ಧಾರವಾಡ : Pramod Muthalik : ವಿಪಕ್ಷ ನಾಯಕ ಸಿದ್ದರಾಮಯ್ಯ ವಾಹನಕ್ಕೆ ಮೊಟ್ಟೆ ಎಸೆತವನ್ನು ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಸಾವರ್ಕರ್ ಫೋಟೋವನ್ನು ಸುಟ್ಟು ಹಾಕಿರುವ ವಿಚಾರವಾಗಿ ಧಾರವಾಡದಲ್ಲಿ ಪ್ರತಿಕ್ರಿಯಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಸಾವರ್ಕರ್ ಭಾವಚಿತ್ರವನ್ನು ಸುಟ್ಟು ಹಾಕಿರುವುದು ಹೇಯ ಕೃತ್ಯವಾಗಿದೆ. ಇದೊಂದು ದೇಶದ್ರೋಹಿ ಕೆಲಸ ಕೂಡ ಹೌದು. ನೀವು ಸುಟ್ಟಿದ್ದು ಕೇವಲ ಭಾವಚಿತ್ರವನ್ನಲ್ಲ ನೀವು ಭಾರತ ಮಾತೆಯನ್ನೇ ಸುಟ್ಟಿದ್ದೀರಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸಾವರ್ಕರ್ ತಮ್ಮ ಅರ್ಧ ಜೀವನವನ್ನು ಜೈಲಿನಲ್ಲಿಯೇ ಕಳೆದಿದ್ದರು. ಇಂತವರ ಫೋಟೋವನ್ನು ಸುಡುತ್ತಿರುವ ನಿಮಗೆ ದೇಶ ಭಕ್ತಿ ಎಂಬುದೇ ಇಲ್ಲ. ನಿಮಗೆ ಕೇವಲ ಸಿದ್ದರಾಮಯ್ಯ ಬೇಕು. ಸಿದ್ದರಾಮ್ಯ ವಾಹನಕ್ಕೆ ಮೊಟ್ಟೆ ಎಸೆದಿರುವುದು ತಪ್ಪು ಅಂತಾ ಎಲ್ಲರೂ ಹೇಳ್ತಿದ್ದಾರೆ. ಆದರೆ ನೀವು ಸಾವರ್ಕರ್ಗೆ ಅವಮಾನ ಮಾಡಿದ್ದು ಕೂಡ ಸರಿಯಲ್ಲ. ನೀವೆಲ್ಲರೂ ನಾಲಾಯಕ್, ಅಯೋಗ್ಯರು. ನೀವೆಲ್ಲರೂ ತಪ್ಪಾಯ್ತು ಅಂತಾ ಭಾರತ ಮಾತೆಯ ಬಳಿ ಈ ಕೂಡಲೇ ಕ್ಷಮೆ ಕೇಳಲೇಬೇಕು ಎಂದು ಗುಡುಗಿದ್ದಾರೆ .
ಇಂಧಿರಾ ಗಾಂಧಿಯೇ ಸಾವರ್ಕರ್ರನ್ನು ದೇಶ ಭಕ್ತ ಎಂದು ಕರೆದಿದ್ದರು. ಅವರು ಸಾವರ್ಕರ್ ಭಾವಚಿತ್ರವುಳ್ಳ ಅಂಚೆ ಚೀಟಿ ಬಿಡುಗಡೆ ಮಾಡಿದ್ದರು. ಆದರೆ ನೀವೆಲ್ಲ ಮಾಡಿರುವುದು ತಪ್ಪಿದೆ. ಈ ಕೂಡಲೇ ಕ್ಷಮೆ ಕೇಳದೇ ಹೋದಲ್ಲಿ ಕಾಂಗ್ರೆಸ್ ಅಧ್ಯಕ್ಷರ ಮನೆ ಮುಂದೆ ಧರಣಿ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಇದೇ ವೇಳೆ ಸಿದ್ದರಾಮಯ್ಯ ರಂಭಾಪುರಿ ಶ್ರೀಗಳನ್ನು ಭೇಟಿಯಾದ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಈಗ ಎಲ್ಲ ಮಠಗಳಿಗೆ ಹೋಗಿ ಉದ್ದ ಅಡ್ಡ ನಮಸ್ಕಾರ ಮಾಡುವ ಮೂಲಕ ನಾಟಕ ಮಾಡ್ತಿದ್ದಾರೆ. ಇದು ರಂಭಾಪುರಿ ಶ್ರೀ, ಶೃಂಗೇರಿ ಶ್ರೀಗಳಿಗೂ ಗೊತ್ತು.ಎಲ್ಲ ಮಠಾಧೀಶರಿಗೂ ಈ ರಾಜಕಾರಣಿಗಳ ನಾಟಕ ಗೊತ್ತು. ಸಿದ್ದರಾಮಯ್ಯರಿಗೆ ಕುಂಕುಮ , ಕೇಸರಿ ಬಟ್ಟೆ ಕಂಡರೆ ಆಗೋದಿಲ್ಲ. ಆದರೂ ಮತದ ದಾಹಕ್ಕೆ ಭೇಟಿ ನೀಡ್ತಾರೆ. ನಿಮ್ಮ ಬಣ್ಣ ಎಲ್ಲರಿಗೂ ತಿಳಿದಿದೆ. ಈ ಬಾರಿ ಮತದಾರರೇ ನಿಮಗೆ ಮಣ್ಣು ಮುಕ್ಕಿಸುತ್ತಾರೆಂದು ಕಿಡಿ ಕಾರಿದರು.
ಇದನ್ನು ಓದಿ : jote joteyali serial : ‘ಜೊತೆ ಜೊತೆಯಲಿ’ ಧಾರವಾಹಿ ವೀಕ್ಷಕರಿಗೆ ಬಿಗ್ ಅಪ್ಡೇಟ್ : ಸೀರಿಯಲ್ನಿಂದ ನಟ ಅನಿರುದ್ಧಗೆ ಕೊಕ್
Pramod Muthalik expressed anger against Siddaramaiah