Beer Made From Urine : ಸಿಂಗಾಪುರವು ಬಿಯರ್ ಉದ್ಯಮದಲ್ಲಿ ಹೊಸದೊಂದು ಪ್ರಯತ್ನವನ್ನು ಮಾಡಿದ್ದು ನ್ಯೂಬ್ರೂ ಎಂಬ ಹೊಸ ಬಿಯರ್ ಉತ್ಪನ್ನವನ್ನು ಪರಿಚಯಿಸಿದೆ. ಇದು ಸಾಮಾನ್ಯ ಬಿಯರ್ನಂತೆ ಕಾಣಿಸುತ್ತದೆ ಹಾಗೂ ಅದೇ ರೀತಿಯ ರುಚಿಯನ್ನು ಹೊಂದಿದ್ದರೂ ಸಹ ಇಲ್ಲೊಂದು ದೊಡ್ಡ ಟ್ವಿಸ್ಟ್ ಇದೆ. ಅದೇನಂದರೆ ನೀ ವಾಟರ್ನಿಂದ ಈ ಬಿಯರ್ಗಳನ್ನ ತಯಾರಿಸಲಾಗುತ್ತದೆ. ಈ ನೀ ವಾಟರ್ ಸಿಂಗಾಪುರದ ಒಳಚರಂಡಿ ಹಾಗೂ ಮೂತ್ರವನ್ನು ಫಿಲ್ಟರ್ ಮಾಡುವ ಮೂಲಕ ತಯಾರಿಸಲಾಗುತ್ತದೆ.
ಸುಮಾರು 95 ಪ್ರತಿಶತದಷ್ಟು ನ್ಯೂಬ್ರೂವು ನೀವಾಟರ್‌ನಿಂದ ಮಾಡಲ್ಪಟ್ಟಿದೆ, ಇದು ಸುರಕ್ಷಿತ ಕುಡಿಯುವ ನೀರಿನ ಅಂತರಾಷ್ಟ್ರೀಯ ಮಾನದಂಡಗಳಿಗೆ ಬದ್ಧವಾಗಿದೆ ಮಾತ್ರವಲ್ಲದೆ ಬಿಯರ್ ತಯಾರಿಸಲು ಬಳಸುವಷ್ಟು ಸ್ವಚ್ಛವಾಗಿ ಪರೀಕ್ಷಿಸಲ್ಪಟ್ಟಿದೆ.
ನೋಡಲು ಥೇಟ್ ಸಾಮಾನ್ಯ ಬಿಯರ್ನಂತೆ ಕಾಣುವ ಈ ನ್ಯೂಬ್ರೂ ಬಿಯರ್ನ್ನು ಪ್ರೀಮಿಯಂ ಜರ್ಮನ್ ಬಾರ್ಲಿ ಮಾಲ್ಟ್ಗಳು, ಆರೊಮ್ಯಾಟಿಕ್ ಸಿಟ್ರಾ ಹಾಗೂ ಕ್ಯಾಲಿಪ್ಸೊ ಹಾಪ್ಗಳಂತಹ ಅತ್ಯುತ್ತಮ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ.
ನ್ಯೂಬ್ರೂ ಅನ್ನು ರಾಷ್ಟ್ರೀಯ ವಾಟರ್ ಏಜೆನ್ಸಿ PUB ಮತ್ತು ಸ್ಥಳೀಯ ಕ್ರಾಫ್ಟ್ ಬಿಯರ್ ಬ್ರೂವರೀಸ್‌ಗಳು ಏಪ್ರಿಲ್ 8 ರಂದು ಸಿಂಗಾಪುರ್ ಇಂಟರ್ನ್ಯಾಷನಲ್ ವಾಟರ್ ವೀಕ್ (SIWW) ನಲ್ಲಿ ನಡೆದ ಜಲ ಸಮ್ಮೇಳನದ ಸಭೆಯೊಂದಿಗೆ ಪ್ರಾರಂಭಿಸಿದವು. ಅದೇ ಸಮಯದಲ್ಲಿ, ನ್ಯೂವಾಟರ್ ಮಾಲ್ಟ್, ಹಾಪ್ಸ್ ಮತ್ತು ಯೀಸ್ಟ್ ತಳಿಗಳ ಸುವಾಸನೆಯನ್ನು ಇವು ಕಲುಷಿತಗೊಳಿಸುವುದಿಲ್ಲ.
ಇದನ್ನು ಓದಿ : ಚೈತ್ರಾ ಹಳ್ಳಿಕೇರಿ 25 ಕೋಟಿ ಪರಿಹಾರಕ್ಕಾಗಿ ಸುಳ್ಳು ಆರೋಪ : ನಟಿ ಪತಿ ಬಾಲಾಜಿ ಪ್ರತ್ಯಾರೋಪ
ಇದನ್ನೂ ಓದಿ : Samantha and Vijay : ಸಾಹಸ ಚಿತ್ರೀಕರಣದ ವೇಳೆ ಗಾಯಗೊಂಡ ಸಮಂತಾ ಮತ್ತು ವಿಜಯ ದೇವರಕೊಂಡ