Lalbagh flower show historical record : ಐತಿಹಾಸಿಕ ದಾಖಲೆ ಬರೆದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ಒಂದೇ ದಿನ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ

ಬೆಂಗಳೂರು : ( Lalbagh flower show historical record) ಸಾಂಪ್ರದಾಯಿಕ ಹಿರಿಮೆಗಳಲ್ಲಿ ಒಂದಾದ ಲಾಲ್‌ಭಾಗ್ ಫಲಪುಷ್ಪ ಪ್ರದರ್ಶನ ಸೋಮವಾರಕ್ಕೆ ಅಂತ್ಯ ಗೊಂಡಿದೆ. 10 ದಿನಗಳ ಕಾಲ ನಡೆದ ಈ ಫಲಪುಷ್ಪ ಪ್ರದರ್ಶ‌ನದಲ್ಲಿ ಸಸ್ಯ ಹಾಗೂ ಪುಷ್ಪ ಪ್ರಿಯರು ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಹೂವುಗಳಲ್ಲಿ ಅರಳಿದ ಕಲಾಕೃತಿ ಹಾಗೂ ವಿಶೇಷವಾಗಿ ನಟ ಪುನೀತ್ ರಾಜ್‌ಕುಮಾರ್‌ ಅವರಿಗೆ ನಮನ ಸಲ್ಲಿಸಿ ಧನ್ಯರಾಗಿದ್ದಾರೆ. 10 ದಿನಗಳ ಕಾಲ ನಡೆದ ಈ ಪ್ರದರ್ಶನ ಹಣ ಗಳಿಕೆಯಲ್ಲೂ ಹೊಸ ದಾಖಲೆ‌ಬರೆದಿದೆ.

ಹೌದು ನಗರದಲ್ಲಿ ಕಳೆದ 10 ದಿನಗಳಿಂದ ಪ್ರಮುಖ ಜನಾಕರ್ಷಣೆಯಾಗಿದ್ದ ಫಲಪುಷ್ಪ ಪ್ರದರ್ಶನಕ್ಕೆ ತೆರೆ ಬಿದ್ದಿದೆ. 212ನೇ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಇತ್ತೀಚಿಗೆ ಅಗಲಿದ ಕನ್ನಡದ ಪವರ್ ಸ್ಟಾರ್, ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಗೆ ಗೌರವ ಸಲ್ಲಿಸಿ ಅವರ ಪ್ರತಿಕೃತಿಯನ್ನು ನಿರ್ಮಿಸಲಾಗಿತ್ತು. ಮಾತ್ರವಲ್ಲ ಡಾ. ರಾಜ್ ಕುಮಾರ್ ಹಾಗೂ ಡಾ.ರಾಜ್ ಹುಟ್ಟಿಬೆಳೆದ ಗಾಜನೂರಿನ ನಿವಾಸವನ್ನು ಪುನರ್ ಸೃಷ್ಟಿ ಮಾಡಲಾಗಿತ್ತು.

ಪುನೀತ್ ಅಗಲಿ 10 ತಿಂಗಳಾಗುತ್ತ ಬಂದರೂ ಜನರಿಗೆ ಪುನೀತ್ ಮೇಲಿನ ಅಭಿಮಾನ ಕೊಂಚವೂ ಕಡಿಮೆಯಾಗಿಲ್ಲ. ಹೀಗಾಗಿ ಈ ಭಾರಿಯ ತೋಟಗಾರಿಕಾ ಇಲಾಖೆಯ ಫಲಪುಷ್ಪ ಪ್ರದರ್ಶನ ಹೊಸ ದಾಖಲೆ ಬರೆದಿದ್ದು, ಫಲಪುಷ್ಪ ಪ್ರದರ್ಶನದ ಇತಿಹಾಸದಲ್ಲೇ ಅತಿ ಹೆಚ್ಚು ಜನರಿಂದ ವೀಕ್ಷಣೆಗೊಳಗಾದ ಫಲಪುಷ್ಪ ಪ್ರದರ್ಶನ ಎಂಬ ದಾಖಲೆ ಬರೆದಿದೆ
11 ದಿನಗಳ ಫಲಪುಷ್ಪ ಪ್ರದರ್ಶನದಲ್ಲಿ ಲಾಲ್ ಭಾಗ್ ಗೆ ಒಟ್ಟು 8,34,552 ಪ್ರವಾಸಿಗರು ಭೇಟಿ ನೀಡಿದ್ದು, ಇದುವರೆಗೂ ಲಾಲ್ ಬಾಗ್ ದಾಖಲೆಯ 3,31,90,430 ರೂಪಾಯಿಗಳನ್ನು ಟಿಕೇಟ್ ಮಾರಾಟದಿಂದ ಗಳಿಸಿದೆ.

ಅದರಲ್ಲೂ ಕೊನೆಯ ದಿನ ಹಾಗೂ ರಜಾದಿನವಾಗಿದ್ದ ಸ್ವಾತಂತ್ರ್ಯದಿನಾಚರಣೆಯಂದು ಒಂದೇ ದಿನ 2,99,176 ಪ್ರವಾಸಿಗರು ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ ಇದರಿಂದ ಅಂದಾಜು 90,50,790 ರೂ ಹಣ ಸಂಗ್ರಹವಾಗಿದೆ. ಇದು ಫಲಪುಷ್ಪ ಪ್ರದರ್ಶನದಲ್ಲೇ ಅತೀ ಹೆಚ್ಚು ಗಳಿಕೆಯಾಗಿದ್ದು ಹೊಸ ದಾಖಲೆ‌ಎಂದು ವಿಶ್ಲೇಷಿಸಲಾಗುತ್ತಿದೆ. ಅಗಸ್ಟ್ ೫ ರಂದು ಪುನೀತ್ ಸಮಾಧಿಯಿಂದ ಪುನೀತ್ ಜ್ಯೋತಿ ಮೆರವಣಿಗೆಯಲ್ಲಿ ತಂದು ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ ನೀಡಿದ್ದರು.ಅಂದಿನಿಂದ ಅಗಸ್ಟ್ 15 ರ ವರೆಗೆ ಫಲಪುಷ್ಪ ಪ್ರದರ್ಶನ ನಡೆದಿದೆ. ಲಕ್ಷಾಂತರ ಪುನೀತ್ ಅಭಿಮಾನಿಗಳು ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದು ಹಲವು ಅಭಿಮಾನಿಗಳು ಹೂವಿನಲ್ಲಿ ಅರಳಿದ ಪುನೀತ್ ಕಂಡು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ : Ganesha festival in Idga Maidan : ಸ್ವಾತಂತ್ರ್ಯೋತ್ಸವ ಆಯ್ತು ಈಗ ಗಣೇಶೋತ್ಸವಕ್ಕೆ ಬೇಡಿಕೆ : ಮತ್ತೆ ವಿವಾದಕ್ಕೆ ಕಾರಣವಾಯ್ತು ಈದ್ಗಾ ಮೈದಾನ

ಇದನ್ನೂ ಓದಿ : Home Minister Araga Jnanendra : ಧರ್ಮದ ಆಧಾರದಲ್ಲಿ ಸರ್ಕಾರ ನಡೆಸಲು ಸಾಧ್ಯವಿಲ್ಲ; ಇಂತಹ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕಾಣಿಸುತ್ತೇವೆ : ಆರಗ ಜ್ಞಾನೇಂದ್ರ ಗುಡುಗು

Lalbagh flower show historical record, more than 3 lakh people watched in a single day

Comments are closed.