inauguration of Dussehra : ದಸರಾ ಉದ್ಘಾಟಕರ ಕುರಿತಂತೆ ಮಹತ್ವದ ಹೇಳಿಕೆ ನೀಡಿದ ಸಚಿವ ಎಸ್​.ಟಿ ಸೋಮಶೇಖರ್​​

ಮೈಸೂರು : inauguration of Dussehra : ಮುರುಘಾ ಶರಣರ ವಿರುದ್ಧ ಕೇಳಿ ಬರುತ್ತಿರುವ ಲೈಂಗಿಕ ದೌರ್ಜನ್ಯದ ಆರೋಪದ ಸಂಬಂಧ ಇಂದು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಎಸ್​,ಟಿ ಸೋಮಶೇಖರ್​, ಈ ಪ್ರಕರಣ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಮಾತನಾಡಿದ್ದಾರೆ. ಈ ಪ್ರಕರಣದ ತನಿಖೆಯು ಪ್ರಗತಿಯಲ್ಲಿದೆ. ಪ್ರಕರಣದ ವರದಿ ಏನು ಬರಬಹುದು ಅಂತಾ ನಾವೂ ಎದುರು ನೋಡುತ್ತಿದ್ದೇವೆ. ತನಿಖೆಯಿಂದ ಯಾವ ಮಾಹಿತಿ ಹೊರ ಬರುತ್ತೆ ಅಂತಾ ನಾನು ಕಾತುರದಲ್ಲಿದ್ದೇನೆ. ತನಿಖೆಯಿಂದ ಈ ಪ್ರಕರಣದ ಸತ್ಯಾ ಸತ್ಯತೆ ಹೊರ ಬೀಳಲಿದೆ ಎಂದು ಹೇಳಿದರು.


ಮೈಸೂರು ಮಹಾನಗರ ಪಾಲಿಕೆ ಮೇಯರ್​ ಚುನಾವಣೆ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು , ಈ ಬಗ್ಗೆ ನಮಗೆ ರಾಜ್ಯಾಧ್ಯಕ್ಷರಿಂದ ಈವರೆಗೆ ಯಾವುದೇ ಸೂಚನೆಗಳು ಸಿಕ್ಕಿಲ್ಲ. ಅವರನ್ನು ಭೇಟಿಯಾದ ಬಳಿಕ ಈ ಬಗ್ಗೆ ಚರ್ಚೆ ನಡೆಸುತ್ತೇನೆ. ರಾಜ್ಯ ನಾಯಕರು ಅಥವಾ ಅಧ್ಯಕ್ಷರಿಂದ ಈವರೆಗೆ ಯಾವುದೇ ಸೂಚನೆ ದೊರಕಿಲ್ಲ ಎಂದು ಹೇಳಿದರು.


ಇದೇ ವೇಳೆ ರಾಜ್ಯದಲ್ಲಿ ವರುಣನ ಅಬ್ಬರದ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಮಳೆ ಹಾನಿ ಆಗಿರುವ ಸ್ಥಳಗಳ ಬಗ್ಗೆ ಮಾಹಿತಿ ಪಡೆದಿದ್ದೇವೆ. ಮಳೆ ಹಾನಿ ಪರಿಹಾರ ಸಂಬಂಧ ಸರ್ಕಾರದ ಜೊತೆ ಚರ್ಚೆ ನಡೆದಿದೆ, ನಿನ್ನೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಿಎಂ ನಮಗೆ ಸೂಚನೆ ನೀಡಿದ್ದಾರೆ. ಶೀಘ್ರದಲ್ಲಿಯೇ ನೆರೆ ಪರಿಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಎಸ್​ಟಿ ಸೋಮಶೇಖರ್​ ಹೇಳಿದ್ದಾರೆ.


ವಿಶ್ವ ವಿಖ್ಯಾತ ದಸರಾ ಹಬ್ಬದ ಸಿದ್ಧತೆ ಕುರಿತಾಗಿಯೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ದಸರಾ ಹಬ್ಬಕ್ಕೆ ಯಾವುದೇ ವಿಘ್ನಗಳಿಲ್ಲ, ದಸರಾ ಕಾರ್ಯಕ್ರಮ ಸಾಂಘವಾಗಿ ಸಾಗಲಿದೆ. ಮಳೆ ನಿಂತ ಬಳಿಕ ಕಾಮಗಾರಿಯನ್ನು ಆರಂಭಿಸಲಾಗುತ್ತದೆ. ದಸರಾ ಕಾರ್ಯಕ್ರಮ ಉದ್ಘಾಟಕರು ಯಾರು ಎಂಬುದು ಇನ್ನೂ ಚರ್ಚೆಯಾಗಿಲ್ಲ. ಕಳೆದ ಬಾರಿ ಎಸ್​. ಎಂ ಕೃಷ್ಣ ರಾಜಕೀಯದಿಂದ ನಿವೃತ್ತಿ ಪಡೆದಿದ್ದರಿಂದ ದಸರಾ ಉದ್ಘಾಟನೆ ಮಾಡಿದ್ದರು ಎಂದು ಹೇಳಿದ್ದಾರೆ.

ಇದನ್ನು ಓದಿ : Muruga Swamiji’s statement : ನನ್ನ ವಿರುದ್ಧ ಪಿತೂರಿ ನಡೆದಿದೆ, ಆರೋಪ ಮುಕ್ತನಾಗಿ ಹೊರ ಬರುತ್ತೇನೆ : ಮುರುಘಾ ಶರಣರ ಹೇಳಿಕೆ

ಇದನ್ನೂ ಓದಿ : BIG BREAKING NEWS : ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್‌ : ‘ಜಿಯೋ 5G ಸೇವೆ’ ಘೋಷಿಸಿದ ಮುಕೇಶ್ ಅಂಬಾನಿ |Reliance AGM 2022

Minister ST Somasekhar gave an important statement about the inauguration of Dussehra

Comments are closed.