ಮಂಗಳೂರು : Kanhaiya Lal led to Praveen’s murder : ದೇಶದಲ್ಲಿ ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಸಾವು ನೋವಿನ ಪ್ರಕರಣಗಳು ಹೆಚ್ಚುತ್ತಲೇ ಇರುವುದು ಸಾಕಷ್ಟು ಆತಂಕಕ್ಕೆದೂಡಿದೆ. ಅಂದು ಶರತ್ ಮಡಿವಾಳ ಹತ್ಯೆ, ಮೊನ್ನೆ ಮೊನ್ನೆ ಶಿವಮೊಗ್ಗದ ಹರ್ಷ ಕೊಲೆ ಪ್ರಕರಣ ಹಾಗೂ ಇಂದು ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಗಳು ಜನರನ್ನು ಹಿಂದೂ ಪರ ಸಂಘಟನೆಗಳತ್ತ ಧ್ವನಿ ಎತ್ತಲು ಹೆದರುವಂತೆ ಮಾಡಿದೆ. ಹಿಂದೂ ಪರ ಸಂಘಟನೆಗಳ ಕಾರ್ಯದಲ್ಲಿ ಸಕ್ರಿಯನಾಗಿದ್ದ ಪ್ರವೀಣ್ ನೆಟ್ಟೂರು ರಾತ್ರಿ ತಮ್ಮ ಕೋಳಿ ಅಂಗಡಿಯನ್ನು ಬಂದ್ ಮಾಡಿ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಪರ ಪೋಸ್ಟ್ ಮಾಡಿ ಟೇಲರ್ ಕನ್ಹಯ್ಯ ಲಾಲ್ ಕೊಲೆಯಾಗಿದ್ದರು. ಕನ್ಹಯ್ಯ ಲಾಲ್ ಅಂಗಡಿಗೆ ಹಾಡ ಹಗಲೇ ನುಗ್ಗಿದ ದುಷ್ಕರ್ಮಿಗಳು ಬಟ್ಟೆ ಹೊಲಿಸುವ ನೆಪದಲ್ಲಿ ಕನ್ಹಯ್ಯ ಲಾಲ್ರನ್ನು ಸೀಳಿದ್ದರು. ಈ ಪ್ರಕರಣದ ಬಳಿಕ ಪ್ರವೀಣ್ ನೆಟ್ಟಾರು ಸೋಶಿಯಲ್ ಮೀಡಿಯಾದಲ್ಲಿ ಕನ್ಹಯ್ಯಲಾಲ್ ಪರವಾಗಿ ಪೋಸ್ಟ್ ಶೇರ್ ಮಾಡಿದ್ದರು. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಹೀಗಾಗಿ ಇದೇ ಕಾರಣಕ್ಕೆ ಕನ್ಹಯ್ಯ ಲಾಲ್ ಮಾದರಿಯಲ್ಲಿ ಪ್ರವೀಣ್ ನೆಟ್ಟಾರುರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಯ್ತಾ ಎಂಬ ಅನುಮಾನ ಮೂಡಿದೆ.
ಪ್ರವೀಣ್ ನೆಟ್ಟಾರು ಮೃತದೇಹವನ್ನು ಬೆಳ್ಳಾರೆಯ ಬಸ್ ನಿಲ್ದಾಣದ ಸಮೀಪದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಪ್ರವೀಣ್ ನೆಟ್ಟಾರು ಅಂತಿಮ ದರ್ಶನಕ್ಕೆ ಜನಸ್ತೋಮವೇ ನೆರೆದಿತ್ತು. ಇದಾದ ಬಳಿಕ ಪ್ರವೀಣ್ ನೆಟ್ಟಾರು ಮೃತದೇಹವನ್ನು ಸುಳ್ಯ ತಾಲೂಕಿನ ನೆಟ್ಟೂರು ಗ್ರಾಮದಲ್ಲಿರುವ ಅವರ ನಿವಾಸದ ಸಮೀಪದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಇದೇ ಜಾಗದಲ್ಲಿ ಪ್ರವೀಣ್ ಕನಸಿನ ಮನೆಯನ್ನು ನಿರ್ಮಿಸುವ ಆಸೆಯನ್ನು ಹೊಂದಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಈ ಜಾಗದಲ್ಲಿ ಅಡಿಪಾಯ ಕೂಡ ಹಾಕುವವರಿದ್ದರು. ಆದರೆ ವಿಧಿಯಾಟ ಮತ್ತೊಂದೇ ಇತ್ತು .ದುಷ್ಕರ್ಮಿಗಳ ಅಟ್ಟಹಾಸಕ್ಕೆ ಪ್ರವೀಣ್ ಬಲಿಯಾಗಿದ್ದಾರೆ.
ಇದನ್ನು ಓದಿ : Praveen Nettaru funeral : ಪಂಚಭೂತಗಳಲ್ಲಿ ಪ್ರವೀಣ್ ನೆಟ್ಟಾರು ಲೀನ : ಕೇಸರಿ ಕಾರ್ಯಕರ್ತನಿಗೆ ಕಣ್ಣೀರ ವಿದಾಯ
ಇದನ್ನೂ ಓದಿ : bjp leader murder case : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಸುಳ್ಯ, ಕಡಬ , ಪುತ್ತೂರು ತಾಲೂಕು ಬಂದ್
Posting for Kanhaiya Lal led to Praveen’s murder