Namma Metro Train : ಮೆಟ್ರೋ ಪ್ರಯಾಣಿಕರಿಗೆ ಶಾಕ್ : ನಾಳೆ ಸ್ಥಗಿತಗೊಳ್ಳಲಿದೆ ಮೆಟ್ರೋ ರೈಲು ಸಂಚಾರ

ಬೆಂಗಳೂರು : ಸಿಲಿಕಾನ್‌ ಸಿಟಿ ಜನರ ಸಂಚಾರದ ಆಪ್ತಮಿತ್ರನಂತಿರೋ ನಮ್ಮ ‌ಮೆಟ್ರೋ (Namma Metro Train)ಮತ್ತೊಮ್ಮೆ ಕಾಮಗಾರಿ ಕಾರಣಕ್ಕೆ ಸೇವೆ ಸ್ಥಗಿತ ಗೊಳಿಸುತ್ತಿದೆ. ವೀಕೆಂಡ್ ನಲ್ಲೇ ಕಾಮಗಾರಿ ನಡೆಸಲಾಗುತ್ತಿದ್ದು, ಇದೇ ಕಾರಣಕ್ಕೆ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಒಂದು ದಿನದ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ. ನೇರಳೆ ಮಾರ್ಗದಲ್ಲಿ ಮೆಟ್ರೋ ನಿಲ್ದಾಣಗಳ ಕಾಮಗಾರಿ ಹಿನ್ನೆಲೆಯಲ್ಲಿ 28.05.2022 ರಂದು ರಾತ್ರಿ 09.30 ಗಂಟೆಯಿಂದ ಸೇವೆ ಸ್ಥಗಿತಗೊಳ್ಳಲಿದೆ. ಎಂ.ಜಿ. ರಸ್ತೆ ಮತ್ತು ಟ್ರಿನಿಟಿ ಮೆಟ್ರೋ ನಿಲ್ದಾಣಗಳಲ್ಲಿ ತುರ್ತು ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ.

ಕಾಮಗಾರಿ ಕಾರಣಕ್ಕೆ ನೇರಳೆ ಮಾರ್ಗದ ಎಂ.ಜಿ. ರಸ್ತೆ ಮೆಟ್ರೋ (Namma Metro ) ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ವಾಣಿಜ್ಯ ಸೇವೆ ಸ್ಥಗಿತಗೊಳ್ಳಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆ ಹೊರಡಿಸಿದೆ. ಅಲ್ಲದೇ ನಮ್ಮ ಮೆಟ್ರೋ ಸಂಚಾರ ಸ್ಥಗಿತಗೊಳಿಸುತ್ತಿರುವ ಬಗ್ಗೆ ಬಿಎಂಆರ್ಸಿಎಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈ ಅವಧಿಯಲ್ಲಿ ಮೆಟ್ರೋ ಸೇವೆಯು ಎಂ.ಜಿ. ರಸ್ತೆ ಮತ್ತು ಕಂಗೇರಿ ಮಟ್ರೋ ನಿಲ್ದಾಣಗಳ ನಡುವೆ ಮಾತ್ರ ಲಭ್ಯವಿರುತ್ತದೆ ಎಂಬ ಮಾಹಿತಿ ನೀಡಿದೆ. ಈ ಕಾಮಗಾರಿ ಹಿನ್ನೆಲೆಯಲ್ಲಿ ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಕಡೆಗೆ ಕೊನೆಯ ರೈಲು ರಾತ್ರಿ 8.40 ಗಂಟೆಗೆ ಸಂಚರಿಸಲಿದೆ. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಕಡೆಗೆ ರಾತ್ರಿ 9,10 ಗಂಟೆಗೆ ಕೊನೆ ರೈಲು ಹೊರಡುತ್ತದೆ.ಇನ್ನು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿಗೆ ಕೊನೆಯ ರೈಲು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ರಾತ್ರಿ 9.10 ಗಂಟೆಗೆ ಹೊರಡಲಿದೆ.

ರಾತ್ರಿ 9:10 ನಂತರ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಎಂ.ಜಿ. ರಸ್ತೆಯವರೆಗೆ ನಮ್ಮ ಮೆಟ್ರೋ ರೈಲುಗಳು ಚಲಿಸಲಿದ್ದು,ಹಸಿರು ಮಾರ್ಗದ ಮೆಟ್ರೋ ರೈಲು ಸೇವೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನಮ್ಮ ಮೆಟ್ರೋ ಘೋಷಿಸಿದೆ. ಇನ್ನು ಭಾನುವಾರದಂದು ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 7.00 ಗಂಟೆಯಿಂದ ಮೆಟ್ರೋ ಸೇವೆ ಪುನರಾರಂಭಿಸಲಾಗುತ್ತದೆ. ಕಳೆದ ಕೆಲ ದಿನಗಳ ಹಿಂದೆಯೂ ನಮ್ಮ ಮೆಟ್ರೋ ಕಾಮಗಾರಿ ಕಾರಣಕ್ಕೆ ವೀಕೇಂಡ್ ನಲ್ಲಿ ಸಂಚಾರ ಸೇವೆ ಸ್ಥಗಿತಗೊಳಿಸಿತ್ತು. ಕೊರೋನಾ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ನಮ್ಮ ಮೆಟ್ರೋ ನಷ್ಟದತ್ತ ಮುಖಮಾಡಿದ್ದು ಇತ್ತೀಚೆಗಷ್ಟೇ ಜನರು ಮತ್ತೆ ನಮ್ಮ ಮೆಟ್ರೋದತ್ತ ಮುಖ ಮಾಡುತ್ತಿದ್ದಾರೆ. ಹೀಗಿರುವಾಗಲೇ ಮತ್ತೆ ಕಾಮಗಾರಿ ಕಾರಣಕ್ಕೆ ನಮ್ಮ‌ಮೆಟ್ರೋ ಆಗಾಗ ಸೇವೆ ಸ್ಥಗಿತಗೊಳಿಸುವ ಮೂಲಕ ಜನರ ಅಸಮಧಾನಕ್ಕೆ ಕಾರಣವಾಗುತ್ತಿದೆ.

ಇದನ್ನೂ ಓದಿ : Hijab Uniform controversy : ಹಿಜಾಬ್ ಕೇಸರಿ ಶಾಲು ಸಂಘರ್ಷ : ಮಂಗಳೂರಿನ ಕಾಲೇಜಿನಲ್ಲಿ ಮುಗಿಯದ ವಸ್ತ್ರವಿವಾದ

ಇದನ್ನೂ ಓದಿ : CT Ravi Love Letter : ಪಲ್ಲವಿಗೊಂದು ಪ್ರೇಮಪತ್ರ : ವೈರಲ್ ಆಯ್ತು ಸಿ.ಟಿ.ರವಿ ಲೆಟರ್

Bangalore Namma Metro train traffic to be stopped tomorrow

Comments are closed.