Women Cricketers Marriage Story : ಮಂದಾನ, ಮಿಥಾಲಿ, ಹರ್ಮನ್, ಮಹಿಳಾ ಕ್ರಿಕೆಟರ್”ಗಳೇಕೆ ಮದುವೆಯಾಗಲ್ಲ.. ಇಲ್ಲಿದೆ ಅಸಲಿ ಸತ್ಯ !

ಬೆಂಗಳೂರು: ಭಾರತ ಮಹಿಳಾ ಕ್ರಿಕೆಟರ್”ಗಳೀಗ ಪಾಪ್ಯುಲಾರಿಟಿಯಲ್ಲಿ ಯಾರಿಗೂ ಕಡಿಮೆಯಿಲ್ಲ. ಅದರಲ್ಲೂ ಸ್ಮೃತಿ ಮಂಧಾನ, ಮಿಥಾಲಿ ರಾಜ್, ಹರ್ಮನ್’ಪ್ರೀತ್ ಕೌರ್, ಶೆಫಾಲಿ ವರ್ಮಾ. ಹೀಗೆ ಭಾರತ ತಂಡದ ಸ್ಟಾರ್ ಆಟಗಾರ್ತಿಯರ ಬಗ್ಗೆ ಕ್ರಿಕೆಟ್ ಪ್ರಿಯರಿಗೆ ದೊಡ್ಡ ಕುತೂಹಲವಿದೆ. ಅಷ್ಟೇ ಕುತೂಹಲ ಇವರ ಮದುವೆಯ ಬಗ್ಗೆಯೂ ಇದೆ. ಕುತೂಹಲಕಾರಿ ಸಂಗತಿ ಏನಂದ್ರೆ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರ ಪೈಕಿ ಯಾರೂ ಇಲ್ಲಿಯವರೆಗೆ ಮದುವೆಯಾಗಿಲ್ಲ (Women Cricketers Marriage Story ) . ಟೀಮ್ ಇಂಡಿಯಾದ ಮಾಜಿ ನಾಯಕಿ ಮಿಥಾಲಿ ರಾಜ್, ( Mithali Raj), ಮಾಜಿ ವೇಗದ ಬೌಲರ್ ಜೂಲನ್ ಗೋಸ್ವಾಮಿ (Jhulan Goswami), ಹಾಲಿ ನಾಯಕಿ ಹರ್ಮನ್ ಪ್ರೀತ್ ಕೌರ್ (Harmanpreet Kaur), ಉಪನಾಯಕಿ ಸ್ಮೃತಿ ಮಂಧಾನ (Smriti Mandhana), ಸದ್ಯ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಕನ್ನಡತಿ ವೇದಾ ಕೃಷ್ಣಮೂರ್ತಿ (Veda Krishnamurthy) .. ಹೀಗೆ ಭಾರತ ಪರ ಆಡಿದ, ಆಡುತ್ತಿರುವ ಪ್ರಮುಖ ಆಟಗಾರ್ತಿಯರಲ್ಲಿ ಯಾರೂ ಕೂಡ ಇನ್ನೂ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿಲ್ಲ.

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರಿಗೆ 39 ವರ್ಷ. ಆದರೆ ಇನ್ನೂ ಮದುವೆಯಾಗಿಲ್ಲ. ಮಾಜಿ ಮಧ್ಯಮ ವೇಗಿ ಜೂಲನ್ ಗೋಸ್ವಾಮಿ ಅವರ ವಯಸ್ಸೂ 39. ಅವರಿಗೂ ವಿವಾಹವಾಗಿಲ್ಲ. 26 ವರ್ಷದ ಸ್ಮೃತಿ ಮಂಧಾನ, 33 ವರ್ಷದ ಹರ್ಮನ್ ಪ್ರೀತ್ ಕೌರ್, 30 ವರ್ಷದ ಪೂನಂ ಯಾದವ್.. ಹೀಗೆ ಯಾರೂ ಮದುವೆಯ ಉಸಾಬರಿಗೇ ಹೋಗಿಲ್ಲ. ಭಾರತ ಮಹಿಳಾ ಕ್ರಿಕೆಟರ್”ಗಳಲ್ಲಿ ಕೆಲವರು ವಯಸ್ಸು ಮೀರಿದರೂ, ಇನ್ನು ಹಲವರು ಮದುವೆ ವಯಸ್ಸು ಹತ್ತಿರದಲ್ಲಿದ್ರೂ ವಿವಾಹವಾಗದಿರುವುದಕ್ಕೆ ಕಾರಣವೇನು? ಉತ್ತರ ಸಿಂಪಲ್.

ಮಹಿಳಾ ಕ್ರಿಕೆಟರ್’ಗಳು ಮದುವೆಯಾಗದಿರಲು ಕಾರಣಗಳು:

  1. ಮದುವೆಯಾದರೆ ಅದು ಕ್ರಿಕೆಟ್ ವೃತ್ತಿಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ.
  2. ಸಂಸಾರ ಜೀವನಕ್ಕೆ ಕಾಲಿಟ್ಟರೆ ಫಿಟ್’ನೆಸ್ ಮೇಲೆ ಪರಿಣಾಮ ಬೀರುವ ಸಾಧ್ಯತೆ.
  3. ವಿವಾಹ ಬಂಧನಕ್ಕೊಳಗಾದರೆ ಕ್ರಿಕೆಟ್ ವೃತ್ತಿಜೀವನಕ್ಕೆ ಬ್ರೇಕ್ ಬೀಳುವ ಆತಂಕ.
  4. ಗಂಡ-ಮನೆ-ಮಕ್ಕಳ ಜಂಟಾಟದಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಕಡಿಮೆಯಾಗುವ ಸಾಧ್ಯತೆ.
  5. ಮದುವೆಯಾದರೆ ಕ್ರಿಕೆಟ್’ನಿಂದ ಅವಕಾಶ ವಂಚಿತರಾಗುವ ಸಾಧ್ಯತೆ.

ಇಂಗ್ಲೆಂಡ್’ನ ಬರ್ಮಿಂಗ್’ಹ್ಯಾಮ್’ನಲ್ಲಿ ಗುರುವಾರ ಆರಂಭವಾಗಲಿರುವ #Commonwealthgames ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿ ಭಾರತ ಮಹಿಳಾ ಕ್ರಿಕೆಟ್ ತಂಡ ಆಡಲಿದೆ. ತಂಡವನ್ನು ಹರ್ಮನ್’ಪ್ರೀತ್ ಕೌರ್ ಮುನ್ನಡೆಸಲಿದ್ದು, ಸ್ಟೈಲಿಷ್ ಲೆಫ್ಟ್ ಹ್ಯಾಂಡರ್ ಸ್ಮೃತಿ ಮಂಧಾನ ಉಪನಾಯಕಿಯ ಜವಾಬ್ದಾರಿ ಹೊತ್ತಿದ್ದಾರೆ. ಜುಲೈ 29ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಹರ್ಮನ್’ಪ್ರೀತ್ ಕೌರ್ ಬಳಗ ತನ್ನ ಮೂರೂ ಲೀಗ್ ಪಂದ್ಯಗಳನ್ನು ಬರ್ಮಿಂಗ್’ಹ್ಯಾಮ್”ನ ಎಡ್ಜ್ ಬಾಸ್ಟನ್ ಮೈದಾನದಲ್ಲೇ ಆಡಲಿದೆ.

ಕಾಮನ್ವೆಲ್ತ್ ಗೇಮ್ಸ್: ಭಾರತ ಮಹಿಳಾ ತಂಡದ ವೇಳಾಪಟ್ಟಿ
ಜುಲೈ 29 Vs ಆಸ್ಟ್ರೇಲಿಯಾ (ಎಡ್ಜ್’ಬಾಸ್ಟನ್)
ಜುಲೈ 31 Vs ಪಾಕಿಸ್ತಾನ (ಎಡ್ಜ್’ಬಾಸ್ಟನ್)
ಆಗಸ್ಟ್ 03 Vs ಬಾರ್ಬೆಡೋಸ್ (ಎಡ್ಜ್’ಬಾಸ್ಟನ್)
ಕಾಮನ್ವೆಲ್ತ್ ಗೇಮ್ಸ್: ಭಾರತ ಮಹಿಳಾ ತಂಡ
ಹರ್ಮನ್’ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ಶೆಫಾಲಿ ವರ್ಮಾ, ಎಸ್.ಮೇಘನಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಕಾರ್, ಮೇಘನಾ ಸಿಂಗ್, ರೇಣುಕಾ ಠಾಕೂರ್, ಜೆಮಿಮಾ ರಾಡ್ರಿಗ್ಸ್, ರಾಧಾ ಯಾಜವ್, ಹರ್ಲೀನ್ ಡಿಯೋಲ್, ಸ್ನೇಹ್ ರಾಣಾ.
ಮೀಸಲು ಆಟಗಾರ್ತಿಯರು: ಸಿಮ್ರಾನ್ ದಿಲ್ ಬಹದ್ದೂರ್, ರಿಚಾ ಘೋಷ್, ಪೂನಂ ಯಾದವ್

ಇದನ್ನೂ ಓದಿ : Exclusive : ಕೆ.ಎಲ್ ರಾಹುಲ್ ಕಂಬ್ಯಾಕ್ ಪ್ಲಾನ್ ಔಟ್.. ಜಿಂಬಾಬ್ವೆ ಸರಣಿಗೆ ಕನ್ನಡಿಗ ಕ್ಯಾಪ್ಟನ್ ?

ಇದನ್ನೂ ಓದಿ : Rahul Dravid: “ರಾಹುಲ್ ದ್ರಾವಿಡ್ ಅಲ್ಲ ರಾಹುಲ್ ‘ಡೇವಿಡ್’..” ದಿ ಗ್ರೇಟ್ ವಾಲ್ ಬಿಚ್ಚಿಟ್ಟ “ಹೆಸರು” ರಹಸ್ಯ

Team India Women Cricketers Marriage Story

Comments are closed.