MP Sumalatha Ambarish : ಮಳೆ ಹಾನಿ ಕುರಿತಂತೆ ಸುಮಲತಾ ಅಂಬರೀಶ್​ ನಿರ್ಲಕ್ಷ್ಯ : ಜನತೆಯ ಆಕ್ರೋಶದ ಬಳಿಕ ಎಚ್ಚೆತ್ತ ಸಂಸದೆ

ಮಂಡ್ಯ : MP Sumalatha Ambarish : ಸಕ್ಕರೆ ನಾಡಿನಲ್ಲಿ ಕಳೆದ ಬಾರಿ ಲೋಕಸಭಾ ಕಣ ಎಷ್ಟೊಂದು ಜಿದ್ದಾ ಜಿದ್ದಿನಿಂದ ಕೂಡಿತ್ತು ಅನ್ನೋದು ಎಲ್ಲರಿಗೂ ಈಗಲೂ ನೆನಪಿನಲ್ಲಿದೆ. ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಪುತ್ರ ನಿಖಿಲ್​ ಕುಮಾರಸ್ವಾಮಿ ಹಾಗೂ ಅಂಬರೀಶ್​ ಪತ್ನಿ ಹಾಗೂ ನಟಿ ಸುಮಲತಾ ನಡುವೆ ಚುನಾವಣಾ ಕದನ ಎಷ್ಟರ ಮಟ್ಟಿಗೆ ರೋಚಕವಾಗಿತ್ತು ಅಂದರೆ ಇಡೀ ರಾಜ್ಯವೇ ಮಂಡ್ಯ ಜಿಲ್ಲೆಯ ಲೋಕಸಭಾ ಚುನಾವಣೆಯ ಫಲಿತಾಂಶ ಏನಾಗಬಹುದು ಎಂದು ತಿರುಗಿ ನೋಡುವಂತೆ ಮಾಡಿತ್ತು .


ಜೆಡಿಎಸ್​ ನಾಯಕರ ಯಡವಟ್ಟು ಹೇಳಿಕೆಗಳು ಹಾಗೂ ಅಂಬರೀಶ್​ ಮೇಲಿನ ಅಭಿಮಾನ ಮತ್ತು ದರ್ಶನ್​, ಯಶ್​​ರ ಸಾಥ್​ನಿಂದಾಗಿ ಸುಮಲತಾ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಅಂತರದಿಂದಲೇ ಗೆಲುವು ಸಾಧಿಸಿದ್ದರು. ಆದರೆ ಇದಾದ ಬಳಿಕ ಮಂಡ್ಯ ಜನತೆಯ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಸುಮಲತಾ ಪದೇ ಪದೇ ಎಡವುತ್ತಿದ್ದಾರೆ. ಮಂಡ್ಯದಲ್ಲೊಂದು ಮನೆ ಮಾಡುತ್ತೇನೆ, ನನ್ನ ಕ್ಷೇತ್ರದ ಜನತೆಯ ಜೊತೆಯೇ ಇರುತ್ತೇನೆ ಎಂದೆಲ್ಲ ಹೇಳಿ ಮನೆಯನ್ನೂ ಕಟ್ಟಿಸಿರುವ ಸ್ವಾಭಿಮಾನಿ ಸಂಸದೆ ಸುಮಲತಾ ತಮ್ಮ ಭರವಸೆಗಳನ್ನು ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿಟ್ಟಿದ್ದಾರಾ ಎಂಬ ಅನುಮಾನ ಶುರುವಾಗಿದೆ.


ಇದೀಗ ನೆರೆ ಹಾನಿ ವಿಚಾರದಲ್ಲಿಯೂ ಸಂಸದೆ ಸುಮಲತಾ ಅಂಬರೀಶ್​ ಮಂಡ್ಯ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸದ್ಯ ಭಾರೀ ಪ್ರಮಾಣದಲ್ಲಿ ಮಳೆಯಾಗ್ತಿದೆ. ಮಂಡ್ಯ ಜಿಲ್ಲೆ ಕೂಡ ಇದಕ್ಕೆ ಹೊರತಾಗಿಲ್ಲ. ನಾಲ್ಕೈದು ದಿನದ ಮಳೆಯಿಂದಾಗಿ ಮಂಡ್ಯದ ಅನೇಕ ಕಡೆಗಳಲ್ಲಿ ಅವಾಂತರವೇ ಸೃಷ್ಟಿಯಾಗಿದೆ. ನೂರಾರು ಎಕರೆ ಬೆಳೆ ನಾಶವಾಗಿದೆ, ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಕೂಡ ಹಾನಿಯಾಗಿದೆಲ. ಮಂಡ್ಯದಲ್ಲಿ ಇಷ್ಟೆಲ್ಲ ಅವಾಂತರಗಳು ಸೃಷ್ಟಿಯಾಗಿದ್ದರೂ ಸಹ ಸುಮಲತಾ ಅಂಬರೀಶ್​ ಸೌಜನ್ಯಕ್ಕೂ ಸ್ವಕ್ಷೇತ್ರಕ್ಕೆ ಭೇಟಿ ನೀಡಿರಲಿಲ್ಲ. ಹಾನಿಗೊಳಗಾದ ಸ್ಥಳಗಳ ಬಗ್ಗೆ ಫೇಸ್​ಬುಕ್​ನಲ್ಲಿ ಪೋಸ್ಟ್​ ಹಾಕಿ ಸುಮಲತಾ ಸುಮ್ಮನಾಗಿದ್ದರು .


ಮಂಡ್ಯ ಜಿಲ್ಲೆಯಲ್ಲಿ ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿದ್ದರೂ ಸಹ ಮನೆಯಲ್ಲಿಯೇ ಕುಳಿತು ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆಂದಿದ್ದ ಸುಮಲತಾ ವಿರುದ್ಧ ಸೋಶಿಯಲ್​ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮುಂದಿನ ಚುನಾವಣೆಯಲ್ಲಿಯೂ ಮನೆಯಲ್ಲಿಯೇ ಕುಳಿತು ಮತಯಾಚನೆ ಮಾಡಿ ಎಂದು ಸೋಶಿಯಲ್​ ಮೀಡಿಯಾದಲ್ಲಿ ಜನತೆಯ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಸುಮಲತಾ ಎಚ್ಚೆತ್ತಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸುಮಲತಾ ಇಂದು ಮಧ್ಯಾಹ್ನ 3 ಗಂಟೆಗೆ ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ಕರೆದಿದ್ದಾರೆ. ಅಧಿಕಾರಿಗಳ ಜೊತೆಯಲ್ಲಿ ಇಂದು ಜಿಲ್ಲೆಯಲ್ಲಿ ಉಂಟಾಗಿರುವ ಮಳೆ ಹಾನಿ ಪರಿಹಾರ ಕಾರ್ಯದ ಬಗ್ಗೆ ಸುಮಲತಾ ಚರ್ಚೆ ನಡೆಸಲಿದ್ದಾರೆ .

ಇದನ್ನು ಓದಿ : Hubli Eidga Maidan : ಹುಬ್ಬಳ್ಳಿ ಈದ್ಗಾ ಮೈದಾನದ ಗಣೇಶ್ ಪೆಂಡಾಲ್ ನಿಂದ ಸಾವರ್ಕರ್ ಫ್ಲೆಕ್ಸ್, ಫೋಟೋ ಎತ್ತಂಗಡಿ

ಇದನ್ನೂ ಓದಿ : wife commits suicide : ಪತಿಯಿಂದಲೇ ಪತ್ನಿಗೆ ಜಾತಿ ನಿಂದನೆ :ಮನನೊಂದ ಗೃಹಿಣಿ ಆತ್ಮಹತ್ಯೆಗೆ ಶರಣು

MP Sumalatha Ambarish called a meeting with officials in Mandya

Comments are closed.