aniruddha banned : ನಟ ಅನಿರುದ್ಧಗೆ ಕಿರುತೆರೆಯಿಂದ 2 ವರ್ಷ ನಿಷೇಧ : ನಿರ್ಮಾಪಕರ ಸಂಘದಿಂದ ತೀರ್ಮಾನ

aniruddha banned : ಜೀ ಕನ್ನಡ ವಾಹಿನಿಯಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ಜೊತೆ ಜೊತೆಯಲಿ ಸೀರಿಯಲ್​ ಸೆಟ್​ನಲ್ಲಿ ಇದೀಗ ಅಲ್ಲೋಲ ಕಲ್ಲೋಲವಾಗಿದೆ. ಧಾರವಾಹಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಅನಿರುದ್ಧರನ್ನು ಸೀರಿಯಲ್​ನಿಂದ ಹೊರಗೆ ಕಳುಹಿಸಲಾಗಿದೆ. ಆರ್ಯವರ್ಧನ್​ ಎಂಬ ಪಾತ್ರದ ಮೂಲಕ ಕರುನಾಡಿನ ಮನಸ್ಸನ್ನು ಗೆದ್ದಿದ್ದ ಅನಿರುದ್ಧರ ಕಿರಿಕ್​ ತಾಳಲಾರದೇ ಧಾರವಾಹಿ ತಂಡ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.


ಈ ವಿಚಾರವಾಗಿ ಮಾತನಾಡಿದ ಕಿರುತೆರೆ ನಿರ್ಮಾಪಕ ಸಂಘದ ಅಧ್ಯಕ್ಷ ಭಾಸ್ಕರ್​​ ಅನಿರುದ್ಧ ಸೀರಿಯಲ್​ ಸೆಟ್​ನಲ್ಲಿ ಮಾಡಿಕೊಂಡ ಕಿರಿಕ್​ಗಳ ಕತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇಂದು ನಿರ್ಮಾಪಕ ವಿಜಯ್​​ಗೆ ಆದ ಅನುಭವ ನಾಳೆ ನಮಗೂ ಆಗಮಬಹುದು. ನಾವು ನಟ ಅನಿರುದ್ಧರನ್ನು ಬಾಯ್ಕಾಟ್​ ಮಾಡುತ್ತಿಲ್ಲ. ಬದಲಾಗಿ ಅವರನ್ನು 2 ವರ್ಷಗಳ ಕಾಲ ಕಿರುತೆರೆಯಿಂದ ದೂರ ಇಡಲು ನಿರ್ಧರಿಸಿದ್ದೇವೆ. ಎಲ್ಲಾ ಚಾನೆಲ್​​ಗಳ ನಿರ್ಮಾಪಕರು ಈ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಎಲ್ಲ ಧಾರವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಅವರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದರು.


ಸಂಚಿಕೆ ನಿರ್ದೇಶಕರಾದ ಉತ್ತಮ್​ ಮಧು ಅವರಿಗೆ ಶೂಟಿಂಗ್​ ಸೆಟ್​ನಲ್ಲಿ ಅನಿರುದ್ಧ ಶತ ಮೂರ್ಖ ಎಂದು ಕರೆದಿದ್ದಾರೆ. ಡೈಲಾಗ್​ ವಿಚಾರದಲ್ಲಿ ಗೊಂದಲ ಉಂಟಾಗಿದ್ದ ಕಾರಣಕ್ಕೆ ಮಧು ಅವರನ್ನು ಈ ರೀತಿ ಹೀಯಾಳಿಸಿ ಅನಿರುದ್ಧ ಏಕಾ ಏಕಿ ಶೂಟಿಂಗ್​ ಸೆಟ್​ನಿಂದ ಹೊರ ನಡೆದಿದ್ದರು. ಧಾರವಾಹಿ ತಂಡವನ್ನು ಕುಟುಂಬ ಎನ್ನುವ ಅನಿರುದ್ಧ ಈ ರೀತಿ ಮಾಡಿರುವುದು ಸರಿಯೇ…? ಇವರ ನಡೆಯಿಂದ ಧಾರವಾಹಿ ನಿರ್ಮಾಪಕರಿಗೆ ಉಂಟಾಗಿರುವ ನಷ್ಟವನ್ನು ಯಾರು ತುಂಬಿಕೊಡ್ತಾರೆ ಎಂದು ಪ್ರಶ್ನಿಸಿದ್ದಾರೆ.


ಪ್ರಧಾನ ನಿರ್ದೇಶಕರ ಜೊತೆ ಚರ್ಚೆ ಮಾಡದೇ ಅನಿರುದ್ಧ ಈ ರೀತಿ ಹೊರಟು ಹೋಗಿದ್ದು ಎಷ್ಟು ಸರಿ..? ಅನಿರುದ್ಧ ಅನೇಕ ಬಾರಿ ಆರೂರು ಜಗದೀಶರಿಗೆ ತೊಂದರೆ ನೀಡಿದ್ದಾರೆ. ಇದರಿಂದ ಆರೂರು ಜಗದೀಶ್​​ ಖಿನ್ನತೆಗೆ ಒಳಗಾಗಿದ್ದರು. ಅನಿರುದ್ಧರ ಕಿರಿಕ್​ ತಾಳಲಾರದೇ ಆರೂರು ಜಗದೀಶ್​ , ವಿಜಯ್​ ಸೀರಿಯಲ್​ ಸೆಟ್​ಗೆ ಹೋಗುತ್ತಿರಲಿಲ್ಲ. ಅವರಿಗೆ ಎಷ್ಟು ಹಿಂಸೆ ಆಗಿದೆ ಎನ್ನುವುದನ್ನು ಇದರಲ್ಲೇ ಊಹಿಸಿಕೊಳ್ಳಿ ಎಂದು ಹೇಳಿದ್ದಾರೆ.


ಇದು ನಿನ್ನೆ ಮೊನ್ನೆಯ ಕತೆಯಲ್ಲಿ ಕೋವಿಡ್​ ಸಂದರ್ಭದಲ್ಲಿ ಹೈದರಾಬಾದ್​ನಲ್ಲಿ ಶೂಟಿಂಗ್​​ ಸೆಟ್​​ನಲ್ಲಿ ಆರೂರು ಜಗದೀಶ್​ ನನ್ನ ಬಳಿ ಕಣ್ಣೀರು ಹಾಕಿದ್ದರು. ಇದರಿಂದ ಹೇಗೆ ಪಾರಾಗುವುದು ಎಂದೂ ಕೇಳಿದ್ದರು. ಸಂಘಕ್ಕೆ ಈ ಬಗ್ಗೆ ಲಿಖಿತ ದೂರು ಬಂದಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿ ಅನಿರುದ್ಧರನ್ನು ಸಿರಿಯಲ್​ಗಳಿಂದ ದೂರವಿಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಅನಿರುದ್ಧ ಜೊತೆ ಜೊತೆಯಲಿ ಸೀರಿಯಲ್​ ಸೆಟ್​ನಿಂದ ಹೊರ ನಡೆದಿರುವುದರಿಂದ ಧಾರವಾಹಿ ತಂಡಕ್ಕೆ ಯಾವುದೇ ನಷ್ಟವಿಲ್ಲ. ಏಕೆಂದರೆ ಧಾರವಾಹಿಯ ಪ್ರಮುಖ ನಾಯಕ ಕತೆ ಮಾತ್ರ. ಕತೆ ಒಳ್ಳೆಯದಾಗಿದ್ರೆ ಯಾವುದೇ ನಟನಾದರೂ ಜನರು ನೋಡುತ್ತಾರೆ.ಜನರೇನು ಮೂರ್ಖರಲ್ಲ. ವಿಷ್ಣುವರ್ಧನ್​ ಒಂದು ವೇಳೆ ಬದುಕಿದ್ದರೆ ಇದನ್ನು ಅವರು ಒಪ್ಪುತ್ತಲೂ ಇರಲಿಲ್ಲ. ನಿರ್ಮಾಪಕರಿಗೆ ನಷ್ಟವಾಗುವುದನ್ನು ಅವರು ಸಹಿಸುತ್ತಿರಲಿಲ್ಲ. ಜನರು ಇದನ್ನು ಅರ್ಥ ಮಾಡಿಕೊಳ್ತಾರೆ ಎಂದು ಹೇಳಿದರು.

ಇದನ್ನು ಓದಿ : T20 World Cup Team India : ಸೆಪ್ಟೆಂಬರ್ 15ಕ್ಕೆ ಟೀಮ್ ಇಂಡಿಯಾ ಆಯ್ಕೆ; Follow Live Updates

ಇದನ್ನೂ ಓದಿ : jote joteyali serial : ‘ಜೊತೆ ಜೊತೆಯಲಿ’ ಧಾರವಾಹಿ ವೀಕ್ಷಕರಿಗೆ ಬಿಗ್​ ಅಪ್ಡೇ​​ಟ್​​ : ಸೀರಿಯಲ್​​ನಿಂದ ನಟ ಅನಿರುದ್ಧಗೆ ಕೊಕ್​​

actor aniruddha banned from television for 2 years

Comments are closed.