sneaking girl out of hostel in suitcase : ಟ್ವಿಟರ್​ನಲ್ಲಿ ಧೂಳೆಬ್ಬಿಸಿದ ಸೂಟ್​ಕೇಸ್​​ ಯುವತಿಯ ವಿಡಿಯೋ: ಮಣಿಪಾಲ ವಿವಿಯಿಂದಲೂ ಸ್ಪಷ್ಟನೆ

sneaking girl out of hostel in suitcase :ಇಂಜಿನಿಯರಿಂಗ್​ ವಿದ್ಯಾರ್ಥಿಯೊಬ್ಬ ಹಾಸ್ಟೆಲ್​ನಲ್ಲಿದ್ದ ತನ್ನ ಗೆಳೆತಿಯನ್ನು ಸೂಟ್​ಕೇಸ್​ನಲ್ಲಿ ತುಂಬಿಕೊಂಡು ಹೋಗುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ವಿಡಿಯೋ ಉಡುಪಿಯ ಮಣಿಪಾಲ ವಿವಿ ಹಾಸ್ಟೆಲ್​ಗೆ ಸೇರಿದ್ದು ಎನ್ನಲಾಗಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಟ್ವಿಟರ್​ನಲ್ಲಿ ಟ್ರೋಲ್​ಗಳ ಸುರಿಮಳೆಯೇ ಹರಿಯುತ್ತಿದೆ.


ಟ್ವಿಟರ್​ ಬಳಕೆದಾರರು ಹೇಳುವಂತೆ ಈ ವಿಡಿಯೋ ಮಣಿಪಾಲದ ವಿವಿಗೆ ಸೇರಿದ್ದು ಎನ್ನಲಾಗಿದೆ. ಆದರೆ ಇದು ಸರಿಯಾಗಿ ಯಾವ ಕಾಲೇಜಿನಲ್ಲಿ ನಡೆದಿದೆ ಎಂಬುದಕ್ಕೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.


ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ವಿಡಿಯೋ 2019ರ ಮಾರ್ಚ್20ರಂದು ರೆಕಾರ್ಡ್​ ಆಗಿದೆ. ಈ ವಿಡಿಯೋ ಇದೀಗ ಮತ್ತೆ ಸೋಶಿಯಲ್​ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿ ಸೆಕ್ಯೂರಿಟಿ ಗಾರ್ಡ್ಸ್​ ವಿದ್ಯಾರ್ಥಿ ಬಳಿಯಲ್ಲಿ ಸೂಟ್​ಕೇಸ್​​ನಲ್ಲಿ ಏನಿದೆ ಎಂದು ಪ್ರಶ್ನೆ ಮಾಡುತ್ತಾರೆ. ಅಲ್ಲದೇ ಸೂಟ್​ಕೇಸ್​ನ್ನು ತೆರೆಯುವಂತೆ ಹೇಳಿದ್ದಾರೆ. ಕೊನೆಗೂ ಸೂಟ್​ಕೇಸ್​ ತೆರೆದು ನೋಡಿದಾಗ ಸತ್ಯಾಂಶ ಹೊರಬಿದ್ದಿದೆ.


ಅಂದಹಾಗೆ ಈ ವಿಡಿಯೋ ಮಣಿಪಾಲ ವಿವಿಗೆ ಸೇರಿದ್ದಲ್ಲ ಎಂದು ಮಣಿಪಾಲ ವಿವಿಯ ಮಾಧ್ಯಮ ವಕ್ತಾರ ಎಸ್​ಪಿ ಕರ್​ ಸ್ಪಷ್ಟನೆ ನೀಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಹರಡುತ್ತಿರುವ ಈ ವಿಡಿಯೋ ನಕಲಿಯಾಗಿದೆ ಹಾಗೂ ಇದಕ್ಕೂ ಮಣಿಪಾಲ ವಿವಿಯ ಯಾವುದೇ ಕಾಲೇಜಿಗೂ ಸಂಬಂಧವಿಲ್ಲ. ಹಾಸ್ಟೆಲ್​ನ ಗೇಟ್​ ಮಣಿಪಾಲ ಕ್ಯಾಂಪಸ್​ಗೆ ಹೋಲಿಕೆಯಾಗುವಂತಿದೆ. ಇದೇ ಕಾರಣಕ್ಕಾಗಿ ಇದನ್ನು ಮಣಿಪಾಲ ವಿವಿಯ ವಿಡಿಯೋ ಎಂದು ಬಿಂಬಿಸಲಾಗಿದೆ. ಆದರೆ ಇದು ಮಾರ್ಚ್​ 20- 2019ರಲ್ಲಿ ರೆಕಾರ್ಡ್ ಆದ ವಿಡಿಯೋ ಆಗಿದೆ. ಇದು ಮಣಿಪಾಲ ಹಾಸ್ಟೆಲ್​ನಲ್ಲಿ ನಡೆದಿಲ್ಲ. ಬದಲಾಗಿ ಡೆಹ್ರಾಡೂನ್​ನಲ್ಲಿ ನಡೆದ ಘಟನೆಯಾಗಿದೆ ಎಂದು ಅವರು ಹೇಳಿದ್ದಾರೆ.

Student gets caught sneaking girl out of hostel in suitcase, Twitter has a field day

ಇದನ್ನು ಓದಿ : Chinese Soldiers : ಗಾಲ್ವಾನ್​ ಕಣಿವೆ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಸೈನಿಕರ ತನಿಖಾ ವರದಿಯಲ್ಲಿ ಬಯಲಾಯ್ತು ಸ್ಫೋಟಕ ಮಾಹಿತಿ

ಇದನ್ನೂ ಓದಿ : Rahul Gandhi hits out at Modi govt :‘ಭಾರತವನ್ನು ಸಾಮ್ರಾಜ್ಯದಂತೆ ಆಳಲು ಸಾಧ್ಯವಿಲ್ಲ’ : ಮೋದಿ ಸರ್ಕಾರಕ್ಕೆ ರಾಹುಲ್​ ಟಾಂಗ್​

Comments are closed.