ಯಾರದಾದ್ದರೂ ನಿಜ ಬಣ್ಣ ಬಯಲು ಮಾಡುವಾಗ ಅವರ ಫೋನ್ನ ಮೇಲೆ ಕಣ್ಣಿಡಿವುದು ಸರ್ವೇ ಸಾಮಾನ್ಯ. ಅದರಲ್ಲೂ ಪತಿ – ಪತ್ನಿಯ ನಡುವೆ ಪರಸ್ಪರ ಅನುಮಾನ ಇದ್ದರಂತೂ ಮುಗೀತು. ಫೋನ್ ಅಲ್ಲಿ ಪ್ರಮುಖ ಸಾಕ್ಷ್ಯವಾಗಿ ಮಾರ್ಪಾಡಾಗಿಬಿಡುತ್ತದೆ. ಆದರೆ ಇಂತಹದ್ದೇ ಒಂದು ಪ್ರಕರಣದಲ್ಲಿ ವಿಶೇಷ ಆದೇಶ ನೀಡಿರುವ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಸಂಗಾತಿಯ ಅನುಮತಿ ಇಲ್ಲದೆಯೇ ಫೋನ್ ಕಾಲ್ ರೆಕಾರ್ಡ್ ಮಾಡುವುದು ತಪ್ಪು(Right To Privacy) ಎಂದು ಆದೇಶ ನೀಡಿದೆ.
ಪತ್ನಿಯ ನಿಜಬಣ್ಣ ಬಯಲು ಮಾಡುವ ಸಲುವಾಗಿ ಆಕೆಯ ಕಾಲ್ ರೆಕಾರ್ಡ್ ಮಾಡಿ ಕೌಟುಂಬಿಕ ನ್ಯಾಯಾಲಯದಲ್ಲಿ ಜಯವನ್ನೂ ಸಾಧಿಸಿದ್ದ ಪತಿರಾಯ ಹೈಕೋರ್ಟ್ನ ಈ ಆದೇಶ ಕೇಳಿ ಸುಸ್ತಾಗಿದ್ದಾನೆ. ಪತ್ನಿಯ ಕೆಟ್ಟ ಅಂಶಗಳನ್ನು ಜಗತ್ತಿಗೆ ಸಾಬೀತುಪಡಿಸುವ ಸಲುವಾಗಿ ಆಕೆಯ ದೂರವಾಣಿ ಕರೆಗಳನ್ನು ರೆಕಾರ್ಡ್ ಮಾಡಿದಲ್ಲಿ ಸಂವಿಧಾನದ ಪ್ರಕಾರ ಅದು ವೈಯಕ್ತಿಕ ಹಕ್ಕುಗಳ ಉಲ್ಲಂಘನೆಯಾದಂತೆ ಎಂದು ಕೋರ್ಟ್ ಹೇಳಿದೆ. ಈ ಮೂಲಕ ಪತ್ನಿಯ ಕಾಲ್ ರೆಕಾರ್ಡ್ಗಳನ್ನು ಸಾಕ್ಷ್ಯ ಎಂದು ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ.
ದಾಂಪತ್ಯ ಜೀವನದಲ್ಲಿ ವಿರಸ ಮೂಡಿದ್ದರಿಂದ ಪತ್ನಿಯು ಪತಿಯ ವಿರುದ್ಧ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೇ ವೇಳೆಯಲ್ಲಿ ಪತಿಯು ಬಟಿಂಡಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು ,
ಪತ್ನಿಯ ನಕರಾತ್ಮಕ ಗುಣಗಳನ್ನು ನ್ಯಾಯಾಧೀಶರ ಮುಂದೆ ಸಾಬೀತುಪಡಿಸುವ ಸಲುವಾಗಿ ಕೋರ್ಟ್ಗೆ ಪತಿ ಪತ್ನಿಯ ಕಾಲ್ ರೆಕಾರ್ಡ್ಗಳನ್ನು ಕೇಳಿಸಿದ್ದರು. ಇದನ್ನು ಸಾಕ್ಷ್ಯ ಎಂದು ಕೌಟುಂಬಿಕ ನ್ಯಾಯಾಲಯ ಕೂಡ ಪರಿಗಣಿಸಿತ್ತು,
ಆದರೆ ಈ ರೀತಿ ಕಾಲ್ ರೆಕಾರ್ಡ್ ಮಾಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುವ ಪತಿಯ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಉಚ್ಛ ನ್ಯಾಯಾಲಯ ಸಾಕ್ಷ್ಯದ ಹೆಸರಲ್ಲಿ ಸಂಗಾತಿಯ ಖಾಸಗಿತನದ ಹಕ್ಕುಗಳನ್ನು ಉಲ್ಲಂಘನೆ ಮಾಡುವ ಅಧಿಕಾರ ನಿಮಗಿಲ್ಲ ಎಂದು ಹೇಳಿದೆ. ಹಾಗೂ ಕೌಟುಂಬಿಕ ನ್ಯಾಯಾಲಯಕ್ಕೆ ಇದನ್ನು ಸಾಕ್ಷ್ಯ ಎಂದು ಪರಿಗಣಿಸದಂತೆ ಸೂಚನೆ ನೀಡಿದೆ. ಇದನ್ನು ಹೊರತುಪಡಿಸಿದ ವಿಚ್ಚೇದನದ ಬಗ್ಗೆ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದೆ.
recording wife call without permission violates right to privacy
ಇದನ್ನೂ ಓದಿ : Pakistan : ಮೊಸರು ತರಲೆಂದು ಮಾರ್ಗಮಧ್ಯದಲ್ಲಿ ರೈಲನ್ನೇ ನಿಲ್ಲಿಸಿದ ಚಾಲಕ..!