Hassan’s ticket :ದಳಪತಿಗಳ ಕುಟುಂಬದಲ್ಲೇ ಫೈಟ್​ಗೆ ಕಾರಣವಾಗಿದೆ ಹಾಸನ ಟಿಕೆಟ್​​

ಹಾಸನ :Hassan’s ticket: ಜೆ‌.ಡಿ.ಎಸ್ ಪಕ್ಷದಲ್ಲಿ ಸಂಚಲನ ಮೂಡಿಸೋ ಹೇಳಿಕೆಯೊಂದನ್ನು ಮಾಜಿ ಸಚಿವ ಎಚ್.ಡಿ ರೇವಣ್ಣ ನೀಡಿದ್ದಾರೆ. ಮಾಜಿ ಸಿ.ಎಂ ಹಾಗೇ ಸಹೋದರ ಹೆಚ್.ಡಿ ಕುಮಾರಸ್ವಾಮಿ ಬಂದು ಹೋದ ಬೃಹತ್ ಸಮಾವೇಶ ನಡೆದದ್ದೆ ನನಗೆ ಗೊತ್ತಿಲ್ಲ ಎಂದು ಹೆಚ್.ಡಿ ರೇವಣ್ಣ ಹೇಳಿರುವುದು ದಳಪತಿಗಳ ನಡುವೆ ಎಲ್ಲವೂ ಸರಿಯಿಲ್ಲ ಎಂಬುವುದನ್ನು ಸೂಚಿಸುವಂತಿದೆ.

ಕೆಲ ದಿನಗಳ ಹಿಂದಷ್ಟೇ ಹಾಸನದಲ್ಲಿ ದಿ. ಶಾಸಕ ಪ್ರಕಾಶ್ ಹುಟ್ಟುಹಬ್ಬ ಕಾರ್ಯಕ್ರಮ ನಿಮಿತ್ತ ಪ್ರಕಾಶ್ ಪುತ್ರ ಸ್ವರೂಪ್ ಶಕ್ತಿ ಪ್ರದರ್ಶನ ಮಾಡಿದ್ದ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಚ್.ಡಿ ಕುಮಾರಸ್ವಾಮಿ ಸ್ವರೂಪ್ ಗೆ ಈ ಬಾರಿ ಟಿಕೇಟ್ ನೀಡುವ ಕುರಿತಂತೆ ಒಲವು ತೋರಿದ್ದರು. ಆದ್ರೆ ಹಾಸನ ಕ್ಷೇತ್ರದ ಟಿಕೆಟ್‌ಗಾಗಿ ಭವಾನಿ ರೇವಣ್ಣ ಮತ್ತು ಸ್ವರೂಪ್ ಪ್ರಕಾಶ್ ನಡುವೆ ತೀವ್ರ ಪೈಪೋಟಿ ಇದ್ದುದರಿಂದ ಈ ವಿಚಾರ ಇದೀಗ ರೇವಣ್ಣ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಯಾವ ವಿಷಯಕ್ಕೆ ಕಾರ್ಯಕ್ರಮ ಮಾಡಿದ್ರೋ ನನಗೆ ಗೊತ್ತಿಲ್ಲ ಎಂದು ಗರಂ ಆಗಿರುವ ಎಚ್.ಡಿ ರೇವಣ್ಣ, ನನಗೆ ಅವೆಲ್ಲಾ ವಿಷ್ಯ ಗೊತ್ತಿಲ್ಲ ಸಾರ್. ನನ್ನ ಹತ್ರ ಯಾರೂ ಫೋನಲ್ಲಿ ಮಾತಾಡಿಲ್ಲ ಎಂದು ಫುಲ್ ಗರಂ ಆಗಿ ಪ್ರತಿಕಾಗೋಷ್ಠಿ ನಡುವೆಯೇ ಎದ್ದು ಹೊರಟಿದ್ದಾರೆ.

ರೇವಣ್ಣ ಅವರ ಈ ವರ್ತನೆಯಿಂದ ರೇವಣ್ಣ ಹಾಗೂ ಹೆಚ್ ಡಿಕೆ ನಡುವೆ ಹಾಸನ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ತದ್ವಿರುದ್ದ ನಿಲುವು ಇದೆ ಎಂಬುದಾಗಿ ಜನ‌ ಮಾತನಾಡಲು ಆರಂಭಿಸಿದ್ದಾರೆ. ಮೊನ್ನೆ ನಡೆದ ಸ್ವರೂಪ್ ಶಕ್ತಿ ಪ್ರದರ್ಶನ ಕಾರ್ಯಕ್ರಮ ದಳಪತಿಗಳ ಕುಟುಂಬದಲ್ಲೇ ಫ್ಯಾಮಿಲಿ ಫೈಟ್ ಗೆ ಕಾರಣವಾಯ್ತ ಎಂಬ ಸಂಶಯಕ್ಕೆ ಕಾರಣವಾಗಿದೆ.

ಮೊನ್ನೆಯ ಕಾರ್ಯಕ್ರಮಕ್ಕೂ ಮೊದಲೇ ಹಾಸನ ಜೆಡಿಎಸ್ ನಲ್ಲಿ ಅಸಮಧಾನ ಭುಗಿಲೆದ್ದಿತ್ತು. ಹಾಸನ ಕ್ಷೇತ್ರ ಟಿಕೆಟ್ ಹಂಚಿಕೆ ವಿಚಾರವಾಗಿ ದಿ.ಶಾಸಕ ಪ್ರಕಾಶ್ ಪುತ್ರ ಸ್ವರೂಪ್ ಗೆ ಟಿಕೆಟ್ ನೀಡೋದಕ್ಕೆ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಈ ವಿಚಾರವಾಗಿ ರೇವಣ್ಣ ವಿರುದ್ಧ ಜೆ.ಡಿ.ಎಸ್ ಕಾರ್ಯಕರ್ತರು ತಿರುಗಿಬಿದ್ದಿದ್ದರು. ಹೀಗಾಗಿ ಮೊನ್ನೆಯ ಕಾರ್ಯಕ್ರಮಕ್ಕೆ ರೇವಣ್ಣ ಕುಟುಂಬ ಗೈರಾಗಿತ್ತು. ಕಾರ್ಯಕ್ರಮಕ್ಕೆ ಗೈರಾಗಿರೋದಕ್ಕೆ ರೇವಣ್ಣ ದೆಹಲಿ ಸಮಾವೇಶಕ್ಕೆ ಹೋಗಿದ್ದಾರೆ ಎಂದು ವೇದಿಕೆಯಲ್ಲಿದ್ದ ಜೆ.ಡಿ.ಎಸ್ ನಾಯಕರು ಸಮಜಾಯಿಷಿ ‌ನೀಡಿದ್ದರು.

ಕಾರ್ಯಕ್ರಮಕ್ಕೆ ಯಾಕೆ ಗೈರು ಆಗಿದ್ದಿರಿ ಎಂದು ಪ್ರತಿಕ್ರೆಯೆ ಕೇಳಿದಕ್ಕೆ ಹೆಚ್‌.ಡಿ ರೇವಣ್ಣ ಈ ರೀತಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಮೊನ್ನೆ ನಡೆದ ಕಾರ್ಯಕ್ರಮದಿಂದ ರೇವಣ್ಣ ಕುಟುಂಬ ಕೋಪಗೊಂಡಿದೆ ಎಂದು ಗೊತ್ತಾಗಿದೆ. ಒಟ್ಟಿನಲ್ಲಿ ಜೆ.ಡಿ.ಎಸ್ ನಿಂದ ಹಾಸನದಲ್ಲಿ ಟಿಕೇಟ್ ನೀಡುವ ವಿಚಾರದಲ್ಲಿ ದಳಪತಿಗಳ ನಡುವೆ ಫ್ಯಾಮಿಲಿ ಫೈಟ್ ಗೆ ಕಾರಣವಾಗಿದ್ದು ಮುಂದೆ ಯಾವ ರಾಜಕೀಯ ಬೆಳವಣಿಗೆಗೆ ಕಾರಣವಾಗುತ್ತೆ ಎಂದು ಕಾದು ನೋಡಬೇಕಾಗಿದೆ.

ಇದನ್ನು ಓದಿ : Asad Rauf died : ಮಾಜಿ ಐಸಿಸಿ ಅಂಪೈರ್, ಪಾಕಿಸ್ತಾನದ ಅಸಾದ್ ರೌಫ್ ಹೃದಯಾಘಾತದಿಂದ ನಿಧನ

ಇದನ್ನೂ ಓದಿ : Yeddyurappa should resign :ಸಂಸದೀಯ ಸ್ಥಾನಕ್ಕೆ ಬಿ.ಎಸ್​ ಯಡಿಯೂರಪ್ಪ ರಾಜೀನಾಮೆ ನೀಡಬೇಕು : ಯತ್ನಾಳ್​ ಆಗ್ರಹ

There is a possibility of a conflict in Devegowda’s family regarding Hassan’s ticket

Comments are closed.