Buy Bike on your Budget : ಬೈಕ್‌ ಖರೀದಿಸುವ ಬಯಕೆ ಇದ್ದರೆ, ಇಲ್ಲಿ ಹೇಳಿರುವ ಬೈಕ್‌ಗಳನ್ನೊಮ್ಮೆ ಗಮನಿಸಿ: ನಿಮ್ಮ ಬಜೆಟ್‌ನಲ್ಲೇ ಖರೀದಿಸಬಹುದು

ಹೊಸ ಬೈಕ್‌ (Bike) ಖರೀದಿಸುವುದು ಅಥವಾ ಬದಲಿಸುವದು ಬೈಕ್‌ ಪ್ರಿಯರಿಗೆ ಸಾಮಾನ್ಯದ ಸಂಗತಿ. ಅದಕ್ಕಾಗಿಯೇ ಹೊಸ ಹೊಸ ಬೈಕ್‌ಗಳನ್ನು ಕೈಗೆಟಕುವ ದರದಲ್ಲಿ ಆಟೋಮೊಬೈಲ್‌ ಕಂಪನಿಗಳು ಪರಿಚಯಿಸುತ್ತಲೇ ಇರುತ್ತವೆ. ಆದರೆ ಸರಿ ಸುಮಾರು ಒಂದೇ ಶ್ರೇಣಿಯ ಬೈಕ್‌ಗಳ (Bike on your Budget) ಹುಡುಕಾಟದಲ್ಲಿ ನೀವಿದ್ದರೆ ಇಲ್ಲಿ ಹೇಳಿರುವ ಬೈಕ್‌ಗಳನ್ನೊಮ್ಮೆ ಗಮನಿಸಿ. ಬೈಕ್‌ ಖರೀದಿಸಲು ನಿಮಗೆ ಸಹಾಯವಾಗಬಲ್ಲದು.

ಬಜಾಜ್‌ ಪ್ಲಾಟಿನಾ 110


ಇದು ಬಹಳ ಹಿಂದಿನಿಂದಲೂ ಇರುವ ಬೈಕ್‌. ಮತ್ತು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಪ್ರಯಾಣಿಕ ಬೈಕ್‌ಗಳಲ್ಲಿ ಒಂದಾಗಿದೆ. ಪ್ಲಾಟಿನಾ 110 ರ ವಿನ್ಯಾಸವು ಮ್ಯಾಕಾನಿಕಲ್‌ ಆಗಿ ಸಾಕಷ್ಟು ಪ್ರಾಯೋಗಿಕವಾಗಿದೆ. ಇದು 8.44 bhp ಮತ್ತು 9.81 Nm ಅನ್ನು ಹೊರಹಾಕುವ 115.45cc ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಹಾರ್ಡ್‌ವೇರ್ ಸೆಟಪ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಡ್ಯುಯಲ್ ರಿಯರ್ ಸ್ಪ್ರಿಂಗ್‌ಗಳನ್ನು ಒಳಗೊಂಡಿದೆ. ಬಜಾಜ್ ಪ್ಲಾಟಿನಾ 110 ಅನ್ನು ಫ್ರಂಟ್ ಡಿಸ್ಕ್ ಮತ್ತು ಹಿಂಭಾಗದ ಡ್ರಮ್ ಬ್ರೇಕ್ ಸೆಟಪ್‌ನ್ನು ಅಳವಡಿಸಲಾಗಿದೆ. ಇದರ ಬೆಲೆ 69,216 ರೂ. ಆಗಿದೆ.

ಬಜಾಜ್ CT125X


ಬಜಾಜ್ ಆಟೋ ಇತ್ತೀಚೆಗೆ ಭಾರತದಲ್ಲಿ CT125X ಅನ್ನು ಬಿಡುಗಡೆ ಮಾಡಿತು. ಇದು ನೀವು ಭಾರತದಲ್ಲಿ ಖರೀದಿಸಬಹುದಾದ ಅತ್ಯಂತ ಒಳ್ಳೆಯ 125 cc ಬೈಕ್‌ ಇದಾಗಿದೆ. ಇದು 107 bnp ಮತ್ತು 11nm ಟಾರ್ಕ್‌ ಹೊರಹಾಕುವ 124.4cc ಎಂಜಿನ್‌ನಿಂದ ನಿಯಂತ್ರಿಸಿಲ್ಪಡುತ್ತದೆ. ಇದು 5–ಸ್ಪೀಡ್‌ ಗೇರ್‌ ಬಾಕ್ಸ್‌ ಪಡೆದುಕೊಂಡಿದೆ. ಸಿಂಗಲ್‌ ಸಿಲಿಂಡರ್‌, ಏರ್‌ ಕೂಲ್ಡ್‌, ಡಿಟಿಎಸ್‌–ಐ ಎಂಜಿನ್‌ ಇದರ ವಿಶೇಷತೆ. ಬಜಾಜ್‌ CT125 ನ ಎಕ್ಸ್‌ ಶೋ ರೂಂ ಬೆಲೆ 74,554 ರೂ. ಆಗಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್ XTEC


ಸಾಮಾನ್ಯವಾಗಿ ಭಾರತದಲ್ಲಿ ಮನೆಮಾತಾಗಿರುವ ಮೋಟಾರ್‌ಸೈಕಲ್‌ ಎಂದರೆ, ಹೀರೋ ಸ್ಪ್ಲೆಂಡರ್ ಪ್ಲಸ್ XTEC. ಆಕರ್ಷಕ ವಿನ್ಯಾಸ ಇದರ ವಿಶೇಷತೆ. ಇದು 7.91 bhp ಮತ್ತು 8.05 Nm ಅನ್ನು ಅಭಿವೃದ್ಧಿಪಡಿಸುವ 97.2cc ಮೋಟಾರ್ ಅನ್ನು ಪ್ಯಾಕ್ ಮಾಡುತ್ತದೆ. ಇದಲ್ಲದೇ ಹೀರೋ ಇತ್ತೀಚೆಗೆ ಇನ್ನಷ್ಟು ನವೀಕರಣಗೊಂಡಿದೆ. ಸ್ಪ್ಲೆಂಡರ್ ಪ್ಲಸ್, ಬ್ಲೂಟೂತ್ ಸಂಪರ್ಕವನ್ನು ನೀಡುವುದರ ಜೊತೆಗೆ ಸಂಪೂರ್ಣ ಡಿಜಿಟಲ್ ಉಪಕರಣ ಕ್ಲಸ್ಟರ್ ಅನ್ನು ಸಹ ನೀಡುತ್ತದೆ. ಇದರ ಬೆಲೆ 74,928 ರೂಪಾಯಿ.

ಟಿವಿಎಸ್ ರೇಡಿಯನ್


ಟಿವಿಎಸ್ ರೇಡಿಯನ್ (TVS Radeon) ಇದು 8.08 bhp ಮತ್ತು 8.7 Nm ಮಾಡುವ 109.7cc ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಪಡೆದುಕೊಂಡಿದೆ. ಟಿವಿಎಸ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಮತ್ತು ಎಲ್‌ಇಡಿ ಡಿಆರ್‌ಎಲ್‌ನೊಂದಿಗೆ ಟಿವಿಎಸ್‌ ರೇಡಿಯನ್ ವಿನ್ಯಾಸವಾಗಿದೆ. ಇದರ ಸಸ್ಪೆನ್ಶನ್ ಹಾರ್ಡ್‌ವೇರ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಡ್ಯುಯಲ್ ರಿಯರ್ ಶಾಕ್‌ಗಳನ್ನು ಒಳಗೊಂಡಿದೆ. ಇನ್ನು ಇದರ ಬ್ರೇಕಿಂಗ್ ಸೆಟಪ್ ಫ್ರಂಟ್ ಡಿಸ್ಕ್ ಮತ್ತು ರಿಯರ್ ಡ್ರಮ್ ಬ್ರೇಕ್ ಅನ್ನು ಒಳಗೊಂಡಿರುತ್ತದೆ. ಇದರ ಬೆಲೆ 69,409 ರೂ. ಆಗಿದೆ.

ಹೋಂಡಾ ಆಕ್ಟಿವಾ ಪ್ರೀಮಿಯಂ


ಹೋಂಡಾ ಆಕ್ಟಿವಾ ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. ಇದು 7.68 bhp ಮತ್ತು 8.79 Nm ನಲ್ಲಿ ರೇಟ್ ಮಾಡಲಾದ 109cc ಸಿಂಗಲ್-ಸಿಲಿಂಡರ್ ಅನ್ನು ಹೊಂದಿದೆ. ಆಕ್ಟಿವಾ ಪ್ರೀಮಿಯಂ ಎಲ್ಇಡಿ ಹೆಡ್ಲೈಟ್, ಬಾಹ್ಯ ಇಂಧನ ಫಿಲ್ಲರ್ ಕ್ಯಾಪ್, ಎಂಜಿನ್ ಸ್ಟಾರ್ಟ್ ಸ್ಟಾಪ್ ಸ್ವಿಚ್ ಮತ್ತು ಸೀಟ್ ಮತ್ತು ಇಂಧನ ಮುಚ್ಚಳಕ್ಕಾಗಿ ಡ್ಯುಯಲ್-ಫಂಕ್ಷನ್ ಸ್ವಿಚ್ ಮುಂತಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.
ಹೋಂಡಾ ಆಕ್ಟಿವಾ ಪ್ರೀಮಿಯಂನ ಎಕ್ಸ್‌ ಶೋ ರೂಂ ಬೆಲೆ 75,400 ರೂ. ಗಳು.

ಹೀರೋ ಮೆಸ್ಟ್ರೋ ಎಡ್ಜ್ 125


ಕೊನೆಯದಾಗಿ, ನೀವು 125cc ಸ್ಕೂಟರ್‌ ಹುಡುಕುತ್ತಿದ್ದರೆ, ಹೀರೋ ಮೆಸ್ಟ್ರೋ ಎಡ್ಜ್ 125 ಸೂಕ್ತವಾಗಿದೆ. ಇದು 9 bhp ಮತ್ತು 10.4 Nm ಅನ್ನು ಅಭಿವೃದ್ಧಿಪಡಿಸುವ 124.6cc ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಟೆಕ್ಸ್ಚರ್ಡ್ ಸೀಟ್ ಮತ್ತು ಮುಂಭಾಗದ ಏಪ್ರನ್‌ನಲ್ಲಿ ಸಿಗ್ನೇಚರ್ ಎಲ್ಇಡಿ ಲ್ಯಾಂಪ್ ಅನ್ನು ಸಹ ಒಳಗೊಂಡಿದೆ. ಇದರ ಎಕ್ಸ್ ಶೋ ರೂಂ ಬೆಲೆಯು 77,078 ರೂ. ಆಗಿದೆ.

ಇದನ್ನೂ ಓದಿ : Honda Dio Sports : ಹೊಸ ಅಪ್ಡೇಟ್‌ಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾದ ಹೊಂಡಾ ಡಿಯೋ ಸ್ಪೋರ್ಟ್ಸ್‌! ಬೆಲೆ ಜಸ್ಟ್‌ ರೂ. 68,317 !

(Bike on your Budget here are some bikes you can think to buy)

Comments are closed.