ಮಂಗಳೂರು : love with transgender : ಫೇಸ್ಬುಕ್,ಇನ್ಸ್ಟಾಗ್ರಾ ಹಾಗೂ ವಾಟ್ಸಾಪ್ನಂತಹ ಸಾಮಾಜಿಕ ಜಾಲತಾಣ ವೇದಿಕೆಗಳು ಎಷ್ಟು ಪ್ರಯೋಜನಕಾರಿಯೋ ದಾರಿ ತಪ್ಪುವವರಿಗೆ ಅಷ್ಟೇ ಮಾರಕ ಕೂಡ ಹೌದು. ಫೇಸ್ಬುಕ್ನಲ್ಲಿ ಗುರುತು ಪರಿಚಯವಿಲ್ಲದ ಯುವಕನನ್ನು ಪ್ರೀತಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಯುವತಿ ಆತನ ಅಸಲಿಯತ್ತನ್ನು ತಿಳಿದು ಬೆಚ್ಚಿ ಬಿದ್ದಿದ್ದಾಳೆ . ಪ್ರೀತಿಗಾಗಿ ಕುಟುಂಬಸ್ಥರನ್ನೇ ಎದುರು ಹಾಕಿಕೊಂಡಿದ್ದ ಈಕೆ ಇದೀಗ ಪಶ್ಚಾತಾಪದಿಂದ ಮರಗುವಂತಾಗಿದೆ.
ವಿಟ್ಲ ಪಡ್ನೂರು ಗ್ರಾಮದ ನಿವಾಸಿಯಾಗಿದ್ದ ಯುವತಿ ನಾಲ್ಕು ವರ್ಷಗಳ ಹಿಂದೆ ಫೇಸ್ಬುಕ್ನಲ್ಲಿ ಯುವಕನನ್ನು ಪರಿಚಯ ಮಾಡಿಕೊಂಡಿದ್ದಳು. ಪ್ರದೀಪ್ ಎಂಬ ಹೆಸರಿನ ಈತ ಯುವತಿಯ ಜೊತೆ ಸ್ನೇಹ ಬೆಳೆಸಿಕೊಂಡಿದ್ದು ಮಾತ್ರವಲ್ಲದೇ ಪ್ರೇಮದ ಪಾಶಕ್ಕೂ ಬೀಳಿಸಿದ್ದ. ಯುವತಿಯು ಪ್ರದೀಪ್ನೊಂದಿಗೆ ಎಷ್ಟರ ಮಟ್ಟಿಗೆ ಕ್ಲೋಸ್ ಆಗಿದ್ದಳು ಅಂದರೆ ಫೇಸ್ಬುಕ್ ಲವ್ ಏನೂ ಬೇಡ ಎಂದು ಬುದ್ಧಿವಾದ ಹೇಳಿದ್ದ ಪೋಷಕರನ್ನೇ ಎದುರು ಹಾಕಿ ಕೊಂಡಿದ್ದಳು.
ಸಿವಿಲ್ ಎಂಜಿನಿಯರ್ ಎಂದು ಹೇಳಿಕೊಂಡಿದ್ದ ಪ್ರದೀಪ್ನನ್ನು ಪ್ರೀತಿಸಬೇಡ ಎಂದು ಯುವತಿಯ ತಾಯಿ ಶೈಲಜಾ ರಾಜೇಶ್ ಬುದ್ಧಿವಾದ ಹೇಳಿದರೆ ಮಗಳು ಕೇಳಿರಲಿಲ್ಲ. ವೃತ್ತಿಯಲ್ಲಿ ವಕೀಲೆಯಾಗಿದ್ದ ಶೈಲಜಾ ರಾಜೇಶ್ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪ್ರದೀಪ್ ವಿಚಾರಣೆ ನಡೆಸುವಂತೆ ಕೋರಿದ್ದರು. ಉಡುಪಿ ಶಂಕರನಾರಾಯಣ ಠಾಣೆ ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರದೀಪ್ ಸಿದ್ದಾಪುರದವನು ಎಂಬ ವಿಚಾರವನ್ನು ಪತ್ತೆ ಮಾಡಿದ್ದಾರೆ.
ಆತನ ಊರನ್ನು ಹುಡುಕಿ ಹೋದ ಪೊಲೀಸರಿಗೆ ಅಸಲಿ ಪ್ರದೀಪ್ನನ್ನು ಕಂಡು ಶಾಕ್ ಆಗಿದೆ. ಏಕೆಂದರೆ ಅಸಲಿಗೆ ಈತ ಪ್ರದೀಪನೇ ಆಗಿರಲಿಲ್ಲ. ಜ್ಯೋತಿ ಎಂಬ ಹೆಸರಿನ ಮಂಗಳ ಮುಖಿ ಗಂಡಸಿನ ಧ್ವನಿಯಲ್ಲಿ ಮಾತನಾಡುತ್ತಾ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಳು. ಈ ಪ್ರಕರಣವನ್ನು ಭೇದಿಸಿದ ಪೊಲೀಸರು ಫೇಸ್ಬುಕ್ ಲವ್ಗೆ ಕೊನೆ ಹಾಡಿದ್ದಾರೆ.
ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ : YouTube Remove Videos:ಗರ್ಭಪಾತದ ಬಗ್ಗೆ ತಪ್ಪು ಮಾಹಿತಿಯನ್ನು ಹೊಂದಿರುವ ವೀಡಿಯೊಗಳನ್ನು ತೆಗೆದುಹಾಕುವುದಾಗಿ ಯೂಟ್ಯೂಬ್ ಹೇಳಿಕೆ
ಇದನ್ನೂ ಓದಿ ; mla zameer ahmed : ‘ವೈಯಕ್ತಿಕ ಅಭಿಪ್ರಾಯವನ್ನು ಹೊರಹಾಕುವ ಸ್ವಾತಂತ್ರ್ಯ ನನಗಿದೆ’ : ಡಿಕೆಶಿಗೆ ಶಾಸಕ ಜಮೀರ್ ಅಹಮದ್ ಟಾಂಗ್
young woman who fell in love with transgender