ತುಮಕೂರು : leopard in Tumkur :ಹುಲಿ,ಚಿರತೆ, ಸಿಂಹಗಳ ಹೆಸರು ಕೇಳಿದರೆ ಸಾಕು ಮೈ ಝುಂ ಎನ್ನುತ್ತೆ. ಇವುಗಳು ನಮ್ಮ ಸಮೀಪ ಬರುವುದು ಹಾಗಿರಲಿ. ಊರಿಗೆ ಈ ವಾಘ್ರ್ಯಗಳು ಬಂದಿವೆ ಎಂಬ ಸುದ್ದಿ ಸಿಕ್ಕರೂ ನಮಗೆ ಎದೆ ಝಲ್ ಎಂಬಂತೆ ಆಗುತ್ತದೆ. ಗ್ರಾಮಗಳಿಗೆ ಚಿರತೆಗಳು ಬಂದಿವೆ ಎಂಬ ಸುದ್ದಿ ಸಿಕ್ಕಾಕ್ಷಣವೇ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡುವ ಕೆಲಸವನ್ನು ಮಾಡಲಾಗುತ್ತದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮೂವರು ಯುವಕರು ಬರಿಗೈನಲ್ಲಿ ಚಿರತೆಯನ್ನು ಸೆರೆ ಹಿಡಿದಿದ್ದು ಈ ವಿಡಿಯೋ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.
ತುಮಕೂರು ಜಿಲ್ಲೆಯ ಶಿರಾ ಭಾಗದ ಸ್ಥಳೀಯರ ಮೊಬೈಲ್ಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಚಿರತೆಯನ್ನು ಅಟ್ಟಾಡಿಸಿಕೊಂಡು ಬಂದ ಮೂವರು ಯುವಕರು ಆ ಚಿರತೆಯನ್ನು ಹಿಡಿದಿದ್ದು ಮಾತ್ರವಲ್ಲದೇ ಕಿಂಚಿತ್ತೂ ಭಯವಿಲ್ಲದೆಯೇ ಅದರ ಮುಖಕ್ಕೆ ಮುತ್ತಿಟ್ಟಿದ್ದಾರೆ. ಈ ಮೂವರು ಯುವಕರ ಕಾರ್ಯಾಚರಣೆಗೆ ಒಂದು ನಾಯಿ ಕೂಡ ಸಾಥ್ ನೀಡಿರೋದನ್ನು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ರಾಗಲಹಳ್ಳಿ ಎಂಬಲ್ಲಿ ಈ ರೀತಿ ಚಿರತೆಯನ್ನು ಯಾವುದೇ ಸುರಕ್ಷತಾ ಕ್ರಮಗಳನ್ನು ಬಳಕೆ ಮಾಡದೆಯೇ ಸೆರೆ ಹಿಡಿಯಲಾಗಿದೆ ಎಂಬ ಆರೋಪ ಎದುರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಯಾರೋ ಅಪರಿಚಿತರು ಈ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಆದರೆ ಈ ಸಂಬಂಧ ತುಮಕೂರು ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು ಈ ರೀತಿಯ ಯಾವುದೇ ಘಟನೆ ಶಿರಾ ಭಾಗದಲ್ಲಿ ನಡೆದಿಲ್ಲ ಎಂದು ಹೇಳುತ್ತಿದ್ದಾರೆ.
ಈ ವಿಡಿಯೋ ನೋಡಿದ ಜನರು ಮಾತ್ರ ಮೂಗಿನ ಮೇಲೆ ಬೆರಳಿಟ್ಟಿದ್ದು ಈ ರೀತಿಯಾಗಿ ಚಿರತೆಯನ್ನು ಹಿಡಿದಿರೋದು ಎಲ್ಲಿ..? ಚಿರತೆಯನ್ನು ಹಿಡಿದ ಆ ಮೂವರು ಸಾಹಸಿಗರು ಯಾರು..? ಎಂದೆಲ್ಲ ಚರ್ಚೆ ಮಾಡುತ್ತಿದ್ದಾರೆ .
ಇದನ್ನು ಓದಿ : teacher poured hot water : ಸಮವಸ್ತ್ರದಲ್ಲೇ ಮಲವಿಸರ್ಜನೆ ಮಾಡಿದ್ದಕ್ಕೆ ವಿದ್ಯಾರ್ಥಿ ಮೈ ಮೇಲೆ ಬಿಸಿ ನೀರು ಸುರಿದ ಶಿಕ್ಷಕ
ಇದನ್ನೂ ಓದಿ : Virat Kohli KL Rahul : ಕೊಹ್ಲಿ ಆರಂಭಿಕನಾಗಿ ಆಡಿದರೆ ನಾನೇನು ಹೊರಗೆ ಕೂರಬೇಕಾ ; ಕೆ.ಎಲ್ ರಾಹುಲ್ ಹೀಗಂದಿದ್ದೇಕೆ ?
Three youths caught a leopard in Tumkur