Mallikarjun kharge : ಚುನಾವಣೆಗೂ ಮುನ್ನವೇ ಸಿಎಂ ಚರ್ಚೆ ಸರಿಯಲ್ಲ : ಪಕ್ಷದ ನಾಯಕರ ಕಿವಿ ಹಿಂಡಿದ ಖರ್ಗೆ

ಮೈಸೂರು : mallikarjun kharge : ರಾಜ್ಯ ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಹುದ್ದೆ ಕುರಿತಂತೆ ಮಾತಿನ ಜಟಾಪಟಿ ಜೋರಾಗಿದೆ. ಸಿಎಂ ಅಭ್ಯರ್ಥಿ ರೇಸ್​ನಲ್ಲಿರುವ ಡಿ.ಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ನಡುವಿನ ಪೈಪೋಟಿಯು ಪಕ್ಷದಲ್ಲಿ ಆಂತರಿಕ ಕಲಹಕ್ಕೆ ದಾರಿ ಮಾಡಿಕೊಡುತ್ತಿದೆ. ಈಗಾಗಲೇ ರಾಜಕೀಯ ನಾಯಕರು ಈ ವಿಚಾರವಾಗಿ ವಾದ – ಪ್ರತಿವಾದಗಳನ್ನು ಮಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪಕ್ಷದ ನಾಯಕರಿಗೆ ಮಾತಿನ ಛಾಟಿ ಬೀಸಿದ್ದಾರೆ.

ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭಾ ಚುನಾವಣೆಗೂ ಮುನ್ನವೇ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗುವುದು ಶೋಭೆ ತರೋದಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಸಿಎಂ ಯಾರಾಗ್ತಾರೆ ಎನ್ನುವುದನ್ನು ಬೆಂಗಳೂರಿನಲ್ಲೋ, ಮೈಸೂರಿನಲ್ಲೋ ಅಥವಾ ಕಲ್ಬುರ್ಗಿಯಲ್ಲೋ ತೀರ್ಮಾನ ಮಾಡೋದಿಲ್ಲ. ರಾಜ್ಯದ ಸಿಎಂ ಯಾರಾಗ್ತಾರೆ ಅನ್ನೋದನ್ನು ಹೈಕಮಾಂಡ್​ ತೀರ್ಮಾನ ಮಾಡುತ್ತದೆ, ಅಂದಿನ ರಾಜಕೀಯ ಪರಿಸ್ಥಿತಿಯನ್ನು ನೋಡಿಕೊಂಡು ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ತಾರೆ. ಈಗ ನಾನೇ ಸಿಎಂ ಅಂದಮಾತ್ರಕ್ಕೆ ಇವೆಲ್ಲ ಬದಲಾಗಲು ಸಾಧ್ಯವಿಲ್ಲ ಎಂದು ಟಾಂಗ್​ ನೀಡಿದ್ದಾರೆ .

ಒಕ್ಕಲಿಗ ಸಮುದಾಯದ ಸಮಾವೇಶದ ಬಳಿಕ ರಾಜ್ಯ ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ಜೋರಾಗಿದೆ. ಏಕೆಂದರೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಒಕ್ಕಲಿಗ ಸಮುದಾಯದ ವ್ಯಕ್ತಿಯೊಬ್ಬರು ರಾಜ್ಯದಲ್ಲಿ ಉನ್ನತ ಸ್ಥಾನಕ್ಕೆ ಏರಲಿದ್ದಾರೆ. ಈ ಅವಕಾಶವನ್ನು ರಾಜ್ಯದ ಒಕ್ಕಲಿಗ ಸಮುದಾಯ ಬಿಟ್ಟು ಕೊಡಬಾರದು ಎಂದು ಹೇಳಿದ್ದರು.

ಡಿಕೆಶಿ ಪರೋಕ್ಷವಾಗಿ ತಾನೇ ಸಿಎಂ ಎಂದ ಬಳಿಕ ಸಿದ್ದರಾಮಯ್ಯ ಬೆಂಬಲಿಗರು ಮುಂದಿನ ಸಿಎಂ ಬೇರ್ಯಾರೂ ಅಲ್ಲ ಸಿದ್ದರಾಮಯ್ಯ ಎಂದು ಹೇಳ್ತಿದ್ದಾರೆ. ಅಲ್ಲದೇ ಸಿದ್ದರಾಮೋತ್ಸವದಂತಹ ಅದ್ದೂರಿ ಕಾರ್ಯಕ್ರಮಗಳನ್ನೆಲ್ಲ ಹಮ್ಮಿಕೊಳ್ಳಲಾಗ್ತಾ ಇದೆ. ಇಂದು ಡಿಕೆಶಿ ಹಾಗೂ ಜಮೀರ್ ಅಹಮದ್​ ಕೂಡ ಏಟು – ತಿರುಗೇಟಿನ ಹೇಳಿಕೆಗಳನ್ನೂ ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ಮಲ್ಲಿಕಾರ್ಜುನ ಖರ್ಗೆ ನಯವಾಗಿಯೇ ಪಕ್ಷದ ನಾಯಕರ ಕಿವಿ ಹಿಂಡಿದ್ದಾರೆ.

ಇದನ್ನು ಓದಿ : mla zameer ahmed : ‘ವೈಯಕ್ತಿಕ ಅಭಿಪ್ರಾಯವನ್ನು ಹೊರಹಾಕುವ ಸ್ವಾತಂತ್ರ್ಯ ನನಗಿದೆ’ : ಡಿಕೆಶಿಗೆ ಶಾಸಕ ಜಮೀರ್ ಅಹಮದ್​ ಟಾಂಗ್​​

ಇದನ್ನೂ ಓದಿ : KPCC president DK Shivakumar : ‘ಬಾಯಿ ಮುಚ್ಕೊಂಡು ಕೆಲಸ ಮಾಡಿ’ : ಜಮೀರ್​ ಅಹಮದ್​ಗೆ ಡಿ.ಕೆ ಶಿವಕುಮಾರ್ ವಾರ್ನಿಂಗ್​

if the congress comes to power the high command will decide about the cm : mallikarjun kharge

Comments are closed.