Food to Increase Vitamin B-12 : ವಿಟಮಿನ್‌ ಬಿ–12 ಹೆಚ್ಚಿಸುವ ಆಹಾರಗಳು : ನಿಮ್ಮ ನಿಶ್ಯಕ್ತಿಯ ಸಮಸ್ಯೆಗೆ ಇಲ್ಲಿದೆ ಪರಿಹಾರ

ವಿಟಮಿನ್‌ ಬಿ–12 (Vitamin B-12), ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳಲ್ಲಿ ಒಂದಾಗಿದೆ. ನಿಮಗೆ ಯಾವಾಗಲೂ ಆಲಸ್ಯ ಮತ್ತು ಸೋಮಾರಿತನದ (Lazy and Lethargic) ಅನುಭವ ಆಗುತ್ತಾ ಇರುತ್ತದೆಯೇ? ದಿನಪೂರ್ತಿ ದೇಹ ಆಯಾಸದಿಂದ (tiredness) ಕೂಡಿರುತ್ತದೆಯೆ? ಇದು ಸ್ಪಷ್ಟವಾಗಿ ವಿಟಮಿನ್‌ ಬಿ12 ಕೊರತೆಯ ಸಂಕೇತ. ವಿಟಮಿನ್‌ ಬಿ12, ದೇಹದ ಸುಗಮ ಮತ್ತು ಸರಿಯಾದ ಕಾರ್ಯನಿರ್ವಹಣೆಗೆ ಅಗತ್ಯವಿರುವ ಪೋಷಕಾಂಶಗಳಲ್ಲಿ ಒಂದಾಗಿದೆ. ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್‌ ಬಿ12 ಇದ್ದಾಗ ದೇಹದ ಜೀವಕೋಶಗಳು ಅಂದರೆ ಕೆಂಪು ರಕ್ತ ಕಣಗಳು ಮತ್ತು ಗ್ಲಿಯಲ್ ನರವನ್ನು ರಕ್ಷಿಸುವ ಕೋಶಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಈ ಪೋಷಕಾಂಶವನ್ನು ನಾವು ಸ್ವಂತವಾಗಿ ತಯಾರಿಸುವುದಿಲ್ಲ. ಇದನ್ನು ನಮ್ಮ ಆಹಾರದ (Vitamin B-12) ಮೂಲಕವೇ ಪಡೆಯಬೇಕು.

ವಿಟಮಿನ್‌ ಬಿ–12 ಏಕೆ ಬೇಕು?
ವಿಟಮಿನ್‌ ಬಿ12 ಚಯಾಪಚಯ ಕ್ರಿಯೆ ಹೆಚ್ಚಿಸಲು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ದಿನವಿಡೀ ಚೈತನ್ಯದಿಂದ ಇರುವಂತೆ ಮಾಡಲು ನಮಗೆ ಅವಶ್ಯಕ. ಕೋಬಾಲಾಮಿನ್‌ ಅನ್ನುವುದು ಇದರ ಇನ್ನೊಂದು ಹೆಸರು.

ನಮ್ಮ ದೇಹಕ್ಕೆ ವಿಟಮಿನ್‌ ಬಿ–12 ಎಷ್ಟು ಬೇಕು?
ಪೌಷ್ಟಿಕತಜ್ಞರ ಪ್ರಕಾರ, 15 ವರ್ಷಕ್ಕಿಂತ ಮೇಲ್ಪಟ್ಟ ಹೆಚ್ಚಿನ ಜನರಿಗೆ ಕೆಲಸಗಳನ್ನು ನಿರ್ವಹಿಸಲು, ಲಿವರ್‌ನಲ್ಲಿ ಸಂಗ್ರಹವಾಗಿರುವ ಸುಮಾರು 2.4 ಮೈಕ್ರೋಗ್ರಾಂಗಳಷ್ಟು ಬಿ–12 ಅಗತ್ಯವಿದೆ. ನೀವು ಒಂದು ವೇಳೆ ಅಷ್ಟು ಪ್ರಮಾಣದ ಬಿ–12 ಅನ್ನು ಸೇವಿಸದೇ ಇದ್ದರೆ, ಜ್ಞಾಪಕ ತೊಂದರೆಗಳು ಮತ್ತು ನರಗಳ ಹಾನಿಯನ್ನು ಒಳಗೊಂಡಿರುವ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅದಕ್ಕಾಗಿಯೇ, ನಿಸರ್ಗದಲ್ಲಿಯೇ ದೊರಕುವ ಆಹಾರಗಳನ್ನು ಸೇವಿಸಿ ವಿಟಮಿನ್‌ ಬಿ–12 ಕೊರತೆಯನ್ನು ನಿವಾರಿಸಿಕೊಳ್ಳಬಹುದು.

ಇದನ್ನೂ ಓದಿ : Dates Fruit : ಖರ್ಜೂರ ತಿನ್ನುವಾಗ ನೀವು ಈ ತಪ್ಪುಗಳನ್ನು ಮಾಡ್ಲೇಬೇಡಿ

ವಿಟಮಿನ್‌ ಬಿ–12 ಹೆಚ್ಚಿಸುವ ಆಹಾರಗಳು :

ಡೈರಿ:
ಹಾಲು ಮತ್ತು ಅದರ ಉತ್ಪನ್ನಗಳನ್ನು, ವಿಟಮಿನ್ ಬಿ–12 ನ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೆ ಮೂಳೆಗಳು ಮತ್ತು ಕೀಲುಗಳನ್ನು ಬಲಪಡಿಸಲು ತಜ್ಞ ವೈದ್ಯರು ಹಾಲನ್ನು ಪ್ರತಿದಿನ ಸೇವಿಸುವಂತೆ ಸಲಹೆ ನೀಡುತ್ತಾರೆ. ಸಸ್ಯಾಹಾರಿಗಳು ಅದನ್ನು ಸಸ್ಯಾಧಾರಿತ ಸೋಯಾ ಅಥವಾ ಓಟ್ ಹಾಲಿನೊಂದಿಗೆ ಬದಲಾಯಿಸಿಕೊಳ್ಳಬಹುದು. ಯುಎಸ್‌ಡಿಏ ಪ್ರಕಾರ, ದಿನವೊಂದಕ್ಕೆ ಒಂದು ಕಪ್ ಸೋಯಾ ಹಾಲು ಶಿಫಾರಸು ಮಾಡಲಾಗಿದೆ. ಇದು 45 ಪ್ರತಿಶತ ವಿಟಮಿನ್‌ ಬ9–12 ಒದಗಿಸುತ್ತದೆ.

ಧಾನ್ಯಗಳು:
ಸಸ್ಯಾಹಾರಿಗಳು ತಮ್ಮ ದೈನಂದಿನ ಬಿ–12 ಸೇವನೆಯನ್ನು ಹೆಚ್ಚಿಸಿಕೊಳ್ಳಲು ಧಾನ್ಯಗಳು ಉತ್ತಮ ಮಾರ್ಗವಾಗಿದೆ. ಪೌಷ್ಟಿಕಾಂಶದ ಏಕದಳ ಧಾನ್ಯಗಳು, ಯೀಸ್ಟ್ ಮತ್ತು ತೋಫುಗಳಂತಹ ಆಹಾರಗಳು ವಿಟಮಿನ್‌–12ನ ಉತ್ತಮ ಮೂಲಗಳಾಗಿವೆ.

ಮೊಟ್ಟೆಗಳು:
ಪೌಷ್ಟಿಕತಜ್ಞರ ಪ್ರಕಾರ, ಒಂದು ಬೇಯಿಸಿದ ಮೊಟ್ಟೆ ಸುಮಾರು 0.6 ಮೈಕ್ರೋಗ್ರಾಂಗಳಷ್ಟು ಬಿ–12 ಅನ್ನು ನೀಡಬಲ್ಲದು. ಮೊಟ್ಟೆಯ ಹಳದಿ ಭಾಗವು ಅತಿ ಹೆಚ್ಚಿನ ವಿಟಮಿನ್‌ ಬಿ–12 ಹೊಂದಿರುತ್ತದೆ. ಇದು ನಿಮಗೆ ದೈನವೊಂದಕ್ಕೆ ಸುಮಾರು 25 ಪ್ರತಿಶತ ವಿಟಮಿನ್‌–12 ನೀಡುತ್ತದೆ.

ಚಿಕನ್ :
ಚಿಕನ್‌ ಬಿ–12 ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಹೆಚ್ಚಿನ ಪ್ರೋಟೀನ್‌ನ ಹೊರತಾಗಿ, ಚಿಕನ್‌ನಲ್ಲಿ ವಿಟಮಿನ್‌ಗಳು ಅಧಿಕವಾಗಿದೆ. ಸುಮಾರು 75 ಗ್ರಾಂ ಚಿಕನ್‌ ಕನಿಷ್ಠ 0.3 ಮೈಕ್ರೋಗ್ರಾಂಗಳಷ್ಟು ಬಿ–12 ಅನ್ನು ಒದಗಿಸುತ್ತದೆ.

ಇದನ್ನೂ ಓದಿ : Soaked Almonds : ಹೃದಯದ ಆರೋಗ್ಯ ಕಾಪಾಡಲು ಸೇವಿಸಿ, ನೀರಿನಲ್ಲಿ ನೆನೆಸಿದ ಬಾದಾಮಿ

(Food to Increase Vitamin B-12 include in your diet)

Comments are closed.