ಭಕ್ತರ ಸೋಗಿನಲ್ಲಿ ದೇವಸ್ಥಾನದ ಕಾಣಿಕೆಡಬ್ಬಿ ಕಳವು : ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಕಳ್ಳನ ಕೈಚಳಕ

0

ವಿಟ್ಲ : ಭಕ್ತರ ಸೋಗಿನಲ್ಲಿ ಬಂದ ಕಳ್ಳ ದೇವಸ್ಥಾನದ ಕಾಣಿಕೆ ಡಬ್ಬವನ್ನು ಕಳವು ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ವೀರಕಂಬ ಗ್ರಾಮದ ಕೆಲಿಂಜ ಉಳ್ಳಾಲ್ತಿ ದೇವಸ್ಥಾನದಲ್ಲಿ ನಡೆದಿದೆ. ಕಳ್ಳರು ಕಾಣಿಕೆ ಡಬ್ಬವನ್ನು ಕಳವು ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೈಯಲ್ಲಿ ಚೀಲ ಹಿಡಿದು ದೇವಸ್ಥಾನಕ್ಕೆ ಬಂದ ಕಳ್ಳ

ಫೆಬ್ರವರಿ 15ರಂದು ದೇವಸ್ಥಾನದಲ್ಲಿ ಕಾಣಿಕೆ ಡಬ್ಬ ಕಳವಾವಿತ್ತು. ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕಳ್ಳರ ಕೈಚಳಕ ಬಯಲಾಗಿದೆ.

ವ್ಯಕ್ತಿಯೋರ್ವ ಇರುವುದನ್ನು ಗಮನಿಸಿ ದೇವರಿಗೆ ಅಡ್ಡಬಿದ್ದಿರುವ ಕಳ್ಳ

ಫೆಬ್ರವರಿ 14ರಂದು ದೇವಸ್ಥಾನದಲ್ಲಿ ಜಾತ್ರಾಮಹೋತ್ಸವ ನಡೆದಿತ್ತು. ಮರು ದಿನ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯವನ್ನು ನಡೆಸಲಾಗುತ್ತಿತ್ತು. ಈ ವೇಳೆಯಲ್ಲಿ ವ್ಯಕ್ತಿಯೋರ್ವ ದೇವಸ್ಥಾನಕ್ಕೆ ಬಂದಿದ್ದಾನೆ. ಗೋಣಿ ಚೀಲ ಹಿಡಿದು ದೇವಸ್ಥಾನಕ್ಕೆ ಬರುತ್ತಾನೆ.

ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕಾಣಿಕೆ ಡಬ್ಬವನ್ನು ಚೀಲಕ್ಕೆ ತುಂಬಿಸುತ್ತಿರುವುದು.

ಬಳಿಕ ಆತ ದೇವಸ್ಥಾನದ ಮೆಟ್ಟಲಿಗೆ ಕೂ ಮುಗಿಯುವ ನಾಟಕವಾಡಿ ದೇವರಿಗೆ ಅಡ್ಡ ಬೀಳುತ್ತಾನೆ.

ಅದೇ ಹೊತ್ತಿಗೆ ಇನ್ನೋರ್ವ ವ್ಯಕ್ತಿ ಇರುವುದನ್ನು ಗಮನಿಸಿ ಸುಮಾರು ಹೊತ್ತು ದೇವರಿಗೆ ಪ್ರಾರ್ಥಸೋ ನಾಟಕವಾಡುತ್ತಾನೆ.

ನಂತರ ಅಲ್ಲಿ ಯಾರೂ ಇಲ್ಲಾ ಅನ್ನೋದನ್ನು ಖಚಿತ ಪಡಿಸಿಕೊಂಡು, ಮೆಟ್ಟಿಲ ಮೇಲಿದ್ದ ಕಾಣಿಗೆ ಡಬ್ಬವನ್ನು ಗೋಣಿ ಚೀಲದಲ್ಲಿ ತುಂಬಿಸಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಈ ಕುರಿತು ದೇವಸ್ಥಾನದ ಆಡಳಿತ ಮೊಕ್ತೇಸರ ಪುಂಡಿಕಾಯಿ ಶಂಕರನಾರಾಯಣ ಭಟ್ ವಿಟ್ಲ ಠಾಣೆಗೆ ದೂರು ನೀಡಿದ್ದು, ವಿಟ್ಲ ಠಾಣಾಧಿಕಾರಿ ವಿನೋದ್ ಹಾಗೂ ಸಿಬ್ಬಂಧಿ ಹುಂಡಿ ಕಳ್ಳನಿಗಾಗಿ ಬಲೆ ಬೀಸಿದ್ದಾರೆ.

https://www.youtube.com/watch?v=G4_JzsTXmPY
Leave A Reply

Your email address will not be published.