hacking the government server :ಸರ್ಕಾರಿ ಸರ್ವರ್ ಹ್ಯಾಕ್ ಮಾಡಿ ನಕಲಿ ಆರ್.ಟಿ.ಸಿ ಸೃಷ್ಟಿ ಮಾಡ್ತಿದ್ದ ಗ್ಯಾಂಗ್ ಅಂದರ್

ರಾಮನಗರ : hacking the government server : ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಮಾರಿ ತಗಲಾಕಿಕೊಂಡಿರುವ ಸುದ್ದಿಯನ್ನು ನೀವು ಕೇಳಿರ್ತಿರಾ, ಓದಿರ್ತಿರಾ. ಆದ್ರೆ ಇದೀಗ ಸರ್ಕಾರಿ ಸರ್ವರ್ ನ್ನೆ ಹ್ಯಾಕ್ ಮಾಡಿ ಆರ್.ಟಿ.ಸಿ ಸೃಷ್ಠಿ ಮಾಡಿ ಭೂಮಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದು ಅಂದರ್ ಆಗಿದೆ.

ರಾಮನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಪ್ರಕರಣ ಸಂಬಂಧ ರಿಯಲ್ ಎಸ್ಟೇಟ್ ಏಜೆಂಟ್, ಸೈಬರ್ ಮಾಲೀಕ, ಬ್ರೋಕರ್, ಜಿಲ್ಲಾಧಿಕಾರಿ ಕಚೇರಿಯ ಹಾರ್ಡ್ ವೇರ್ ಎಂಜಿನಿಯರ್ ಸೇರಿದಂತೆ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ. ಸರಕಾರಿ ಭೂಮಿಯನ್ನ ಬೇಕಾಬಿಟ್ಟಿ ಸೇಲ್ ಮಾಡುತ್ತಿದ್ದ ಈ ಖತರ್ನಾಕ್ ಗ್ಯಾಂಗ್ ಡಿಜಿಟಲ್ ಸಹಿ ಒಂದನ್ನು ಬಿಟ್ಟರೆ ಉಳಿದೆಲ್ಲವು ಅಸಲಿ ಆರ್‌ಟಿಸಿ ತರ ಕಾಣುವಂತೆಯೆ ವಂಚನೆ ನಡೆಸುತ್ತಿದ್ದರು.

ತಂತ್ರಾಂಶಗಳ ಲೋಪವೇ ಇವರ ಟಾರ್ಗೆಟ್ ಆಗಿದ್ದು ಕಂಡವರ ಹೆಸರಿಗೆ ಭೂಮಿಯನ್ನು ಖದೀಮರು ಪರಭಾರೆ ಮಾಡುತ್ತಿದ್ದರು. ಇದಕ್ಕಾಗಿ ಸರ್ಕಾರಿ ಸರ್ವರ್ ನ್ನೆ ಹ್ಯಾಕ್ ಮಾಡಿ ದಾಖಲೆ ಸೃಷ್ಠಿಸಿದ್ದರು. ಉಪವಿಭಾಗಾಧಿಕಾರಿಗಳು ತಹಶೀಲ್ದಾರ್ ಗಳು ಮಾಡಲಾಗದ ಕೆಲಸ ಮಾಡಿ ಫಲಾನುಭವಿಗಳಿಗೆ ಈ ಗ್ಯಾಂಗ್ ಆರ್ ಟಿಸಿ ಕೊಡುತ್ತಿದ್ದರು. ಸರ್ವರ್ ಹ್ಯಾಕ್ ಮಾಡಿ ಭೂದಾಖಲೆಯನ್ನ ತಂತ್ರಾಂಶದಲ್ಲಿ ಅಪ್ಲೋಡ್ ಮಾಡುತ್ತಿದ್ದರು.

ಈ ವಂಚನ ಜಾಲ 7 ಆರ್.ಟಿ.ಸಿ ಸೃಷ್ಠಿ ಮಾಡಿ 6 ಮಂದಿಗೆ ಭೂಮಿ ಮಾರಾಟ ಮಾಡಿರೋದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಬನ್ನಿಕುಪ್ಪೆ, ತುಗಣಿ, ರಾಂಪುರಗಳಲ್ಲಿ ಒಟ್ಟು ಆರು ಎಕರೆ ಜಾಗವನ್ನು ಮಾರಾಟ ಮಾಡಿದ್ದಾರೆ. ಇದರಿಂದಾಗಿ‌ ಸರ್ಕಾರಕ್ಕೆ ಸುಮಾರು 6 ಕೋಟಿಯಷ್ಟು ಹಣ ವಂಚನೆಯಾಗಿದೆ. ಸದ್ಯ ಬಂಧಿತ ಆರೋಪಿಗಳನ್ನು ಚಿಕ್ಕಮರೀಗೌಡ, ನರಸಿಂಹಮೂರ್ತಿ, ರಾಘವಮೂರ್ತಿ, ಅರುಣ್‌, ನಂದೀಶ್, ಶಿವರಾಜು ಎಂದು ಗುರುತಿಸಲಾಗಿದೆ.

ಈ ನಕಲಿ ಆರ್.ಟಿ.ಸಿ ಸೃಷ್ಠಿ ಜಾಲದಲ್ಲಿ ಮತ್ತಷ್ಟು ಆರೋಪಿಗಳು ಇರುವ ಶಂಕೆಯಿದ್ದು ರಾಜ್ಯದಾದ್ಯಂತ ಕೋಟ್ಯಾಂತರ ಸರ್ಕಾರಿ ಭೂಮಿ ವಂಚನೆ ಮಾಡಿರುವ ಸಾಧ್ಯತೆಯಿದೆ. ಸದ್ಯ ರಾಮನಗರ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಇದನ್ನು ಓದಿ : Yeddyurappa should resign :ಸಂಸದೀಯ ಸ್ಥಾನಕ್ಕೆ ಬಿ.ಎಸ್​ ಯಡಿಯೂರಪ್ಪ ರಾಜೀನಾಮೆ ನೀಡಬೇಕು : ಯತ್ನಾಳ್​ ಆಗ್ರಹ

ಇದನ್ನೂ ಓದಿ : BREAKING : ಐಪಿಎಲ್​ ಸೇರಿದಂತೆ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ರಾಬಿನ್​ ಉತ್ತಪ್ಪ ನಿವೃತ್ತಿ ಘೋಷಣೆ

The gang was creating fake RTC by hacking the government server

Comments are closed.