ಗ್ರೀನ್ ಝೋನ್ ಉಡುಪಿಯಲ್ಲಿ ಸಡಲಿವಾಯ್ತು ಲಾಕ್ ಡೌನ್ : ಓಡಾಟವಿಲ್ಲ ಬಸ್, ಒಂದು ವಾರ ಸೆಲೂನ್ – ಪಾರ್ಲರ್ ಬಂದ್

0

ಉಡುಪಿ : ಕೊರೊನಾ ವಿರುದ್ದದ ಹೋರಾಟವನ್ನು ಸಮರ್ಥವಾಗಿ ನಿಭಾಯಿಸಿರೊ ಉಡುಪಿ ಜಿಲ್ಲೆ ಕೊರೊನಾ ಮುಕ್ತವಾಗಿದೆ. ಗ್ರೀನ್ ಝೋನ್ ವ್ಯಾಪ್ತಿಯಲ್ಲಿರುವ ಉಡುಪಿಯಲ್ಲಿ ಲಾಕ್ ಡೌನ್ ಆದೇಶವನ್ನು ಸೋಮವಾರದಿಂದಲೇ ಸಡಿಲಗೊಳಿಸಲಾಗುತ್ತಿದೆ. ಲಾಕ್ ಡೌನ್ ಸಡಿಲವಾದ್ರೂ ಒಂದು ವಾರ ಉಡುಪಿಯಲ್ಲಿ ಬಸ್ ಗಳು ಸಂಚರಿಸೋದಿಲ್ಲಾ, ಬ್ಯೂಟಿ ಪಾರ್ಲರ್ ಹಾಗೂ ಸೆಲೂನ್ ಗಳು ಓಪನ್ ಆಗೋದಿಲ್ಲ. ಅಲ್ಲದೇ ಹೊರ ರಾಜ್ಯಗಳಿಂದ ಬರುವವರನ್ನು ಹಾಸ್ಪಿಟಲ್ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ.

ಉಡುಪಿ ಜಿಲ್ಲೆಯನ್ನು ಹಸಿರು ಜಿಲ್ಲೆಯೆಂದು ಘೋಷಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಬಸವರಾಜ್ ಬೊಮ್ಮಾಯಿ ಅವರು ಸಚಿವ ಜಿ.ಜಗದೀಶ್ ಅವರೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಿದ್ರು. ಈ ವೇಳೆಯಲ್ಲಿ ಲಾಕ್ ಡೌನ್ ಆದೇಶದಲ್ಲಿ ಸಡಿಲಗೊಳಿಸುವ ಕುರಿತು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಅಗತ್ಯ ವಸ್ತುಗಳನ್ನು ಪೂರೈಸುವ ಸಲುವಾಗಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಂಗಡಿಗಳನ್ನು ತೆರೆಯಲು ಅನುಮತಿಯನ್ನು ನೀಡಲಾಗಿದ್ದು, ಆಟೋ, ಟ್ಯಾಕ್ಸಿ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಯಾವೆಲ್ಲಾ ಸೌಲಭ್ಯಗಳು ಲಭ್ಯವಾಗುತ್ತೆ ಅನ್ನೋ ಮಾಹಿತಿ ಇಲ್ಲಿದೆ.

  • ಆಟೋ ರಿಕ್ಷಾ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಓರ್ವ ಪ್ಯಾಸೆಂಜರ್ ಮಾತ್ರವೇ ಓಡಾಡಲು ಸೂಚಿಸಲಾಗಿದೆ.
  • ಟ್ಯಾಕ್ಸಿ ಸೇವೆಗೂ ಅವಕಾಶ ನೀಡಲಾಗಿದ್ದು, ಇಬ್ಬರು ಪ್ಯಾಸೆಂಜರ್ ಓಡಾಟಕ್ಕೆ ಸೂಚಿಸಲಾಗಿದೆ.
  • ಅಗತ್ಯ ವಸ್ತುಗಳ ಪೂರೈಕೆಗಾಗಿ ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಅಂಗಡಿ ತೆರೆಯಬಹುದಾಗಿದೆ.
  • ಕಾರ್ಮಿಕರಿಗೆ ಕೆಲಸದ ಸ್ಥಳದಿಂದ ಸ್ವಗ್ರಹಕ್ಕೆ ಹೋಗಲು ಸಂಜೆ 5 ರಿಂದ 7 ಗಂಟೆ ವರೆಗೆ ಅವಕಾಶ ಕಲ್ಪಿಸಲಾಗಿದೆ.
  • ಕಟ್ಟಡ ಸಾಮಗ್ರಿಗಳ ಸಾಗಾಟಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.
  • ಕಟ್ಟಡ ಕಾರ್ಮಿಕರು ಮತ್ತು ದಿನಗೂಲಿ ನೌಕರರ ಸಾಗಾಟಕ್ಕೆ (ಶೇ.50 ಸಾಮರ್ಥ್ಯ) ವಾಹನ ಬಳಕೆಗೆ ಜಿಲ್ಲಾ ಎಸ್ಪಿ ಅವರ ಅನುಮತಿ ಕಡ್ಡಾಯ
  • ಮದುವೆ ಸಮಾರಂಭದಲ್ಲಿ ಸ್ವಗೃಹದಲ್ಲಿ 10 ಜನರು ಮೀರದಂತೆ ನಡೆಸಲು ಅವಕಾಶ
  • ಡೆಂಟಲ್ ಕ್ಲೀನಿಕ್ ತೆರೆಯಲು ಲಾಕ್ ಡೌನ್ ಅವಧಿಯವರೆಗೂ ಅವಕಾಶವಿಲ್ಲ.
  • ಖಾಸಗಿ ಬಸ್ಸುಗಳ ಓಡಾಟಕ್ಕೆ ಒಂದು ವಾರದ ನಂತರ ಅವಕಾಶ ಕಲ್ಪಿಸಲಾಗಿದೆ.
  • ಹೇರ್ ಸೆಲ್ಯೂನ್ ಹಾಗೂ ಬ್ಯೂಟಿ ಪಾರ್ಲರ್ ತೆರೆಯಲು ಒಂದು ವಾರಗಳ ನಂತರ ಅವಕಾಶ.

ಮಾತ್ರವಲ್ಲ ಹೊರರಾಜ್ಯಗಳಿಗೆ ತೆರಳ ಬಯಸುವವರು ಕಡ್ಡಾಯವಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಪ್ರಯಾಣಕ್ಕೆ ಅನುಮತಿಯನ್ನು ಪಡೆಯುಬಹುದಾಗಿದೆ. ಅಲ್ಲದೇ ಹೊರ ರಾಜ್ಯದಿಂದ ಬಂದವರನ್ನು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ನಡೆಸಲು ಅನುಮತಿ ನೀಡುವ ಬದಲು ಹಾಸ್ಪಿಟಲ್ ಕ್ವಾರನ್ ಟೈನ್ ಹಾಗೂ ಇನ್ಸ್ಟಿಟ್ಯೂಷನಲ್ ಕ್ವಾರನ್ ಟೈನ್ ಹಾಗೂ ಹೋಟೆಲ್ ಗಳಲ್ಲಿ ಕ್ವಾರನ್ ಟೈನ್ ಮಾಡುವ ಬಗ್ಗೆ ತೀರ್ಮಾನಿಸಲಾಯಿತು ಮತ್ತು ಇದರ ತಯಾರಿಗಾಗಿ ಪ್ರತಿ ಪಂಚಾಯಿತಿಗಳಲ್ಲಿ 50 ಜನರ ವಾಸ್ತವ್ಯಕ್ಕೆ ಬೇಕಾಗುವ ಶಾಲೆ ಮತ್ತು ಹಾಸ್ಟೆಲ್ ಕಳನ್ನು ಗುರುತಿಸುವಂತೆ ಎ.ಸಿ ಅವರಿಗೆ ಅಧಿಕಾರ ನೀಡಲಾಯಿತು.

ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರಘುಪತಿ ಭಟ್, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುನಿಲ್ ಕುಮಾರ್, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸುಕುಮಾರ್ ಶೆಟ್ಟಿ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್. ಮೆಂಡನ್, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀನಿವಾಸ್ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು, ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್, ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಪ್ರೀತಿ ಗೆಲ್ಹೋಟ್, ಅಪಾರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎನ್. ವಿಷ್ಣುವರ್ಧನ್ ಮತ್ತು ಜಿಲ್ಲಾ ನೋಡಲ್ ಅಧಿಕಾರಿಗಳಾದ ಪ್ರಶಾಂತ್ ಭಟ್ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳು, ಸಹಾಯಕ ಆಯುಕ್ತರು ಉಪಸ್ಥಿತರಿದ್ದರು.

Leave A Reply

Your email address will not be published.