ಯುಎಇಯಿಂದ ತಾಯ್ನಾಡಿಗೆ ಮರಳಲು 32,000 ಭಾರತೀಯರ ನೋಂದಣಿ !

0

ದುಬೈ : ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತೀಯರನ್ನು ದೇಶಕ್ಕೆ ಕರೆತರಲು ಕೇಂದ್ರ ಸರಕಾರ ಮುಂದಾಗಿದೆ. ಈ ಬೆನ್ನಲ್ಲೇ ಗಲ್ಪ್ ರಾಷ್ಟ್ರಗಳಲ್ಲಿ ವಲಸಿಗರ ಮರು ನೋಂದಣಿ ಅಭಿಯಾನ ಆರಂಭವಾಗಿದ್ದು, ಸುಮಾರು 32,000 ಮಂದಿ ಭಾರತೀಯರು ದೇಶಕ್ಕೆ ಮರಳಲು ನೋಂದಣಿ ಮಾಡಿಸಿದ್ದಾರೆ.

ಗಲ್ಪ್ ರಾಷ್ಟ್ರಗಳು ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ತಮ್ಮ ದೇಶದಲ್ಲಿರುವ ವಿದೇಶಿಗರು ತಮ್ಮ ತಮ್ಮ ದೇಶಗಳಿಗೆ ಮರಳುವಂತೆ ಖಡಕ್ ಆದೇಶ ಹೊರಡಿಸಿವೆ. ಇದರ ಬೆನ್ನಲ್ಲೇ ಕೇಂದ್ರ ಸರಕಾರ ವಿದೇಶದಲ್ಲಿರುವ ತನ್ನ ಪ್ರಜೆಗಳನ್ನು ದೇಶಕ್ಕೆ ಕರೆತರಲು ಮುಂದಾಗಿದೆ.

ಅಲ್ಲದೇ ರಾಜ್ಯ ಸರಕಾರಗಳಿಗೂ ಕೂಡ ಸೂಚನೆಯನ್ನು ನೀಡಿತ್ತು. ಯುಎಇಯ ರಾಯಭಾರ ಕಚೇರಿಯಲ್ಲಿ ತಾಯ್ನಾಡಿಗೆ ಮರಳುವವರ ನೋಂದಣಿ ಕಾರ್ಯ ಆರಂಭಗೊಂಡಿದೆ. ಈಗಾಗಲೇ ಸುಮಾರು 32,000ಕ್ಕೂ ಅಧಿಕ ಮಂದಿ ನೋಂದಣಿಯನ್ನು ಮಾಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ದುಬೈನಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ವೃದ್ದರು, ಗರ್ಭಿಣಿಯರು, ಮಕ್ಕಳು ಸೇರಿದಂತೆ ತುರ್ತು ವೈದ್ಯಕೀಯ ಸೌಲಭ್ಯದ ಅಗತ್ಯವಿರುವವರನ್ನು ತುರ್ತಾಗಿ ದೇಶಕ್ಕೆ ಕರೆತರುವ ಪ್ಲ್ಯಾನ್ ನಲ್ಲಿದೆ ಕೇಂದ್ರ ಸರಕಾರ. ದುಬೈನಲ್ಲಿ ನೆಲೆಸಿರುವವರ ವೀಸಾ ಅವಧಿ ಮುಕ್ತಾಯವಾಗಿದ್ದು, ಭಾರತಕ್ಕೆ ಮರಳಲೇ ಬೇಕಾದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ನಡುವಲ್ಲೇ ನೋಂದಣಿ ಕಾರ್ಯ ಆರಂಭವಾಗಿರೋದ್ರಿಂದಾಗಿ ಭಾರತಕ್ಕೆ ಮರಳಲು ಉತ್ಸುಕರಾಗಿದ್ದಾರೆ.

Leave A Reply

Your email address will not be published.