ನೀನು ಮದುವೆಯಾಗದಿದ್ದರೆ ನಾನು ಸಾಯುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರವೀಣ್ ಇಬ್ಬರೂ ಸಾಯೋಣ ಎಂದು ಹೇಳಿ ವಿಷದ ಬಾಟಲಿ ನೀಡಿದ್ದಾರೆ. ಸುಧಾ ಮೊದಲು ವಿಷವನ್ನು ಕುಡಿದಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ ಸುಧಾರವನ್ನು ಮಣಿಪಾಲ್ಗೆ ದಾಖಲಿಸಲಾಗಿತ್ತು. ಆದರೆ ಸುಧಾ ಸಾವಿಗೂ ಮುಂಚೆ ನೀಡಿರುವ ಹೇಳಿಕೆಯ ಪ್ರಕಾರ ನಾನು ಪ್ರವೀಣ್ ವಿಷ ಸೇವಿಸಿದ್ದನ್ನು ನೋಡಿಲ್ಲ ಎಂದಿದ್ದಾರೆ.ಇದು ಎಲ್ಲರಲ್ಲೂ ಪ್ರವೀಣ್ ನಡೆ ಬಗ್ಗೆ ಅನುಮಾನ ಮೂಡಿಸುವಂತೆ ಮಾಡಿದೆ. ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರವೀಣ್ ಹಾಗೂ ಆತನ ತಾಯಿ ಲಕ್ಷ್ಮೀ ವಿರುದ್ಧ ಕೇಸ್ ದಾಖಲಾಗಿದೆ.
ಇದನ್ನು ಓದಿ : Big Exclusive : ಇದೇ ವರ್ಷ ಸುನಿಲ್ ಶೆಟ್ಟಿ ಮಗಳೊಂದಿಗೆ ಕೆ.ಎಲ್ ರಾಹುಲ್ ಮದುವೆ ?
ಇದನ್ನೂ ಓದಿ : ವಿರಾಟ್ ಕೊಹ್ಲಿ ಬಗ್ಗೆ ಶಾಹಿದ್ ಅಫ್ರಿದಿ ಬಾಯಿಂದ ಇದೆಂಥಾ ಮಾತು ?
marriage issue lady constable death in manipal hospital shivamogga