Home Minister Araga Jnanendra : ಧರ್ಮದ ಆಧಾರದಲ್ಲಿ ಸರ್ಕಾರ ನಡೆಸಲು ಸಾಧ್ಯವಿಲ್ಲ; ಇಂತಹ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕಾಣಿಸುತ್ತೇವೆ : ಆರಗ ಜ್ಞಾನೇಂದ್ರ ಗುಡುಗು

ಶಿವಮೊಗ್ಗ : Araga Jnanendra Shivamogga : ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಚಾಕು ಇರಿತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಈ ಸಂಬಂಧ ಸಾಕಷ್ಟು ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದೆ. ಎಡಿಜಿಪಿ ಅಲೋಕ್​ ಕುಮಾರ್​ ಫೀಲ್ಡಿಗೆ ಎಂಟ್ರಿ ನೀಡಿದ್ದು ಪ್ರತಿಯೊಂದು ಸ್ಥಳದ ಗ್ರೌಂಡ್​ ರಿಪೋರ್ಟ್ ಪಡೆಯುತ್ತಿದ್ದಾರೆ. ಈ ನಡುವೆ ಗೃಹ ಸಚಿವ ಆರಗ ಜ್ಞಾನೇಂದ್ರ ಎಡಿಜಿಪಿ ಅಲೋಕ್​ ಕುಮಾರ್​ ಹಾಗೂ ಶಿವಮೊಗ್ಗ ಎಸ್ಪಿ ಲಕ್ಷ್ಮೀ ಪ್ರಸಾದ್​ ಜೊತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದು ಈ ಸಭೆ ಮುಕ್ತಾಯಗೊಂಡಿದೆ.

ಸಭೆ ಮುಕ್ತಾಯದ ಬಳಿಕ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಚೂರಿ ಇರಿದ ನಾಲ್ವರನ್ನು ಈಗಾಗಲೇ ಬಂಧಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದವನ ಮೇಲೂ ಗುಂಡು ಹಾರಿಸಲಾಗಿದೆ. ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಸರ್ಕಾರದ ವಿರುದ್ಧ ಹರಿಹಾಯ್ದ ಪ್ರಮೋದ್​ ಮುತಾಲಿಕ್​​ರ ಹೇಳಿಕೆ ಕುರಿತು ಇದೇ ವೇಳೆ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ, ಪ್ರಮೋದ್​ ಮುತಾಲಿಕ್​​ರ ಯಾವುದೇ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡೋದಿಲ್ಲ. ಧರ್ಮದ ಆಧಾರದ ಮೇಲೆ ಸರ್ಕಾರವನ್ನು ನಡೆಸಲು ಸಾಧ್ಯವಿಲ್ಲ. ಪಾಸ್​, ಫೇಲ್​ ಅಂತಾ ನೋಡೋಕೆ ಆಗಲ್ಲ. ಹಿಂದೆಯೂ ರಾಜ್ಯದಲ್ಲಿ ಇಂತಹ ಪ್ರಕರಣಗಳು ನಡೆದಿವೆ ಎಂದು ಹೇಳಿದರು.

ಪ್ರಚೋದನಾತ್ಮಕವಾಗಿ ಮಾತನಾಡುವ ಮಾನಸಿಕತೆ ಇದ್ದವರಿಂದ ಈ ಸಮಸ್ಯೆ ಆಗ್ತಿದೆ. ಮಕ್ಕಳಿಗೆ ಸಾವರ್ಕರ್​ ಯಾರು ಅಂತಾ ಗೊತ್ತಿಲ್ಲ. ಅಂಡಮಾನ್​ ನಿಕೋಬಾರ್​ಗೆ ಹೋದರೆ ಗೊತ್ತಾಗುತ್ತದೆ ಎಂದು ಹೇಳಿದರು. ಬಂಧಿತ ಆರೋಪಿಗಳ ಹಿನ್ನೆಲೆಯನ್ನು ತನಿಖೆಯಿಂದ ತಿಳಿದುಕೊಳ್ಳಬೇಕು. ಬಂಧಿತ ಆರೋಪಿಗಳ ಹಿನ್ನೆಲೆಯನ್ನು ತನಿಖೆ ಮೂಲಕ ಬಯಲಿಗೆಳೆಯುತ್ತೇವೆ. ಅವರ ಹಿಂದಿರುವ ಸಂಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಅವಕ್ಕೆ ತಾರ್ಕಿಕ ಅಂತ್ಯ ಹಾಡುತ್ತೇವೆ.ಚಾಕು ಇರಿತಕ್ಕೊಳಗಾಗಿರುವ ಪ್ರೇಮ್​ ಸಿಂಗ್​ ಗಂಭೀರವಾಗಿ ಗಾಯಗೊಂಡಿದ್ದಾರೆ.ಮುಂದೆ ಏನಾಗುತ್ತೋ ಗೊತ್ತಿಲ್ಲ, ವೈದ್ಯರ ಶ್ರಮದಿಂದ ಆತ ಬದುಕುಳಿಯುತ್ತಾನೆ ಎಂದು ಹೇಳಿದರು.

ಇದೇ ವೇಳೆ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್​ ನೀಡಿದ ಆರಗ ಜ್ಞಾನೇಂದ್ರ, ನಮ್ಮ ದೇಶದಲ್ಲಿ ಸಾವರ್ಕರ್​ ಫೋಟೊ ಹಾಕಬಾರದಾ..? ಚುನಾವಣಾ ವರ್ಷ ಎಂದು ಈ ರೀತಿಯೆಲ್ಲ ಮಾತನಾಡಬಾರದು. ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್​ ಫೋಟೋ ಹಾಕಬಾರದು ಅನ್ನೋಕೆ ಇವರ್ಯಾರು..? ಮುಸ್ಲಿಂ ಏರಿಯಾ ಅಂದರೆ ಅದು ಭಾರತದೊಳಗೆ ಇರಲ್ವಾ ಎಂದು ಮರು ಪ್ರಶ್ನಿಸಿದ್ದಾರೆ .

ಇದನ್ನು ಓದಿ : Pramod Muthalik’s outrage : ಬಿಜೆಪಿಗರ ಕೈಲಾಗದೇ ಇದ್ದರೆ ಮನೆ ಹೋಗಲಿ : ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಕಿಡಿ

ಇದನ್ನೂ ಓದಿ : Minister Madhuswamy clarified : ಆಡಿಯೋ ವೈರಲ್​​ ವಿಚಾರದಲ್ಲಿ ಮೊದಲ ಬಾರಿಗೆ ಮೌನ ಮುರಿದ ಮಾಧುಸ್ವಾಮಿ: ಸಹೋದ್ಯೋಗಿಗಳ ನಡೆಗೆ ಅಸಮಾಧಾನ

Araga Jnanendra Shivamogga Home Minister Araga Jnanendra’s reaction after the meeting

Comments are closed.