ಪುತ್ತೂರು : ಕರಾವಳಿ ಭಾಗದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಪೊಲೀಸರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ನಡುವಲ್ಲೇ ಪುತ್ತೂರಿನ ವಿವಿಧ ಠಾಣೆಗಳ ಪೊಲೀಸರಿಗೆ ಜ್ವರ ಹಾಗೂ ಗಂಟಲು ನೋವು ಕಾಣಿಸಿಕೊಂಡಿದ್ದು, 8 ಮಂದಿ ಪೊಲೀಸರನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಪುತ್ತೂರು ನಗರ ಠಾಣೆಯ ನಾಲ್ವರು ಪೊಲೀಸರು, ಮಹಿಳಾ ಠಾಣೆಯ ಇಬ್ಬರು ಪೊಲೀಸರು ಹಾಗೂ ಸಂಚಾರಿ ಠಾಣೆಯ ಇಬ್ಬರು ಪೊಲೀಸರಿಗೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚನೆಯನ್ನು ನೀಡಲಾಗಿದೆ. ಜ್ವರದ ಲಕ್ಷಣಗಳು ಮುಂದುವರಿದರೆ ಪೊಲೀಸರಿಗೆ ಗಂಟಲು ದ್ರವದ ಪರೀಕ್ಷೆ ನಡೆಸುವಂತೆ ಸೂಚನೆಯನ್ನು ನೀಡಲಾಗಿದೆ.

ಈ ಎಲ್ಲಾ ಪೊಲೀಸರು ಪುತ್ತೂರು ತಾಲೂಕಿನ ಗಡಿಭಾಗದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಇದೀಗ ಕೊರೊನಾ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.