Mysore Dussehra :ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2022 ಕ್ಕೆ ದಿನ ಗಣನೆ: ನಾಡಿಗೆ ಬಂದು ತೂಕ ಹೆಚ್ಚಿಸಿಕೊಂಡ ಗಜಪಡೆ

ಮೈಸೂರು : Mysore Dussehra : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2022 ಕ್ಕೆ ದಿನ ಗಣನೆ ಆರಂಭವಾಗಿದೆ. ಈಗಾಗಲೇ ದಸರಾ ಕಾರ್ಯಕ್ರಮಕ್ಕೆ ಸಿದ್ದತೆಗಳು ನಡೆಯುತ್ತಿದೆ. ಕಾಡಿನಿಂದ ನಾಡಿಗೆ ಎರಡು ಗಜಪಡೆಗಳ ತಂಡ ಆಗಮಿಸಿದೆ. ಮೊದಲ ತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಆಗಮಿಸಿದ್ದವು. ಎರಡನೇ ತಂಡದಲ್ಲಿ ಗೋಪಿ ನೇತೃತ್ವದಲ್ಲಿ 5 ಆನೆಗಳು ಆಗಮಿಸಿದ್ದವು. ಒಟ್ಟು 14 ಆನೆಗಳ ಆಗಮನವಾಗಿದ್ದು ಈ ಬಾರಿ ಅದ್ದೂರಿ ದಸರಾದಲ್ಲಿ 14 ಆನೆಗಳ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ.

ಇನ್ನು ಇಂದು ಕಾಡಿನಿಂದ ನಾಡಿಗೆ ಬಂದಿರುವ ಈ ಗಜಪಡೆಗಳ ತೂಕ ಪರೀಕ್ಷೆಯನ್ನು ಮೈಸೂರಿನಲ್ಲಿ ನಡೆಸಲಾಯಿತು. 5000 ಕೆ.ಜಿ ತೂಕವಿರುವ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ನಾಡಿಗೆ ಬಂದಾಗ 4770 ಕೆ.ಜಿ ತೂಕವಿದ್ದ. ಇದೀಗ ನಾಡಿಗೆ ಬಂದು ಅಭಿಮನ್ಯು 230ಕೆ.ಜಿ ಹೆಚ್ಚು ಮಾಡಿಕೊಂಡಿದ್ದಾನೆ. ಇನ್ನು ಚೈತ್ರಾ ಹೆಸರಿನ ಆನೆ ನಾಡಿಗೆ ಬರುವ ಸಂದರ್ಭ 3050ಕೆ.ಜಿ ಇತ್ತು. ಇದೀಗ 185 ಕೆಜಿ ಹೆಚ್ಚಳ ಮಾಡಿಕೊಂಡು ಒಟ್ಟು 3235 ಕೆ.ಜಿ ತೂಕ ಹೊಂದಿದ್ದಾಳೆ. ಇನ್ನು ಭೀಮ ಬಂದಾಗ 3920 ಕೆ ಜಿ ತೂಕವಿತ್ತು. ಇದೀಗ 4345 ಕೆ.ಜಿ ಇದ್ದು ಸುಮಾರು
425 ಕೆ.ಜಿ ತೂಕ ಹೆಚ್ಚಳ ಮಾಡಿಕೊಂಡಿದ್ದಾನೆ.

ಮಹೇಂದ್ರ 4450 ಕೆ.ಜಿ ತೂಕವಿದ್ದು, ಬಂದಾಗ 4250 ಕೆ.ಜಿ ತೂಕವಿತ್ತು. 200 ಕೆ.ಜಿ ತೂಕ ಹೆಚ್ಚಳವಾಗಿದೆ. ಧನಂಜಯ 4890 ಕೆ.ಜಿ ತೂಕವಿದ್ದು, ಬಂದಾಗ 4810 ಕೆ.ಜಿ ತೂಕವಿತ್ತು, 80 ಕೆ.ಜಿ ಹೆಚ್ಚಳವಾಗಿದೆ. ಲಕ್ಷ್ಮಿ ಬಂದಾಗ 2920 ಕೆ ಜಿ ತೂಕವಿತ್ತು.ಇದೀಗ 3150 ಕೆ ಜಿ ತೂಕವಾಗಿ 230 ಕೆಜಿ ಹೆಚ್ಚಳವಾಗಿದೆ. ಕಾವೇರಿ 3245 ಕೆ ಜಿ ತೂಕ ಆಗಿದ್ದು, ಬಂದಾಗ 3105 ಕೆ ಜಿ ತೂಕವಿತ್ತು. 140ಕೆಜಿ ಹೆಚ್ಚಳವಾಗಿದೆ‌. ಇನ್ನು ಅರ್ಜುನ 5885 ಕೆ ಜಿ ತೂಕವಾಗಿದ್ದು, ಬಂದಾಗ 5775 ಕೆ ಜಿ ತೂಕವಿತ್ತು, 110 ಕೆಜಿ ಹೆಚ್ಚಳವಾಗಿದೆ. ಇನ್ನು ಗೋಪಾಲಸ್ವಾಮಿ ಹೆಸರಿನ ಆನೆ 5460 ಕೆ ಜಿ. ತೂಕವಿದ್ದು, ಬಂದಾಗ 5140 ಕೆ ಜಿ ತೂಕವಿತ್ತು, ಸುಮಾರು 320 ಕೆಜಿ ಹೆಚ್ಚಳವಾಗಿದೆ.

ಕಳೆದ ಎರಡೂ ವರ್ಷ ಕೊರೊನಾ ಕಾರಣದಿಂದ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗಿತ್ತು.‌ ಆದ್ರೆ ಈ ಭಾರಿ ಆ ರೀತಿಯ ಅಡೆ ತಡೆ ಇಲ್ಲದೆ ಇರುವ ಕಾರಣಕ್ಕೆ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಒಟ್ಟಿನಲ್ಲಿ ಮೈಸೂರು ದಸರಾಕ್ಕೆ ಗಜಪಡೆಗಳ ಸಹಿತ ಎಲ್ಲಾ ತಯಾರಿ ನಡೆಯುತ್ತಿದ್ದು ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ಜನ ಕಾತರದಿಂದ ಕಾಯುತ್ತಿದ್ದಾರೆ.

ಇದನ್ನು ಓದಿ : Donald Trump : ಪ್ರಧಾನಿ ಮೋದಿಯನ್ನು ಹಾಡಿಹೊಗಳಿದ ಡೊನಾಲ್ಡ್​ ಟ್ರಂಪ್​ : ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆಯೂ ಸುಳಿವು

ಇದನ್ನೂ ಓದಿ : teacher poured hot water : ಸಮವಸ್ತ್ರದಲ್ಲೇ ಮಲವಿಸರ್ಜನೆ ಮಾಡಿದ್ದಕ್ಕೆ ವಿದ್ಯಾರ್ಥಿ ಮೈ ಮೇಲೆ ಬಿಸಿ ನೀರು ಸುರಿದ ಶಿಕ್ಷಕ

Preparations are underway for the world famous Mysore Dussehra

Comments are closed.