ತಪ್ಪುಗಳಿಂದ ಪಾಠ ಕಲಿಯದ ಬೇಜವಾಬ್ದಾರಿ ಹುಡುಗ !

ಬೆಂಗಳೂರು: ಅನುಭವ ಕಲಿಸುವ ಪಾಠವನ್ನು ಈ ಜಗತ್ತಿನಲ್ಲಿ ಯಾವ ವಿಶ್ವವಿದ್ಯಾನಿಲಯವೂ ಕಲಿಸದು. ಅದು ಜೀವನವಿರಲಿ, ಆಟವಿರಲಿ. ಅನುಭವಕ್ಕಿಂತ ದೊಡ್ಡ ಪಾಠ ಮತ್ತೊಂದಿಲ್ಲ. ಆದರೆ ಟೀಮ್ ಇಂಡಿಯಾದ (Team India) ವಿಕೆಟ್ ಕೀಪರ್ ರಿಷಭ್ ಪಂತ್ (Rishabh pant) ಮಾತ್ರ ಇದಕ್ಕೆ ತದ್ವಿರುದ್ಧ. ಈ ಬೇಜವಾಬ್ದಾರಿ ಹುಡುಗ ಅನುಭವಗಳಿಂದ ಪಾಠ ಕಲಿಯುವುದಿರಲಿ, ಆ ಪ್ರಯತ್ನವನ್ನೇ ಮಾಡುತ್ತಿಲ್ಲ. ಇದು ದಕ್ಷಿಣ ಆಫ್ರಿಕಾ ವಿರುದ್ಧದ 4ನೇ ಟಿ20 ಪಂದ್ಯದಲ್ಲೂ ಸಾಬೀತಾಗಿದೆ.

ರಾಜ್’ಕೋಟ್’ನಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ರಿಷಭ್ ಪಂತ್ (Rishabh pant)ಕೇವಲ 17 ರನ್ ಗಳಿಸಿ ಔಟಾಗಿದ್ದರು. ರಿಷಭ್ ಪಂತ್’ನನ್ನು ಸುಲಭವಾಗಿ ಔಟ್ ಮಾಡುವ ಗುಟ್ಟನ್ನು ಎದುರಾಳಿ ತಂಡದ ಬೌಲರ್’ಗಳು ಅರಿತುಕೊಂಡಿದ್ದಾರೆ. ಆಫ್’ಸ್ಟಂಪ್’ನಿಂದ ಹೊರಗೆ ಚೆಂಡನ್ನೆಸೆದರೆ ದೊಡ್ಡ ಹೊಡೆತಕ್ಕೆ ಮುಂದಾಗುವ ರಿಷಭ್ ಪ್ರತೀ ಬಾರಿಯೂ ಔಟಾಗುತ್ತಿದ್ದಾರೆ. 4ನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್, ಇದೇ ತಂತ್ರ ಅನುಸರಿಸಿ ರಿಷಭ್ ಪಂತೈ ವಿಕೆಟ್ ಪಡೆದಿದ್ದರು.

ರಿಷಭ್ ಪಂತ್ (Rishabh pant) ಅವರ ಈ ಬೇಜವಾಬ್ದಾರಿ ಆಟದ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘’ಈ ವರ್ಷ 10 ಟಿ20 ಪಂದ್ಯಗಳಲ್ಲಿ ರಿಷಭ್ ಪಂತ್ ವೈಡ್ ಆಫ್’ಸ್ಟಂಪ್ ಎಸೆಗಳಿಗೆ ಔಟಾಗಿದ್ದಾರೆ. ಅದರಲ್ಲಿ ಕೆಲ ಎಸೆತಗಳು ವೈಡ್ ಆಗಿದ್ದವು. ಈ ರೀತಿಯ ಆಟ ರಿಷಭ್ ಪಂತ್ ಹಾಗೂ ಟೀಮ್ ಇಂಡಿಯಾ (Team India) ದೃಷ್ಠಿಯಿಂದ ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ’’.

ಇದನ್ನೂ ಓದಿ : ರಣಜಿ ಸೆಮಿಫೈನಲ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಪಾನಿಪುರಿ ಹುಡುಗ

-ಸುನಿಲ್ ಗವಾಸ್ಕರ್, ಮಾಜಿ ಕ್ರಿಕೆಟಿಗ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ 4ನೇ ಕ್ರಮಾಂಕದಲ್ಲಿ ಆಡಿ ದಯನೀಯ ವೈಫಲ್ಯ ಎದುರಿಸಿರುವ ರಿಷಭ್ ಪಂತ್ ನಾಲ್ಕು ಪಂದ್ಯಗಳಿಂದ ಕ್ರಮವಾಗಿ 29, 5, 6 ಹಾಗೂ 17 ರನ್ ಗಳಿಸಿದ್ದಾರೆ.

ಇದನ್ನೂ ಓದಿ : ರಣಜಿ ಸೆಮಿಫೈನಲ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಪಾನಿಪುರಿ ಹುಡುಗ

ಇದನ್ನೂ ಓದಿ : England World record : 50 ಓವರ್‌ಗಳಲ್ಲಿ 498 ರನ್ : ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿಶ್ವದಾಖಲೆ

Rishabh pant irresponsible player not learn from mistakes

Comments are closed.