Anand Mahindra : ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಟ್ವಿಟರ್ನಲ್ಲಿ ಸದಾ ಆ್ಯಕ್ಟಿವ್ ಆಗಿರ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಾರಿ ಅವರು 15 ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಏಕಕಾಲದಲ್ಲಿ ಚಿತ್ರಿಸಿದ ಅತ್ಯದ್ಭುತ ಕಲಾವಿದೆಯೊಬ್ಬಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಇಚ್ಛಿಸಿದ್ದೇನೆ ಎಂದು ಟ್ವಿಟರ್ನಲ್ಲಿ ಘೋಷಿಸಿದ್ದಾರೆ. ನೂರ್ಜಹಾನ್ ಒಂದೇ ಬಾರಿ 15 ಮಂದಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಚಿತ್ರವನ್ನು ಬಿಡಿಸಿದ್ದು ಆನಂದ್ ಮಹೀಂದ್ರಾ ಇದೊಂದು ಪವಾಡವೇ ಸರಿ ಅಂತಾ ಉದ್ಘಾರ ತೆಗೆದಿದ್ದಾರೆ.
ಇದು ಹೇಗೆ ಸಾಧ್ಯ..? ಈಕೆ ಪ್ರತಿಭಾನ್ವಿತ ಕಲಾವಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಒಂದೇ ಬಾರಿಗೆ 15 ಚಿತ್ರಗಳನ್ನು ಬಿಡಿಸೋದು ಅಂದರೆ ಇದು ಕಲೆಗಿಂತ ಹೆಚ್ಚು,ಇದೊಂದು ಪವಾಡ..! ಆಕೆಯ ಬಳಿ ಇರುವ ಯಾರಾದರೂ ಈ ಬಗ್ಗೆ ದೃಢೀಕರಣ ನೀಡಲು ಸಾಧ್ಯವೇ..? ಈಕೆಯ ಪ್ರತಿಭೆ ಮಾನ್ಯವೇ ಆಗಿದ್ದರೆ ಆಕೆಯನ್ನು ಪ್ರೋತ್ಸಾಹಿಸಲೇಬೇಕು ಹಾಗೂ ನಾನು ವಿದ್ಯಾರ್ಥಿವೇತನ ಸೇರಿದಂತೆ ಇತರೆ ಎಲ್ಲಾ ಸೌಲಭ್ಯಗಳನ್ನು ಈಕೆಗೆ ಕೊಡಲು ಉತ್ಸುಕನಾಗಿದ್ದೇನೆ ಎಂದು ಆನಂದ್ ಮಹೀಂದ್ರಾ ಬರೆದುಕೊಂಡಿದ್ದಾರೆ.
How is this even possible?? Clearly she’s a talented artist. But to paint 15 portraits at once is more than art—it’s a miracle! Anyone located near her who can confirm this feat? If valid, she must be encouraged & I’d be pleased to provide a scholarship & other forms of support. pic.twitter.com/5fha3TneJi
— anand mahindra (@anandmahindra) October 27, 2022
ಈ ರೀತಿಯ ಚಿತ್ರವನ್ನು ಬಿಡಿಸಬೇಕು ಅಂದರೆ ತಲೆ ರೊಬೋಟ್ನಂತೆ ಕೆಲಸ ಮಾಡಬೇಕು. ನಿರ್ದಿಷ್ಟ ಸ್ಥಳದಲ್ಲಿ ನಿರ್ದಿಷ್ಟವಾದ ಚಿತ್ರ ಹಾಗೂ ಪ್ರತಿಯೊಂದು ಚಿತ್ರಕ್ಕೂ ಬೇರೆ ಬೇರೆ ಬಣ್ಣಗಳನ್ನು ಬಳಕೆ ಮಾಡಿ ಏಕಕಾಲದಲ್ಲಿ ಚಿತ್ರಿಸುವುದು ಅಂದರೆ ಇದು ನಿಜಕ್ಕೂ ನಂಬಲಾರದ ಒಂದು ವಿಚಾರವಾಗಿದೆ.
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ನೂರ್ಜಹಾನ್ ತನ್ನ ಹೆಸರನ್ನು ಪಡೆದುಕೊಂಡಿದ್ದಾಳೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗುತ್ತಿದೆಯಾದರೂ ಸಹ ಇದಕ್ಕೆ ಅಧಿಕೃತ ಮಾಹಿತಿ ಇನ್ನೂ ಯಾರಿಗೂ ಸಿಕ್ಕಿಲ್ಲ. ನಾನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ನಲ್ಲಿ ನೂರ್ಜಹಾನ್ ಹೆಸರು ಪರಿಶೀಲಿಸಿದ್ದೇನೆ. ಈ ಹೆಸರು ನನಗೆ ಕಂಡು ಬಂದಿಲ್ಲ ಅಂತಾ ಯುಟ್ಯೂಬ್ ಬಳಕೆದಾರರೊಬ್ಬರು ಮಾಹಿತಿ ನೀಡಿದ್ದಾರೆ.
ಒಬ್ಬ ಕಲಾವಿದೆ ಏಕಕಾಲದಲ್ಲಿ 15 ಚಿತ್ರಗಳನ್ನು ಅತ್ಯಂತ ನಿಖರವಾಗಿ, ಪ್ರತ್ಯೇಕ ಬಣ್ಣಗಳನ್ನು ಬಳಕೆ ಮಾಡಿ, ಅಷ್ಟೊಂದು ವೇಗದಲ್ಲಿ ಚಿತ್ರಿಸಿರುವುದು ಅನೇಕರನ್ನು ಗೊಂದಲಕ್ಕೀಡು ಮಾಡಿದೆ. ಇದನ್ನು ನಿಜ ಎಂದು ನಂಬಲು ಅನೇಕರು ಹಿಂಜರಿಯುತ್ತಿದ್ದು ಈ ವಿಡಿಯೋದ ಸತ್ಯಾಸತ್ಯತೆಯನ್ನು ಕೂಲಂಕುಷವಾಗಿ ಪರಿಶೀಲಿಸಬೇಕಿದೆ ಎಂದು ಅಭಿಪ್ರಾಯ ಹೊರಹಾಕ್ತಿದ್ದಾರೆ.
ಇದನ್ನು ಓದಿ : BCCI offers equal pay:ಟೀಂ ಇಂಡಿಯಾ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ : ಬಿಸಿಸಿಐ ಐತಿಹಾಸಿಕ ಘೋಷಣೆ
ಇದನ್ನೂ ಓದಿ : murder:ಅನೈತಿಕ ಸಂಬಂಧಕ್ಕೆ ಶುರುವಾದ ಅನುಮಾನ ಕೊಲೆಯಲ್ಲಿ ಅಂತ್ಯ: ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ
Anand Mahindra offers scholarship to miracle artist netizens call it fraud