ಸಣ್ಣ ಮಕ್ಕಳು ಏನು ಮಾಡಿದರೂ, ನೋಡುವುದಕ್ಕೆ ಚಂದ. ಅವರ ಆಟ-ತುಂಟಾಟ ನೋಡ್ತಾ ಇದ್ರೆ, ಅರೆ ಕ್ಷಣದಲ್ಲಿ ನಮ್ಮ ಬೇಸರವೆಲ್ಲ ಕಳೆದಂತೆ ತೋರುತ್ತದೆ. ಸೋಷಿಯಲ್ ಮೀಡಿಯಾಗಳಲ್ಲಂತೂ ಮಕ್ಕಳ ರೀಲ್ಸ್‌ಗಳು ಸಿಕ್ಕಾಪಟ್ಟೆ ವೈರಲ್ (Viral Video) ಆಗಿ ಬಿಡುತ್ತವೆ. ಅವರ ತೊದಲು ನುಡಿ, ಆಟ, ಓಟ, ಹಾಡು ಹೀಗೆ ಏನೇ ಇದ್ದರೂ ಸಾವಿರಾರು ಲೈಕ್ ಮತ್ತು ಕಮೆಂಟ್ ಬಂದೇ ಬರುತ್ತದೆ.
ಇನ್ನು ಮಕ್ಕಳು ತಮ್ಮ ಸಾಕು ಪ್ರಾಣಿಗಳ ಜೊತೆ ಆಟ ಆಡಲು ಹೋಗಿ ಪೇಚಾಟಕ್ಕೆ ಸಿಲುಕುವುದನ್ನ ನೋಡಿದ್ರೆ, ಎಂಥವರನ್ನೂ ನಗುವಂತೆ ಮಾಡುತ್ತದೆ. ಆದರೆ ನವೆಂಬರ್22 ರಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ರೀಲ್ಸ್ ಒಂದು ಕೊಂಚ ವಿಭಿನ್ನವಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೇ. ಈ ವಿಡಿಯೋ ಈಗಾಗಲೇ, ಸುಮಾರು ಹದಿನೈದು ಸಾವಿರ ಲೈಕ್ಸ್ ಗಳನ್ನು ಪಡೆದಿದ್ದು, ಇನ್ನೂ ಜಾಸ್ತಿ ವ್ಯೂಸ್ ಆಗುತ್ತಿದೆ.
ವಿಡಿಯೋದಲ್ಲಿ ಏನಿದೆ?
ಈ ವಿಡಿಯೋದಲ್ಲಿ ಒಂದು ಪುಟಾಣಿ ಮಗು ಹಾಗೂ ಬೆಕ್ಕು ಕಾಣಿಸಿಕೊಂಡಿದ್ದು, ಅವರ ನಡುವಿನ ಆಟ ಎಂಥವರನ್ನೂ ಮೋಡಿ ಮಾಡುತ್ತದೆ. ಒಮ್ಮೆ ವಿಡಿಯೋ ನೋಡಿದವರು ಮತ್ತೆ ಮತ್ತೆ ವಿಡಿಯೋ ನೋಡಿ, ತಮ್ಮ ಗ್ರೂಪ್ ಗಳಲ್ಲೂ ಶೇರ್ ಮಾಡುತ್ತಿದ್ದಾರೆ.
ಅಂದ ಹಾಗೆ, ಈ ಚಿತ್ರದಲ್ಲಿ ಕಾಣುವ ಬೆಕ್ಕಿನ ಹೆಸರು ಸಮ್ಮರ್ ಹಾಗೂ ಮಗುವಿನ ಹೆಸರು ಬ್ಲಾಸ್ಸಾಮ್. ಇನ್ಸ್ಟಾಗ್ರಾಮ್ ನ ಕಂಟೆಂಟ್ ಕ್ರಿಯೇಟರ್ ಒಬ್ಬರು ಇದನ್ನು ಪೋಸ್ಟ್ ಮಾಡಿ ,” ಬೇಬಿ ಬ್ಲಾಸ್ಸಾಮ್‌ಗೆ ತನ್ನನ್ನು ಹೇಗೆ ಸಾಕುವುದೆಂದು ಸಮ್ಮರ್ ಕಲಿಸುತ್ತಿದ್ದಾಳೆ” ಎಂದು ಕ್ಯಾಪ್ಶ ನ್ ನೀಡಿದ್ದಾರೆ. ಇವರ ನಡುವಿನ ಈ ವೀಡಿಯೋಗೆ ವ್ಯಾಪಕ ಮೆಚ್ಚುಗೆ ಲಭಿಸಿದ್ದು, 1 ವಾರದ ನಂತರ ವು ವೈರಲ್ ಆಗುತ್ತಿದೆ.
” ನೀನಿನ್ನು ದೊಡ್ಡವಳಾಗಿದ್ಯಾ, ನನ್ನನ್ನು ನೀನೇ ನೋಡಿಕೊಳ್ಳಬಹುದು” ಎಂದು ಬೆಕ್ಕು ಹೇಳುತ್ತಿದೆ ಎಂದು ಇನ್ಸ್ಟಾಗ್ರಾಮ್ ಯೂಸರ್ ಒಬ್ಬರು ಕಾಮೆಂಟ್ ಮಾಡಿದ್ದಾರೆ.
” ಪ್ರಾಣಿ ಆಗಿದ್ರೂ ಮಗುವನ್ನ ಎಷ್ಟು ಅಕ್ಕರೆಯಿಂದ ನೋಡ್ತಾ ಇದೆ, ಅಶ್ವರ್ಯ” ಎಂದು ಮತ್ತೊಬ್ಬರು ಬರೆದಿದ್ದಾರೆ.
” ಸಮ್ಮರ್ ಮನುಷ್ಯತ್ವ ಇರುವ ಬೆಕ್ಕು” ಹೀಗೆ ಹಲವಾರು ಪ್ರಶಂಸೆಯ ಕಮೆಂಟ್ ಗಳು ಪೋಸ್ಟ್ ಗೆ ಲಭಿಸಿವೆ.
ಅದೇಷ್ಟೋ ಬಾರಿ ಸಾಕು ಪ್ರಾಣಿಗಳೇ ಮಕ್ಕಳ ಆಪ್ತ ಗೆಳೆಯರಾಗಿ ಅವರನ್ನು ಅಪಾಯದಿಂದ ಪಾರು ಮಾಡಿದ ಉದಾಹರಣೆಗಳು ಸಾಕಷ್ಟಿವೆ. ನೀವು ಈ ವಿಡಿಯೋ ನೋಡಿಲ್ಲ ಅಂತಾದ್ರೆ, ಒಮ್ಮೆ ನೋಡಿ. ಇದು ನಿಮ್ಮನ್ನು ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ, ಅದರಲ್ಲಿ ಯಾವುದೇ ಸಂದೇಹವಿಲ್ಲ.
ಇದನ್ನೂ ಓದಿ: Patralekhaa : ಪತ್ರಲೇಖಾ – ರಾಜ್‌ಕುಮಾರ್ ರಾವ್ ಅದ್ದೂರಿ ನಿಶ್ವಿತಾರ್ಥ : ಪ್ರೊಪೋಸಲ್ ವಿಡಿಯೋ ವೈರಲ್
(Cat teaches baby how to pet it in this sweet Viral Video)