Praveen Nettaru murder : ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣದಲ್ಲಿ 10 ಮಂದಿ ಶಂಕಿತರು ವಶಕ್ಕೆ

ಬೆಂಗಳೂರು : Praveen Nettaru murder : ಬಿಜೆಪಿ ಯುವ ಮುಖಂಡ ಪ್ರವೀಣ್​ ನೆಟ್ಟಾರು ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಜಿಹಾದಿಗಳ ಮಾರಕ ದಾಳಿಗೆ ಬಾರದ ಲೋಕಕ್ಕೆ ತೆರಳಿದ ಕೇಸರಿ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಇಂದು ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರುವಿನಲ್ಲಿರುವ ಪ್ರವೀಣ್​​ ನೆಟ್ಟಾರು ಅಂತ್ಯಕ್ರಿಯೆಯನ್ನು ಅವರ ಮನೆಯ ಸಮೀಪವೇ ನೆರವೇರಿಸಲಾಗಿದೆ. ಈ ಪ್ರಕರಣದ ಅಡಿಯಲ್ಲಿ ಪೊಲೀಸರು ಒಟ್ಟು 10 ಮಂದಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾಹಿತಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ಜಿಲ್ಲಾ ಹಿಂದೂ ಮೋರ್ಛಾ ಸದಸ್ಯ ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಈವರೆಗೆ 10 ಮಂದಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಕೇರಳಕ್ಕೂ ಪೊಲೀಸರ ತಂಡವನ್ನು ಕಳಿಸಿದ್ದೇವೆ. ಅಲ್ಲದೇ ಪ್ರಕರಣದಲ್ಲಿ ಸಂಪೂರ್ಣ ಸಹಕಾರ ನೀಡುವಂತೆ ಸರ್ಕಾರದ ಬಳಿ ಕೇಳಿದ್ದೇವೆ. ಪ್ರವೀಣ್​ ಹತ್ಯೆಗೆ ಕಾರಣರಾದವರನ್ನು ಹಾಗೆಯೇ ಬಿಡುವುದಿಲ್ಲ. ಆತನ ಸಾವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ದ್ವೇಷವನ್ನು ಕಟ್ಟಿಕೊಳ್ಳುವವರಿಗೆ ಪ್ರವೀಣ್​ ನೆಟ್ಟಾರು ಸಾವು ಮತ್ತೊಂದು ಪಾಠವಾಗಿದೆ. ನಿನ್ನೆ ರಾತ್ರಿ ಸುಮಾರಿಗೆ ಕೋಳಿ ಅಂಗಡಿಯ ಬಾಗಿಲನ್ನು ಮುಚ್ಚಿ ಮನೆಗೆ ಹೊರಡಲು ತಯಾರಾಗಿದ್ದ ಪ್ರವೀಣ್​ ಮೇಲೆ ದಾಳಿ ನಡೆಸಿದ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಬಳಿಕ ತಲವಾರ್​ನಿಂದ ಪ್ರವೀಣ್​ ಕುತ್ತಿಗೆಗೆ ಇರಿದು ಎಸ್ಕೇಪ್​ ಆಗಿದ್ದರು. ರಕ್ತದ ಮಡುವಿನಲ್ಲಿ ಮಲಗಿದ್ದ ಪ್ರವೀಣ್​​ರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬಳಿಕ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಅಲ್ಲಿಂದ ಮೆರವಣಿಗೆ ಮೂಲಕ ಬೆಳ್ಳಾರೆಗೆ ಮೃತದೇಹವನ್ನು ತಂದು ಬಳಿಕ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

ಅಂತಿಮ ದರ್ಶನದ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರು ಬಿಜೆಪಿ ನಾಯಕರ ಮೇಲೆ ತಮ್ಮ ಆಕ್ರೋಶವನ್ನು ಹೊರ ಹಾಕಿದ ಘಟನೆಗಳು ನಡೆದವು. ಸಚಿವರಾದ ಸುನೀಲ್​ ಕುಮಾರ್​ ಹಾಗೂ ಎಸ್​. ಅಂಗಾರ ಹಿಂದೂ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ತಲೆ ತಗ್ಗಿಸಿದರೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಹಿಂದೂ ಕಾರ್ಯಕರ್ತರ ಮುತ್ತಿಗೆ ಎದುರಿಸುವಂತಾಗಿತ್ತು. ಪ್ರವೀಣ್​ ಸಾವಿನಿಂದ ಆಕ್ರೋಶಗೊಂಡಿರುವ ಅನೇಕ ಹಿಂದೂ ಪರ ಸಂಘಟನಾ ಕಾರ್ಯಕರ್ತರು ಇಂದು ಸಂಘಟನೆಗಳಿಗೆ ರಾಜೀನಾಮೆಯನ್ನು ಘೋಷಿಸಿದ್ದಾರೆ.

ಇದನ್ನು ಓದಿ : Praveen Nettaru’s murder case: ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ : ಹಿಂದೂ ಕಾರ್ಯಕರ್ತರಿಂದ ನಳೀನ್​ ಕುಮಾರ್​ ಕಟೀಲ್​ ವಾಹನ ಮುತ್ತಿಗೆ

ಇದನ್ನೂ ಓದಿ : Praveen Nettaru funeral : ಪಂಚಭೂತಗಳಲ್ಲಿ ಪ್ರವೀಣ್​ ನೆಟ್ಟಾರು ಲೀನ : ಕೇಸರಿ ಕಾರ್ಯಕರ್ತನಿಗೆ ಕಣ್ಣೀರ ವಿದಾಯ

Praveen Nettaru murder case : 10 suspects arrested

Comments are closed.