K.S. Eshwarappa:ಆರೋಪ ಮುಕ್ತನಾಗುತ್ತಿದ್ದಂತೆಯೇ ಸಚಿವ ಸ್ಥಾನ ಮರಳಿ ಕೊಡ್ತೀನಿ ಅಂದಿದ್ರು : ಮಾಜಿ ಸಚಿವ ಈಶ್ವರಪ್ಪ ಅಸಮಾಧಾನ

ಶಿವಮೊಗ್ಗ : K.S. Eshwarappa : ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣದ ಬಳಿಕ ತಲೆದಂಡದ ರೂಪದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಎಸ್​ ಈಶ್ವರಪ್ಪ ಈ ಪ್ರಕರಣದಲ್ಲಿ ಕ್ಲೀನ್​ಚಿಟ್​ ಪಡೆದು ಬಹಳ ದಿನಗಳು ಕಳೆದಿದೆ. ಆರೋಪ ಮುಕ್ತನಾದ ಬಳಿಕ ಮತ್ತೆ ಸಂಪುಟದಲ್ಲಿ ಸ್ಥಾನ ಪಡೆಯಲು ಯತ್ನಿಸುತ್ತಿರುವ ಕೆ.ಎಸ್​ ಈಶ್ವರಪ್ಪ ಈ ಬಗ್ಗೆ ವರಿಷ್ಠರ ಗಮನವನ್ನು ಸೆಳೆಯಲು ಒಂದಿಲ್ಲೊಂದು ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ಇಂದು ಶಿವಮೊಗ್ಗದಲ್ಲಿ ಈ ವಿಚಾರವಾಗಿ ಮಾತನಾಡಿದ ಕೆ.ಎಸ್​ ಈಶ್ವರಪ್ಪ ಇವತ್ತು ಬಂದು ಮಂತ್ರಿಯಾಗು ಎಂದು ಹೇಳಿದರೂ ಸಹ ಮಂತ್ರಿಯಾಗಲು ನಾನು ಸಿದ್ಧ ಎಂದು ಪುನರುಚ್ಛರಿಸಿದ್ದಾರೆ.


ಸಚಿವ ಸ್ಥಾನ ನೀಡುತ್ತಾರಾ ಎಂಬ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್​ ಯಡಿಯೂರಪ್ಪರನ್ನು ಕೇಳಬೇಕು. ನನ್ನಲ್ಲಿ ಬಂದು ಕೇಳಿದರೆ ನಾನು ಏನು ಉತ್ತರ ನೀಡಲು ಸಾಧ್ಯ..? ನನ್ನ ಕೈಯಲ್ಲಿ ಏನೂ ಇಲ್ಲ. ಈಗ ಏನಾದರೂ ನನಗೆ ಸಚಿವನಾಗು ಬಾ ಎಂದು ಕರೆದರೆ ಇವತ್ತೇ ಮಂತ್ರಿಯಾಗಲು ನಾನು ಸಿದ್ಧನಿದ್ದೇನೆ. ರಾಜ್ಯ ಬಿಜೆಪಿ ನಾಯಕರು ಈ ವಿಚಾರವಾಗಿ ಕೇಂದ್ರದ ನಾಯಕರ ಜೊತೆಯಲ್ಲಿ ಚರ್ಚೆ ಮಾಡಲು ಯಾಕೆ ವಿಳಂಬ ಮಾಡ್ತಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಆದಷ್ಟು ಬೇಗ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಮಾಡಿ ಎಷ್ಟು ಸೀಟು ಖಾಲಿ ಇದೆಯೋ ಆ ಸೀಟನ್ನು ಭರ್ತಿ ಮಾಡಲಿ ಎಂಬುದೇ ನನ್ನ ಅಪೇಕ್ಷೆಯಾಗಿದೆ ಎಂದು ಹೇಳಿದ್ದಾರೆ .

ಈ ಪ್ರಕರಣದಲ್ಲಿ ಆರೋಪ ಮುಕ್ತನಾದ ಮೇಲೆ ನನಗೆ ಸಚಿವ ಸ್ಥಾನ ಮರಳಿ ನೀಡುತ್ತೇನೆ ಎಂದು ಹೇಳಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಎಸ್​ ಯಡಿಯೂರಪ್ಪ ಈ ಬಗ್ಗೆ ನನಗೆ ಮಾತು ಕೊಟ್ಟಿದ್ದರು. ಆದರೆ ಈಗ ಸಚಿವ ಸ್ಥಾನ ಯಾಕೆ ಕೊಡುತ್ತಿಲ್ಲ ಎಂಬುದನ್ನು ನೀವು ಅವರನ್ನೇ ಕೇಳಬೇಕು, ನನ್ನನ್ನು ಕೇಳಿದರೆ ಹೇಗೆ..? ಮದುವೆ ಗಂಡಾಗಲು ನಾನು ಸಿದ್ಧನಿದ್ದೇನೆ. ತೀರ್ಮಾನ ಮಾಡಬೇಕಾಗಿರುವುದು ಹಿರಿಯರು. ಮಾಡಿಲ್ಲ ಅಂದರೆ ನಾನೇನು ಮಾಡೋಕೆ ಆಗುತ್ತೆ ಎಂದಿದ್ದಾರೆ.


ನನ್ನ ಮೇಲೆ ಆಪಾದನೆ ಬಂದಿತ್ತು. ಮನೆ ದೇವರು ಚೌಡೇಶ್ವರಿಯನ್ನು ನಂಬಿದ್ದೆ. ನನ್ನನ್ನು ಆರೋಪ ಮುಕ್ತಳನ್ನಾಗಿ ಮಾಡಿದ್ದಾಳೆ. ಬೇರೆ ಕೇಸ್​ಗಳಿಗೆ ಇದಕ್ಕೆ ಹೋಲಿಕೆ ಮಾಡಬಾರದು. ನಾನು ಆರೋಪ ಮುಕ್ತನಾಗಿರುವುದರಿಂದ ನನ್ನನ್ನು ತಕ್ಷಣವೇ ಸಂಪುಟಕ್ಕೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.


ನನಗೆ ಸಚಿವಗಿರಿ ನೀಡಿಲ್ಲ ಅಂತಾ ನಾನು ಪಕ್ಷದ ಸಂಘಟನೆಗೆ ತೊಂದರೆ ಮಾಡಲ್ಲ. ಪಕ್ಷದ ರಾಜ್ಯಾಧ್ಯಕ್ಷರು ಸೋಮವಾರ ಬರೋಕೆ ಹೇಳಿದ್ದಾರೆ. ಒಬಿಸಿ ಮೋರ್ಛಾ ಬಲಪಡಿಸಬೇಕಿದೆ. ಅವರ ಜೊತೆ ಕೂತು ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಲಿದ್ದೇನೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೂ ಪಕ್ಷ ಸಂಘಟನೆಯೂ ಯಾವುದೇ ಸಂಬಂಧವಿಲ್ಲ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ : Minister CC Patil :ಭ್ರಷ್ಟಾಚಾರದ ವಿಚಾರದಲ್ಲಿ ವಿಪಕ್ಷಗಳ ಜೊತೆ ಡೀಲ್​ ಮಾಡಿಕೊಳ್ಳಲು ಮುಂದಾದ್ರಾ ಸಚಿವ ಸಿ.ಸಿ ಪಾಟೀಲ್​

ಇದನ್ನೂ ಓದಿ : Super Sub Rules in Domestic Cricket: ಸೈಯದ್ ಮುಷ್ತಾಕ್ ಅಲಿ ಟಿ20ಗೆ ಸೂಪರ್ ಸಬ್ ವಾಪಸ್: ಐಪಿಎಲ್‌ಗೂ ಬರಲಿದೆ ಬಿಸಿಸಿಐನ ಹೊಸ ರೂಲ್ಸ್?

K.S. Eshwarappa’s important statement about the position of minister

Comments are closed.