krs dam in mandya : ತ್ರಿವರ್ಣ ದೀಪಾಲಂಕಾರದಲ್ಲಿ ಬೆಳಗಿದ ಸುಪ್ರಸಿದ್ಧ ಕೆಆರ್​ಎಸ್​ ಅಣೆಕಟ್ಟು : ವಿಡಿಯೋ ವೈರಲ್​

ಮಂಡ್ಯ : krs dam in mandya : ರಾಜ್ಯಾದ್ಯಂತ ವರುಣನ ಅಬ್ಬರ ಮಿತಿಮೀರಿದೆ. ಭಾರೀ ಮಳೆಯಿಂದಾಗಿ ಮಲೆನಾಡು, ಕರಾವಳಿಯಾದ್ಯಂತ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆ ಹಿನ್ನೆಲೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್ ಘೋಷಣೆಯಾಗಿದ್ದು ಕಳೆದೊಂದು ವಾರದಿಂದ ಶಾಲಾ – ಕಾಲೇಜುಗಳಿಗೆ ಬೀಗ ಜಡಿಯಲಾಗಿದೆ. ಈ ಎಲ್ಲದರ ನಡುವೆ ಭಾನುವಾರದಂದು ಮಂಡ್ಯದ ಸುಪ್ರಸಿದ್ಧ ಕೃಷ್ಣರಾಜಸಾಗರ ಅಣೆಕಟ್ಟು ತ್ರಿವರ್ಣ ಧ್ವಜದಲ್ಲಿ ಕಂಗೊಳಿಸಿದ್ದು ನೋಡುಗರ ಮನಸೂರೆಗೊಳಿಸಿದೆ.


ಮಂಡ್ಯದ ಕೃಷ್ಣರಾಜ ಸಾಗರದಲ್ಲಿ ಭಾರೀ ಮಳೆಯಿಂದಾಗಿ ಅಣೆಕಟ್ಟಿನ ಒಳ ಹರಿವು ಹೆಚ್ಚಾಗಿದೆ. ಹೀಗಾಗಿ ಭಾನುವಾರ ರಾತ್ರಿ ಅಣೆಕಟ್ಟಿನ ನೀರಿಗೆ ತ್ರಿವರ್ಣ ಧ್ವಜದ ದೀಪಾಲಂಕಾರ ಮಾಡಲಾಗಿತ್ತು.ಈ ದೃಶ್ಯಾವಳಿಗಳ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಕೇಸರಿ , ಬಿಳಿ ಹಾಗೂ ಹಸಿರು ಬಣ್ಣಗಳಲ್ಲಿ ಕಂಗೊಳಿಸುತ್ತಿದ್ದ ಆಣೆಕಟ್ಟಿನ ಸೌಂದರ್ಯ ನೋಡುಗರ ಕಣ್ಣಿಗೆ ಹಬ್ಬದೂಟವನ್ನೇ ಬಡಿಸಿದಂತ್ತಿತ್ತು.


ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಕರಾವಳಿ ಭಾಗಗಳಲ್ಲಿ ಮಳೆಯ ಪ್ರಮಾಣ ಮಿತಿ ಮೀರಿದೆ.ರಸ್ತೆಗಳು ಜಲಾವೃತಗೊಂಡಿದ್ದು ವಾಹನ ಸವಾರರು ಪರದಾಡುವಂತಾಗಿದೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆಯಾಗಿದ್ದು ರೆಡ್​ ಅಲರ್ಟ್ ಘೋಷಣೆಯಾಗಿದೆ. ನಿನ್ನೆ ಕೂಡ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದ ಇಂದು ಅಂಗನವಾಡಿಯಿಂದ ಪ್ರೌಢ ಶಾಲೆಗಳವರೆಗೆ ರಜೆ ಘೋಷಣೆಯಾಗಿದೆ. ಇಂದೂ ಸಹ ಈ ಎರಡೂ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ.

ಇದನ್ನು ಓದಿ : ವಿಭಿನ್ನವಾಗಿ ಬಕ್ರೀದ್ ಹಬ್ಬದ ಶುಭಾಶಯ ಹೇಳಿದ ಟೀಮ್ ಇಂಡಿಯಾ ತ್ರಿವಳಿ ವೇಗಿಗಳು

ಇದನ್ನೂ ಓದಿ : Rohit Best T20 Captain: ಟಿ20 ನಾಯಕತ್ವ: ಬೆಸ್ಟ್ ವಿನ್ %ನಲ್ಲಿ ಹಿಟ್ ಮ್ಯಾನ್ ರೋಹಿತ್ ಈಗ ಜಗತ್ತಿಗೇ ನಂ.1 ಕ್ಯಾಪ್ಟನ್

tricolour themed lights illuminate krs dam in mandya

Comments are closed.