Husband set his wife on fire :ವರದಕ್ಷಿಣೆ ಕೊಡದ್ದಕ್ಕೆ ಹೆಂಡತಿಗೆ ಬೆಂಕಿ ಹಚ್ಚಿ ಕೊಂದ ಪಾಪಿ ಗಂಡ

ಮೈಸೂರು : Husband set his wife on fire :ಹಿಂದಿನ ಕಾಲದಲ್ಲಿ ವರದಕ್ಷಿಣೆ ಪಿಡುಗು ಹೆಚ್ಚಾಗಿತ್ತು.‌ ಜನ‌ ವಿದ್ಯಾರಂತರಾಗುತ್ತಿದ್ದಂತೆ ಈ ಪಿಡುಗಿಗೆ ಕೊಂಚ ಬ್ರೇಕ್ ಬಿದ್ದಿದೆ.‌ ಆದರೂ‌ ಸಹ ಇಂದಿಗೂ ಕೆಲ‌ ಕಡೆಗಳಲ್ಲಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿರುವ ಪ್ರಕರಣ ವರದಿಯಾಗುತ್ತಿದೆ. ಮೈಸೂರಿನಲ್ಲೊಬ್ಬ ಭೂಪ ವರದಕ್ಷಿಣೆಗಾಗಿ ತನ್ನ ಹೆಂಡತಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾನೆ‌. ಈ ಸಂದರ್ಭ ಪಾರಾಗುವುದಕ್ಕೆ ಹೆಂಡತಿ ಗಂಡನನ್ನೆ ಅಪ್ಪಿಕೊಂಡ ಘಟನೆ ನಡೆದಿದೆ.

ಮೈಸೂರು ಜಿಲ್ಲೆಯ ಕೆ.ಆರ್‌.ನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಪ್ಪತೆಂಟು ವಯಸ್ಸಿನ ರಾಜೇಶ್ವರಿ ಮೃತ ಮಹಿಳೆಯಾಗಿದ್ದು, ಪತಿ ಹರೀಶ್‌ಗೆ ಗಾಯವಾಗಿದ್ದು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ನಿನ್ನೆ ತಡರಾತ್ರಿ ಆರ್ಕೇಸ್ಟ್ರಾ ನೋಡಿಕೊಂಡು ಮದ್ಯಪಾನ ಮಾಡಿಕೊಂಡು ಬಂದಿದ್ದ ಗಂಡ ಹರೀಶ್ ಪತ್ನಿ ರಾಜೇಶ್ವರಿ ಬಳಿ ಮಾಂಗಲ್ಯ ಸರ ಕೊಡುವಂತೆ ಕೇಳಿದ್ದಾನೆ. ಈ‌ ಸಂದರ್ಭ ರಾಜೇಶ್ವರಿ ತಾಳಿ‌ ಸರ ನೀಡುವುದಕ್ಕೆ ನಿರಾಕರಿಸಿದ್ದಾಳೆ‌. ಇದರಿಂದ ಕುಪಿತಗೊಂಡ ಹರೀಶ್ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚುತ್ತೇನೆ ಎಂದು ಬೆದರಿಸಿದ್ದಾನೆ. ಈ ಸಂದರ್ಭ ರಾಜೇಶ್ವರಿ ತನ್ನ ಮಗನಲ್ಲಿ ಪಕ್ಕದ ಮನೆಯವರನ್ನು ಕರೆಯುವಂತೆ ಹೇಳಿದ್ದಾಳೆ. ಆದ್ರೆ ಇಷ್ಟರಲ್ಲಾಗಲೇ ಪಾಪಿ ಗಂಡ ಸೀಮೆ ಎಣ್ಣೆ ಸುರಿದು ಪತ್ನಿಗೆ ಬೆಂಕಿ‌ ಹಚ್ಚಿದ್ದಾನೆ. ಬೆಂಕಿಯ ಕೆನ್ನಾಲೆಯಿಂದ ತಪ್ಪಿಸಿಕೊಳ್ಳಲು ಪತ್ನಿ ರಾಜೇಶ್ವರಿ ಗಂಡನನ್ನೇ ಅಪ್ಪಿಕೊಂಡಿದ್ದಾಳೆ. ಪಕ್ಕದ ಮನೆಯವರು ಬಂದು ಬೆಂಕಿ ನಂದಿಸುವ ಹೊತ್ತಿಗೆ ಇಬ್ಬರಿಗೂ ಸುಟ್ಟಗಾಯವಾಗಿದೆ‌. ಆ ಬಳಿಕ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ರಾಜೇಶ್ವರಿಗೆ ಗಂಭೀರ ಸುಟ್ಟ ಗಾಯ ಆದರಿಂದ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಳಾಗಿದ್ದಾಳೆ.

ಹರೀಶ್ ಮತ್ತು ರಾಜೇಶ್ವರಿಗೆ ಆರೂವರೆ ವರ್ಷಗಳ ಹಿಂದೆ ಮದುವೆ ಆಗಿತ್ತು. ಮದುವೆಯಾದ ದಿನದಿಂದಲೂ ಹರೀಶ್ ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಮದುವೆ ಕಾಲದಲ್ಲೇ ರಾಜೇಶ್ವರಿ ಮನೆಯವರು ಹರೀಶ್ ಗೆ 100 ಗ್ರಾಂ ಚಿನ್ನ, ಎರಡು ಲಕ್ಷ ನಗದು, ಒಂದು ಪಲ್ಸರ್ ಬೈಕನ್ನು ವರದಕ್ಷಿಣೆಯಾಗಿ ನೀಡಿದ್ದರು. ಆ ಬಳಿಕ ಸ್ವಲ್ಪ ಸಮಯದವರೆಗೆ ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದ್ರೆ ಅದಾದ ಬಳಿಕದಿಂದ ಪದೇ ಪದೇ ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದ. ಹರೀಶ್ ತಾಯಿಯು ಇದಕ್ಕೆ ಬೆಂಬಲವಾಗಿ ನಿಲ್ಲುತ್ತಿದ್ದಳು. ಹೀಗಾಗಿ ಈ ಬಗ್ಗೆ ಪತ್ನಿ ರಾಜೇಶ್ವರಿ ಪೊಲೀಸ್ ಠಾಣೆಗೂ ದೂರು ನೀಡಿದ್ದಳು. ಇದಾದ ಬಳಿಕ ಹಲವು ಬಾರಿ ನ್ಯಾಯ ಪಂಚಾಯ್ತಿ ಕೂಡ ಮಾಡಲಾಗಿತ್ತು. ಆದ್ರೆ ಪಂಚಾಯತಿ ಸಂದರ್ಭ ಸರಿಯಾಗಿ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿ ಹೋಗುತ್ತಿದ್ದ ಹರೀಶ ಮತ್ತೆ ತನ್ನ ಹಳೆ ಚಾಳಿಯನ್ನೆ ಮುಂದುವರಿಸುತ್ತಿದ್ದ.

ಸದ್ಯ ಈ ಎಲ್ಲಾ ವಿಚಾರವನ್ನು ಮೃತ ರಾಜೇಶ್ವರಿ ತಂದೆ ಸೋಮಶೇಖರ್ ವಿವರವಾಗಿ ದೂರು ಅರ್ಜಿಯಲ್ಲಿ ಬರೆದು ಸಾಲಿಗ್ರಾಮ ಪೊಲೀಸ್ ಠಾಣೆಗೆ ನೀಡಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ವರದಕ್ಷಿಣೆಗಾಗಿ ತನ್ನ ಪತ್ನಿಗೆ ಬೆಂಕಿ ಹಚ್ಚಿ ಕೊಂದು ವಿಕೃತಿ ಮೆರೆದ ಗಂಡನ ಬಗ್ಗೆ ಜನ ಕಿಡಿಕಾರುತ್ತಿದ್ದಾರೆ.

ಇದನ್ನು ಓದಿ : ICC T20 World Cup India Team: ಭಾರತ ಟಿ20 ವಿಶ್ವಕಪ್ ತಂಡದಲ್ಲೊಬ್ಬ “ಕೋಟಾ” ಪ್ಲೇಯರ್

ಇದನ್ನೂ ಓದಿ : Rajkaaluve debate :ಸದನದಲ್ಲಿ ರಾಜಕಾಲುವೆ ಚರ್ಚೆ ವೇಳೆ ಕಾಮಿಡಿ : ಆರ್​.ಅಶೋಕ್​ಗೆ ನೀನು ಕಬ್ಬಡಿ ಆಡ್ತಿದ್ದವನು ಅಲ್ವಾ ಎಂದ ಸಿದ್ದರಾಮಯ್ಯ

Husband set his wife on fire for dowry

Comments are closed.