rain damage in Bangalore: ರಾಜ್ಯ ರಾಜಧಾನಿಯಲ್ಲಿ ನೆರೆ ಹಾನಿ ಅಭಿಪ್ರಾಯ ಸಂಗ್ರಹಕ್ಕೆ ಕಾಂಗ್ರೆಸ್​ನಿಂದ ಸಮಿತಿ ರಚನೆ

ಬೆಂಗಳೂರು :rain damage in Bangalore : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಅವಾಂತರಗಳೇ ಸೃಷ್ಟಿಯಾಗಿದೆ. ಮಹದೇವಪುರ ಹಾಗೂ ಬೆಳ್ಳಂದೂರು ವ್ಯಾಪ್ತಿಯಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಈ ರೀತಿಯ ನೆರೆ ಪರಿಸ್ಥಿತಿ ಉಂಟಾಗಲು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಾಡಲಾದ ಒತ್ತುವರಿ ಕಾರಣ ಎಂದು ಹೇಳಿದೆ. ಈ ಎಲ್ಲದರ ನಡುವೆ ರಾಜ್ಯ ಕಾಂಗ್ರೆಸ್​ ಮಳೆ ಹಾಗೂ ಪ್ರವಾಹ ಹಾನಿಯ ಬಗ್ಗೆ ಜನರ ಅಭಿಪ್ರಾಯವನ್ನು ಸಂಗ್ರಹಣೆ ಮಾಡಲು ಬೆಂಗಳೂರಿನಲ್ಲಿ ವಿಶೇಷ ಸಮಿತಿಯೊಂದನ್ನು ರಚನೆ ಮಾಡಿದೆ.

ರಾಜ್ಯ ಕಾಂಗ್ರೆಸ್​ನಿಂದ ನಿರ್ಮಿತವಾದ ಈ ಸಮಿತಿಯಲ್ಲಿ ಕೃಷ್ಣ ಬೈರೇಗೌಡ, ಪದ್ಮಾವತಿ ಸೇರಿದಂತೆ ಅನೇಕ ಸದಸ್ಯರಿದ್ದು ಈ ಸಮಿತಿಯ ನೇತೃತ್ವವನ್ನು ಹಿರಿಯ ಕಾಂಗ್ರೆಸ್​ ನಾಯಕ ರಾಮಲಿಂಗಾರೆಡ್ಡಿ ವಹಿಸಿದ್ದಾರೆ. ಬೆಂಗಳೂರಿನ ಜನತೆಯಿಂದ ಮುಂದಿನ 15 ದಿನಗಳ ಒಳಗಾಗಿ ಆನ್​ಲೈನ್​ ಮುಖಾಂತರ ನೆರೆ ಹಾನಿ ಕುರಿತಂತೆ ಅಭಿಪ್ರಾಯವನ್ನು ಸಂಗ್ರಹಿಸಲು ಈ ಸಮಿತಿಯು ಮುಂದಾಗಿದೆ.

ಈ ವಿಚಾರವಾಗಿ ಇಂದು ಬೆಂಗಳೂರಿನ ಕಾಂಗ್ರೆಸ್​ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​, ಬೆಂಗಳೂರಿನ ಜನತೆಯ ಪಾಲಿಗೆ ನಾವು ಧ್ವನಿಯಾಗಲು ನಿರ್ಧರಿಸಿದ್ದೇವೆ. ಪ್ರವಾಹ ಪೀಡಿತ ಜನತೆಗೆ ಸೂಕ್ತ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಸೂಕ್ತ ಚರ್ಚೆಯನ್ನು ನಡೆಸಲು ರಾಜ್ಯ ಸರ್ಕಾರವು ಸರ್ವ ಪಕ್ಷಗಳ ಸಭೆಯನ್ನು ಕರೆಯಬೇಕುದೆ. ಪ್ರವಾಹದಿಂದಾಗಿ ಮನೆಯನ್ನು ಕಳೆದುಕೊಂಡವರಿಗೆ 5 ಲಕ್ಷಗಳವರೆಗೆ ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಅನೇಕರು ಭಾರೀ ಮಳೆಯಿಂದಾಗಿ ಮನೆಯ ಕೆಲವು ಅಗತ್ಯ ವಸ್ತುಗಳನ್ನು ಕಳೆದುಕೊಂಡಿದ್ದಾರೆ . ಇಂತವರ ಕಡೆಯೂ ಸರ್ಕಾರ ಗಮನಹರಿಸಬೇಕು. ಸರ್ಕಾರವು ನೆರೆ ಪೀಡಿತರಿಗಾಗಿ ಸಹಾಯವಾಣಿಗಳನ್ನು ತೆರೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಆಗ್ರಹಿಸಿದ್ದಾರೆ.

ನೆರೆ ಅನಾಹುತಕ್ಕೆ ಮಾಧ್ಯಮಗಳು ಮತ್ತು ಕಾಂಗ್ರೆಸ್​ ಕಾರಣ ಎಂದು ಆರೋಪಿಸಿದ್ದ ಸಂಸದ ತೇಜಸ್ವಿ ಸೂರ್ಯರಿಗೂ ಇದೇ ವೇಳೆ ಟಾಂಗ್​ ನೀಡಿದ ಅವರು, ಸ್ವತಃ ಅಟಲ್​ ಬಿಹಾರಿ ವಾಜಪೇಯಿ ಬೆಂಗಳೂರಿನ ಸೌಂದರ್ಯವನ್ನು ಹೊಗಳಿದ್ದರು. ಆದರೆ ಅದರ ಘನತೆಯನ್ನು ಈಗಿನ ಬಿಜೆಪಿ ಸರ್ಕಾರ ಕಳೆಯುತ್ತಿದೆ. ನಾವು ಬೆಂಗಳೂರಿನ ಘನತೆಯನ್ನು ಹೆಚ್ಚಿಸಲು ಯತ್ನಿಸುತ್ತಿದ್ದೇವೆ. ಹೀಗಾಗಿ ಬೆಂಗಳೂರು ಜನತೆಯ ಧ್ವನಿಯಾಗುವ ಸಲುವಾಗಿ ಈ ಸಮಿತಿ ರಚಿಸಿದ್ದೇವೆ ಎಂದು ಹೇಳಿದರು .

ಇದನ್ನು ಓದಿ : Virat Kohli KL Rahul : ಕೊಹ್ಲಿ ಆರಂಭಿಕನಾಗಿ ಆಡಿದರೆ ನಾನೇನು ಹೊರಗೆ ಕೂರಬೇಕಾ ; ಕೆ.ಎಲ್ ರಾಹುಲ್ ಹೀಗಂದಿದ್ದೇಕೆ ?

ಇದನ್ನೂ ಓದಿ : leopard in Tumkur : ಬರಿಗೈನಲ್ಲಿ ಚಿರತೆ ಸೆರೆ ಹಿಡಿದ ಮೂವರು ಯುವಕರು : ಮೈ ಝುಂ ಎನ್ನಿಸುತ್ತೆ ಈ ಭಯಾನಕ ವಿಡಿಯೋ

Congress has formed a committee to collect people’s opinion regarding rain damage in Bangalore

Comments are closed.