Virat Kohli KL Rahul : ಕೊಹ್ಲಿ ಆರಂಭಿಕನಾಗಿ ಆಡಿದರೆ ನಾನೇನು ಹೊರಗೆ ಕೂರಬೇಕಾ ; ಕೆ.ಎಲ್ ರಾಹುಲ್ ಹೀಗಂದಿದ್ದೇಕೆ ?

ದುಬೈ: (Virat Kohli KL Rahul) ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಆರಂಭಿಕನಾಗಿ ಆಡ್ಬೇಕಾ? ಅಫ್ಘಾನಿಸ್ತಾನ ವಿರುದ್ಧದ ಏಷ್ಯಾ ಕಪ್ (Asia cup 2022) ಟಿ20 ಪಂದ್ಯದಲ್ಲಿ ಕೊಹ್ಲಿ ಸೆಂಚುರಿ ಬಾರಿಸಿದ ನಂತರ ಹುಟ್ಟಿಕೊಂಡಿರುವ ಪ್ರಶ್ನೆಯಿದು. ಈ ಪ್ರಶ್ನೆಗೆ ಉತ್ತರಿಸಿದ ಟೀಮ್ ಇಂಡಿಯಾದ ಉಪನಾಯಕ ಕೆ.ಎಲ್ ರಾಹುಲ್, ಕೊಹ್ಲಿ ಓಪನರ್ ಆಗಿ ಆಡಿದರೆ ನಾನೇನು ಹೊರಗೆ ಕೂರಬೇಕಾ ಎಂದು ಪ್ರಶ್ನಿಸಿದ್ದಾರೆ.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಷ್ಯಾ ಕಪ್ ಸೂಪರ್-4 ಪಂದ್ಯದದಲ್ಲಿ ಟೀಮ್ ಇಂಡಿಯಾವನ್ನು ಕೆ.ಎಲ್ ರಾಹುಲ್ ಮುನ್ನಡೆಸಿದ್ದರು. ನಾಯಕ ರಾಹುಲ್ ಜೊತೆ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಅಕ್ಷರಶಃ ಅಬ್ಬರಿಸಿ ಕೇವಲ 61 ಎಸೆತಗಳಲ್ಲಿ 12 ಬೌಂಡರಿಗಳು ಹಾಗೂ 6 ಸಿಕ್ಸರ್’ಗಳ ನೆರವಿನಿಂದ ಅಜೇಯ 122 ರನ್ ಬಾರಿಸಿ ಅಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕದ ಬರ ನೀಗಿಸಿಕೊಂಡರು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ ಮೊದಲ ಶತಕವೂ ಹೌದು.

ಅಫ್ಘಾನಿಸ್ತಾನ ವಿರುದ್ಧ 101 ರನ್’ಗಳ ಅಂತರದಲ್ಲಿ ಪಂದ್ಯ ಗೆದ್ದ ನಂತರ ಸುದ್ದಿಗೋಷ್ಠಿಗೆ ಆಗಮಿಸಿದ ನಾಯಕ ಕೆ.ಎಲ್ ರಾಹುಲ್ ಅವರಿಗೆ ಪ್ರಶ್ನೆಯೊಂದು ಎದುರಾಯಿತು.

ಪ್ರಶ್ನೆ: ವಿರಾಟ್ ಕೊಹ್ಲಿ ಭಾರತ ಪರ ಟಿ20 ಕ್ರಿಕೆಟ್’ನಲ್ಲಿ ಆರಂಭಿಕನಾಗಿಯೇ ಮುಂದುವರಿಯಬೇಕಾ?
ಕೆ.ಎಲ್ ರಾಹುಲ್: ಹಾಗಾದರೆ ನಾನೇನು ಮಾಡಬೇಕೆಂದು ನೀವು ಬಯಸುತ್ತೀರಿ? ಬೆಂಚ್ ಕಾಯಿಸಬೇಕಾ?

ಪತ್ರಕರ್ತ ಕೇಳಿದ ಪ್ರಶ್ನೆಗೆ ಹಾಸ್ಯದ ಧಾಟಿಯಲ್ಲಿ ರಾಹುಲ್ ಈ ರೀತಿ ಉತ್ತರಿಸಿದರು.

“ವಿರಾಟ್ ಕೊಹ್ಲಿ ರನ್ ಗಳಿಸುತ್ತಿರುವುದು ಭಾರತಕ್ಕೆ ದೊಡ್ಡ ಬೋನಸ್. ಅದೇ ರೀತಿ ಇವತ್ತು ಅವರು ಆಡಿದರು. ಕಳೆದ 3-4 ಸರಣಿಗಳಿಂದ ತಮ್ಮ ಆಟದ ಬಗ್ಗೆ ವಿರಾಟ್ ಸಾಕಷ್ಟು ಪರಿಶ್ರಮ ಪಡುತ್ತಾ ಬಂದಿದ್ದರು. ಇದು ಇವತ್ತು ಅದ್ಭುತವಾಗಿ ಫಲಕೊಟ್ಟಿತು. ವಿಶ್ವಕಪ್’ಗೂ ಮೊದಲು ಈ ರೀತಿಯ ಇನ್ನಿಂಗ್ಸ್’ಗಳು ಪ್ರತೀ ಆಟಗಾರನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ವಿರಾಟ್ ಕೊಹ್ಲಿ ಅವರಿಗೆ ಶತಕ ಬಾರಿಸಲು ಆರಂಭಿಕನ ಸ್ಥಾನವೇ ಬೇಕೆಂದಿಲ್ಲ, 3ನೇ ಕ್ರಮಾಂಕದಲ್ಲೂ ಅವರು ಸಾಕಷ್ಟು ಶತಕಗಳನ್ನು ಬಾರಿಸಿದ್ದಾರೆ” ಎಂದು ರಾಹುಲ್ ಹೇಳಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಮುಂದಿನ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದಲ್ಲಿ ಟಿ20 ಸರಣಿಗಳನ್ನಾಡಲಿದೆ.

ಇದನ್ನೂ ಓದಿ : Virat Kohli T20I Century : 1020 ದಿನಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕೊಹ್ಲಿ ಶತಕ.. ಇನ್ನು ಶುರು ರಣಬೇಟೆಗಾರನ ಶತಕ ಬೇಟೆ

ಇದನ್ನೂ ಓದಿ : Virat Kohli Vs Sachin Tendulkar : 71ನೇ ಶತಕ ಬಾರಿಸಲು ತೆಗೆದುಕೊಂಡದ್ದು 1020 ದಿನ.. ಆದರೂ ಸಚಿನ್ ತೆಂಡೂಲ್ಕರ್‌ಗಿಂತ ಸ್ಪೀಡು ಕಿಂಗ್ ಕೊಹ್ಲಿ

Asia cup 2022 Virat Kohli plays as opener Why did KL Rahul do said this

Comments are closed.