ಉಡುಪಿ : ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ಫಿಶ್ ಕಟ್ಟಿಂಗ್ ಮಹಿಳೆಯರಿಗೆ ನಾಡೋಜಾ ಡಾ.ಜಿ.ಶಂಕರ್ ನೆರವಾಗಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರದ ಕೋಡಿಯಿಂದ ಹೆಜಮಾಡಿಯವರೆಗಿನ ಫಿಶ್ ಕಟ್ಟಿಂಗ್ ಶೆಡ್ ಗಳಲ್ಲಿ ಕೆಲಸ ಮಾಡುತ್ತಿದ್ದ 2.600 ಮಹಿಳೆಯರಿಗೆ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ವತಿಯಿಂದ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.

ಮಲ್ಪೆಯ ಕಾರ್ತಿಕ್ ಫಿಶ್ ಕಟ್ಟಿಂಗ್ ಶೆಡ್ ನಲ್ಲಿ ಮಹಿಳೆಯರಿಗೆ ಆಹಾರ ಕಿಟ್ ಗಳನ್ನು ವಿತರಿಸುವ ಮೂಲಕ ಮೀನುಗಾರಿಕಾ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ನಾಡೋಜಾ ಡಾ.ಜಿ.ಶಂಕರ್ ಈಗಾಗಲೇ ಜಿಲ್ಲಾಡಳಿತದ ಮೂಲಕ ವಲಸೆ ಕಾರ್ಮಿಕರು, ಆಟೋ ಚಾಲಕರು, ಕಡುಬಡವರಿಗೆ ಈಗಾಗಲೇ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಅಲ್ಲದೇ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂಧಿಗಳಿಗೆ, ಪೊಲೀಸ್ ಇಲಾಖೆಯ ಸಿಬ್ಬಂಧಿಗಳಿಗೂ ಅಗತ್ಯವಿರುವ ಮಾಸ್ಕ್ ಪೂರೈಸಿದ್ದಾರೆ. ಇದೀಗ ಸಂಕಷ್ಟದಲ್ಲಿರುವ ಫಿಶ್ ಕಟ್ಟಿಂಗ್ ಶೆಡ್ ಗಳ ಮೀನುಗಾರ ಮಹಿಳೆಯರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಿರುವುದನ್ನು ಶ್ಲಾಘಿಸಿದ ಅವರು, ಲಾಕ್ ಡೌನ್ ಅವಧಿಯಲ್ಲಿ ಜನರ ಸಂಕಷ್ಟಕ್ಕೆ ಸ್ಪಂಧಿಸಿದ ಜಿ.ಶಂಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಕೇವಲ ಉಡುಪಿ ಮಾತ್ರವಲ್ಲದೇ ಉಡುಪಿ ಜಿಲ್ಲೆಯ ಎಲ್ಲಾ ಶಾಸಕರುಗಳ ವ್ಯಾಪ್ತಿಯಲ್ಲಿಯೂ ಡಾ.ಜಿ.ಶಂಕರ್ ಅವರು ನೆರವಾಗಿದ್ದಾರೆ ಎಂದಿದ್ದಾರೆ.

ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಶಿವರಾಮ ಕೆ.ಎಂ., ಉದ್ಯಮಿ ಹರಿಯಪ್ಪ ಕೋಟ್ಯಾನ್, ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ, ಕಾರ್ತಿಕ್ ಫಿಶ್ ಕಟ್ಟಿಂಗ್ ಶೆಡ್ ನ ಮಾಲಕರಾದ ಶಂಕರ್ ಸುವರ್ಣ, ಮೊಗವೀರ ಯುವ ಸಂಘಟನೆಯ ಮಾಜಿ ಅಧ್ಯಕ್ಷ ವಿನಯ್ ಕರ್ಕೇರಾ, ಪ್ರಧಾನ ಕಾರ್ಯರ್ಶಿ ರಾಜೇಂದ್ರ ಹಿರಿಯಡ್ಕ, ಉಪಾಧ್ಯಕ್ಷರಾದ ವಿಶಾಲಾಕ್ಷಿ ರಮೇಶ್, ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಶಂಕರ್ ಸಾಲಿಯಾನ್ ಮುಂತಾದವರು ಉಪಸ್ಥಿತರಿದ್ದರು.

ಕುಂದಾಪುರದ ಕೋಡಿಯಿಂದ ಹೆಜಮಾಡಿಯ ವರೆಗಿನ ಫಿಶ್ ಕಟ್ಟಿಂಗ್ ಶೆಡ್ ಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಗಿದೆ. ಕೊರೊನಾ ಸಂಕಷ್ಟದ ನಡುವಲ್ಲಿ ನೆರವಿನ ಸಹಾಯಹಸ್ತ ಚಾಚಿರುವ ನಾಡೋಜಾ ಡಾ.ಜಿ.ಶಂಕರ್ ಅವರ ಕಾರ್ಯಕ್ಕೆ ಫಿಶ್ ಕಟ್ಟಿಂಗ್ ಮಹಿಳೆಯರು ಹಾಗೂ ಮಾಲಕರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.





