teacher poured hot water : ಸಮವಸ್ತ್ರದಲ್ಲೇ ಮಲವಿಸರ್ಜನೆ ಮಾಡಿದ್ದಕ್ಕೆ ವಿದ್ಯಾರ್ಥಿ ಮೈ ಮೇಲೆ ಬಿಸಿ ನೀರು ಸುರಿದ ಶಿಕ್ಷಕ

ರಾಯಚೂರು : teacher poured hot water : ಜೀವನದಲ್ಲಿ ಜೀವನ ಪಾಠದ ಜೊತೆ ಶೈಕ್ಷಣಿಕ ಶಿಕ್ಷಣ ನೀಡುವ ಗುರು ದೇವರ ಸಮಾನ ಎಂಬ ಮಾತಿದೆ. ಆದ್ರೆ ಇಲ್ಲೊಬ್ಬ ರಾಕ್ಷಕ ಶಿಕ್ಷಕ ಮಗುವೊಂದು ಸಮವಸ್ತ್ರದಲ್ಲಿ ಮಲ ವಿಸರ್ಜನೆ ಮಾಡಿದ ಕಾರಣಕ್ಕೆ ಮಗುವಿನ ಮೇಲೆ ಬಿಸಿನೀರು ಸುರಿದು ವಿಕೃತಿ ಮೆರೆದಿದ್ದಾನೆ. ತಾನೂ ಮಾಡಿದ ಈ ವಿಕೃತಿಗೆ ಶಿಕ್ಷಕ ಸಮಾಜಕ್ಕೆ ಕಪ್ಪು ಚುಕ್ಕೆ ಬರುವಂತೆ ಮಾಡಿದ್ದಾನೆ.

ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಘನಮಠೇಶ್ವರ ಗ್ರಾಮೀಣ ಸಂಸ್ಥೆಯ ಪ್ರಾಥಮಿಕ ಶಾಲೆಯ ಶಿಕ್ಷಕ ಹುಲಿಗೆಪ್ಪನ ಈ ರಾಕ್ಷಸ ಕೃತ್ಯ ಮಾಡಿದವನಾಗಿದ್ದಾನೆ. ಶಿಕ್ಷಕ ಹುಲಿಗೆಪ್ಪನ ರಾಕ್ಷಸ ಕೃತ್ಯಕ್ಕೆ 2ನೇ ತರಗತಿಯ ವಿದ್ಯಾರ್ಥಿ ಅಖಿತ್ (8) ಎಂಬ ಮಗುವಿಗೆ ಗಂಭೀರ ಗಾಯವಾಗಿದೆ. ಲಿಂಗಸೂಗೂರು ತಾಲೂಕಿನ ಮಿಟ್ಟಿಕೆಲ್ಲೂರು ಗ್ರಾಮದ ಮಗು ಕೋಚಿಂಗ್ ಕ್ಲಾಸ್ ಗೆ ಹೋದಾಗ ಈ ಘಟನೆ ನಡೆದಿದೆ. ತರಗತಿಯಲ್ಲಿ ಸಮವಸ್ತ್ರದಲ್ಲೇ ವಿದ್ಯಾರ್ಥಿ ಅಖಿತ್ ಮಲವಿಸರ್ಜನೆ ಮಾಡಿಕೊಂಡಿದ್ದ. ಸಮವಸ್ತ್ರದಲ್ಲಿ ಮಗು ಮಲವಿಸರ್ಜನೆ ಮಾಡಿದಕ್ಕೆ ಕುಪಿತಗೊಂಡಿದ್ದ ಕಿರಾತಕ ಶಿಕ್ಷಕ ಹುಲಿಗೆಪ್ಪ ಬಿಸಿ ನೀರು ಎರಚಿದ್ದಾನೆ.

ಬಿಸಿ ನೀರು ಎರಚಿರುವುದರಿಂದ ಮಗುವಿನ ದೇಹದ ಶೇ.40ರಷ್ಟು ಭಾಗಕ್ಕೆ ಗಂಭೀರ ಗಾಯವಾಗಿದೆ. ಗಾಯಾಳು ಮಗುವನ್ನು ಲಿಂಗಸೂಗೂರು ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ಅಂದ್ರೆ ಸೆಪ್ಟೆಂಬರ್ 2 ರಂದು ಈ ಘಟನೆ ನಡೆದರೂ ಈವರೆಗೆ ದೂರು ದಾಖಲಿಸಿಕೊಳ್ಳಲು ಮಸ್ಕಿ ಪೊಲೀಸರು ಹಿಂದೇಟು ಹಾಕಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಇನ್ನೊಂದು ಕಡೆ ಮಗುವಿಗೆ ಅನ್ಯಾಯ ‌ನಡೆದರೂ ಸೌಜನ್ಯಕ್ಕಾದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ‌ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿಲ್ಲ.

ಒಟ್ಟಿನಲ್ಲಿ‌ ಕ್ಷುಲ್ಲಕ ಕಾರಣಕ್ಕೆ ಮಗುವಿನ ಮೇಲೆ ದೌರ್ಜನ್ಯ ನಡೆಸಿದ ಶಿಕ್ಷಕನ ಕೃತ್ಯ ಖಂಡನೀಯ. ಹೀಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ‌ಇಲಾಖೆ ಅಧಿಕಾರಿಗಳು, ಪೊಲೀಸರು ಈ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.

ಇದನ್ನು ಓದಿ : Queen Elizabeth II Dies At 96: ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಇನ್ನಿಲ್ಲ

ಇದನ್ನೂ ಓದಿ : Asif Ali: ಅಫ್ಘಾನಿಸ್ತಾನ ಆಟಗಾರನಿಗೆ ಬ್ಯಾಟ್‌ನಿಂದ ಹೊಡೆಯಲು ಮುಂದಾದ ಪಾಕಿಸ್ತಾನದ ಆಸಿಫ್ ಅಲಿ

A teacher poured hot water on a student

Comments are closed.