ಚಿಕ್ಕಮಗಳೂರು/ಮೈಸೂರು : cut CT Ravi’s tongue : ಮಾಜಿ ಸಿ.ಎಂ ಸಿದ್ದರಾಮಯ್ಯ ಹಾಗೂ ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಧ್ಯೆ ನಡೆಯುತ್ತಿರುವ ಲೂಟಿ ರವಿ, ಕಚ್ಚೆ ಹರುಕ ಎಂಬ ವಾಕ್ಸಮರ ಸಾಕಷ್ಟು ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಒಂದು ಕಡೆಯಿಂದ ಕಾಂಗ್ರೆಸ್ ಕಿಸಾನ್ ಸೆಲ್ ಸಿ.ಟಿ ರವಿಗೆ ಹರಕು ಕಚ್ಚೆ ಪಾರ್ಸೆಲ್ ಕಳುಹಿಸುವ ಎಚ್ಚರಿಕೆ ನೀಡಿದರೆ ಇನ್ನೊಂದು ಕಡೆ ಮೈಸೂರಿನಲ್ಲಿ ಸಿ.ಟಿ ರವಿ ವಿರುದ್ಧ ಸಿದ್ದರಾಮಯ್ಯ ಅಭಿಮಾನಿಗಳು ಸಿಡಿದೆದ್ದಿದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿರುವ ಕರ್ನಾಟಕ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ಕಾಂಗ್ರೆಸ್ ಕಿಸಾನ್ ಸೆಲ್ ನಿಂದ ಸಿ.ಟಿ ರವಿಗೆ ಹರಕು ಕಚ್ಚೆ ಪಾರ್ಸೆಲ್ ಅಭಿಯಾನದ ವಾರ್ನಿಂಗ್ ನೀಡಿದ್ದಾರೆ. ತನ್ನ ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಕೊಡದೇ ನಾಲಿಗೆ ಹರಿಬಿಡುವ ನಾಯಕ ಸಿ.ಟಿ.ರವಿ ಎಂದು ಆರೋಪ ಮಾಡಿರುವ ಸಚಿನ್ ಮೀಗಾ, ಚಿಕ್ಕಮಗಳೂರು ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಅನ್ನೋ ಭಯ ಸಿ.ಟಿ ರವಿಗೆ ಶುರುವಾಗಿದೆ. ಆ ಹೆದರಿಕೆಯಿಂದ ಸಿದ್ದರಾಮಯ್ಯ ವಿರುದ್ಧ ಸಿ.ಟಿ. ರವಿ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಸಿ.ಟಿ ರವಿ ಕ್ಷಮೆ ಕೇಳದಿದ್ರೆ ಹರಕು ಕಚ್ಚೆ ಕಳುಹಿಸುವುದಾಗಿ ಸಚಿನ್ ಮೀಗಾ ಎಚ್ಚರಿಕೆ ನೀಡಿದ್ದಾರೆ.
ಇನ್ನು ಮೈಸೂರಿನಲ್ಲಿ ಸಿ.ಟಿ ರವಿ ವಿರುದ್ದ ಸಿಡಿದೆದ್ದಿರುವ ಸಿದ್ದು ಅಭಿಮಾನಿಗಳು ಕುಡುಕ ಸಿಟಿ ರವಿ, ಉಚ್ಚೆಪುರಕ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ. ಎಸ್ ಶಿವರಾಮ್ ನೇತೃತ್ವದಲ್ಲಿ ಟೌನ್ ಹಾಲ್ ಬಳಿ ಸಿಟಿ ರವಿ ಭಾವಚಿತ್ರ ಸುಟ್ಟು ಪ್ರತಿಭಟನೆ ನಡೆಸಿದ್ದಾರೆ.
ಸಿದ್ದರಾಮಯ್ಯ ಹಿಂದುಳಿದ ವರ್ಗಗಳ, ಸಮುದಾಯಗಳ ನಾಯಕ. ಸಿದ್ದರಾಮಯ್ಯ ಅವರನ್ನು ಸಿ.ಟಿ ರವಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮತ್ತೆ ಸಿದ್ದರಾಮಯ್ಯ ವಿರುದ್ಧ ಮಾತನಾಡಿದರೆ ನಾಲಿಗೆ ಕತ್ತರಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸಿದ್ದರಾಮಯ್ಯಗೆ ಸಿಟಿ ರವಿ ಬಹಿರಂಗ ಕ್ಷಮೆಯಾಚಿಸಬೇಕು. ಬಿಜೆಪಿ ಸಿಟಿ ರವಿಯನ್ನ ಪಕ್ಷದಿಂದ ವಜಾಗೊಳಿಸಬೇಕು.ಹೀಗೆ ಮುಂದುವರಿದರೆ ಸಿಟಿ ರವಿ ಮೈಸೂರಿಗೆ ಆಗಮಿಸಿದ ವೇಳೆ ಮಸಿ ಬಳಿಯಬೇಕಾಗುತ್ತದೆ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಮತ್ತು ಸಿ.ಟಿ ರವಿ ನಡುವಿನ ವಾಕ್ಸಮರ ಮುಂದೆ ಯಾವ ಘಟನೆಗೆ ಕಾರಣ ಆಗುತ್ತೆ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : ICC T20 World Cup India Team: ಭಾರತ ಟಿ20 ವಿಶ್ವಕಪ್ ತಂಡದಲ್ಲೊಬ್ಬ “ಕೋಟಾ” ಪ್ಲೇಯರ್
Siddaramaiah fans have warned that they will cut CT Ravi’s tongue