Sai Pallavi : ಪುಷ್ಪ2 ಸಿನಿಮಾದಲ್ಲಿ ಸಾಯಿ ಪಲ್ಲವಿ

ಪುಷ್ಪ ಸಿನಿಮಾದ ಬಿಗ್‌ ಸಕ್ಸಸ್‌ ಬೆನ್ನಲ್ಲೇ ಚಿತ್ರತಂಡ “ಪುಷ್ಪ2″(Pushpa 2) ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಸದ್ಯದಲ್ಲಿಯೇ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಈಗಾಗಲೇ (Allu Arjun) ಅಲ್ಲು ಅರ್ಜುನ್‌ ಹಾಗೂ ರಶ್ಮಿಕಾ ಮಂದಣ್ಣ(Rashmika Mandanna) ತಯಾರಿ ನಡೆಸುತ್ತಿದ್ದಾರೆ. ಈ ನಡುವಲ್ಲೇ ಮಲೆಯಾಲಂ ಬ್ಯೂಟಿ (Sai Pallavi) ಸಾಯಿ ಪಲ್ಲವಿ ಹೆಸರು (Pushpa 2)ಪುಷ್ಪ2 ಸಿನಿಮಾದಲ್ಲಿ ಕೇಳಿಬರುತ್ತಿದೆ.

ಸಾಯಿ ಪಲ್ಲವಿ(Sai Pallavi) ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ. ತನ್ನ ನೈಜ ಸೌಂದರ್ಯದಿಂದಲೇ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಯಾವುದೇ ಪಾತ್ರಕ್ಕೂ ಸೈ ಎನಿಸಿಕೊಳ್ಳುವ ಸಾಯಿ ಪಲ್ಲವಿ, ಎಂತಹದ್ದೇ ಪಾತ್ರಕ್ಕೂ ಜೀವ ತುಂಬುವ ತಾಕತ್ತು ಹೊಂದಿದ್ದಾರೆ. ಸಾಯಿ ಪಲ್ಲವಿ ಇತ್ತೀಚಿಗಷ್ಟೇ ನಟಿಸಿದ ‘ವಿರಾಟ ಪರ್ವಂ’ ಮತ್ತು ‘ಗಾರ್ಗಿ’ ಸಿನಿಮಾ ಥಿಯೇಟರ್‌ನಲ್ಲಿ ಹೇಳಿಕೊಳ್ಳುವಂತಹ ಸದ್ದು ಮಾಡದೇ ಇದ್ದರೂ ಕೂಡ ಒಟಿಟಿ ಮೂಲಕ ಪ್ರೇಕ್ಷಕರ ಮನ ಗೆದ್ದಿದೆ. ಜೊತೆಗೆ ಸಾಯಿ ಪಲ್ಲವಿ ನಟನೆಯ ಯಾವುದೇ ಸಿನಿಮಾವೂ ಇಂದಿಗೂ ನಷ್ಟ ಕಂಡಿಲ್ಲ. ಈ ನಡುವಲ್ಲೇ ಸದ್ಯದಲ್ಲೆ ಪುಷ್ಪ 2 ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಸಿನಿಮಾದಲ್ಲಿ ಸಾಯಿ ಪಲ್ಲವಿಯವರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವಂದತಿ ಎಲ್ಲೆಡೆ ಹರಡುತ್ತಿದೆ.

“ಪುಷ್ಪ” ಸಿನಿಮಾವು (Allu Arjun) ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ(Rashmika Mandanna) ನಟನೆಯಲ್ಲಿ ಅದ್ಬುತವಾಗಿ ಮೂಡಿಬಂದಿದ್ದು, ಸಿನಿಮಾದ ಹಾಡುಗಳು ದೊಡ್ಡ ಮಟ್ಟದಲ್ಲಿ ಸಖತ್‌ ಹಿಟ್‌ ಆಗಿದ್ದವು. ಹೀಗಿರುವಾಗಲೇ ನ್ಯಾಚುರಲ್‌ ಬ್ಯೂಟಿ ಸಾಯಿಪಲ್ಲವಿ ಪುಷ್ಪ ಸಿನಿಮಾದಲ್ಲಿ ಬುಡಕಟ್ಟು ಜನಾಂಗದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಗಾಸಿಪ್‌ ಹರಿದಾಡುತ್ತಿದೆ. ಈ ಕುರಿತು ಸಿನಿಮಾದ ನಿರ್ಮಾಪಕರು ಸಂದರ್ಶನವೊಂದರಲ್ಲಿ ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ ಗುಂಡಮ್ಮ: ಹಿರೋಯಿನ್ ಸ್ಥಾನಕ್ಕೆ ಭಡ್ತಿ ಪಡೆದ ಗೀತಾ ಭಟ್

ಇದನ್ನೂ ಓದಿ: ಮುಹೂರ್ತ ಆಚರಿಸಿಕೊಂಡ ‘Case of ಕೊಂಡಾಣ : ದೇವಿಪ್ರಸಾದ್ ಶೆಟ್ಟಿ ಜೊತೆಗೆ ವಿಜಯ್ ರಾಘವೇಂದ್ರ

ಇದನ್ನೂ ಓದಿ: ತಂದೆಯ ಸಿನಿಮಾವನ್ನು ರಿಕ್ರಿಯೇಟ್​ ಮಾಡಲು ಬಯಸಿದ್ದರಂತೆ ಪುನೀತ್​ ರಾಜ್​ಕುಮಾರ್​​

ಪುಷ್ಪಾ ನಿರ್ಮಾಪಕ ವೈ. ರವಿಶಂಕರ್‌ “ಪಿಂಕ್‌ ವಿಲ್ಲಾ”ಗೆ ನೀಡಿದ ಸಂದರ್ಶನದಲ್ಲಿ ಪುಷ್ಪ 2 ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಪುಷ್ಪ 2 ಸಿನಿಮಾವನ್ನು ಸುಕುಮಾರ್‌ ನಿರ್ದೇಶನ ಮಾಡಲಿದ್ದು, ಮೈತ್ರಿ ಮೂವೀ ಮೇಕರ್ಸ್‌ ಸಂಸ್ಥೆಯವರ ಮೂಲಕ ಸಿನಿಮಾ ನಿರ್ಮಾಣಗೊಳ್ಳಲಿದೆ. ನಾಯಕನಾಗಿ (Allu Arjun) ಅಲ್ಲು ಅರ್ಜುನ್‌ ನಾಯಕಿಯಾಗಿ (Rashmika Mandanna)ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್​, ಫಹಾದ್​ ಫಾಸಿಲ್​ ಸೇರಿದಂತೆ ಹಲವು ನಟ, ನಟಿಯರು ಸಿನಿಮಾದಲ್ಲಿ ನಟಸಲಿದ್ದಾರೆ. ಆದರೆ ಮಲಯಾಲಂ ನಟಿ ಸಾಯಿ ಪಲ್ಲವಿಯವರು ಯಾವುದೇ ಪಾತ್ರವನ್ನು ಚಿತ್ರದಲ್ಲಿ ನಿಭಾಯಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Sai Pallavi in ​​the movie Pushpa 2

Comments are closed.