ಬೆಂಗಳೂರು : ಇಷ್ಟು ನೌಕರರಿಗೆ 6 ತಿಂಗಳ ಕಾಲ ಹೆರಿಗೆ ರಜೆಯನ್ನು ನೀಡಲಾಗುತ್ತಿತ್ತು. ಆದ್ರೆ ಇನ್ಮುಂದೆ ಮಕ್ಕಳನ್ನು ದತ್ತು ಪಡೆಯುವ ದಂಪತಿಗಳಿಗೆ ಮಾತೃತ್ವ ಹಾಗೂ ಪಿತೃತ್ವ ರಜೆ ದೊರೆಯಲಿದೆ.

ಕೆಲಸದ ಒತ್ತಡ, ಬದಲಾಗುತ್ತಿರುವ ಜೀವನಶೈಲಿ, ಬಂಜೆತನ ಹೀಗೆ ನಾನಾ ಕಾರಣಗಳಿಂದಾಗಿ ಸಾಕಷ್ಟು ದಂಪತಿ ಬಾಡಿಗೆ ತಾಯಿಯ ಮೂಲಕ ಮಗುವನ್ನು ದತ್ತುಪಡೆಯಲು ಮುಂದಾ ಇಂಥವರು ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದರೆ, ಇನ್ನೂ ಕೆಲವರು ಮಗುವನ್ನು ದತ್ತು ಪಡೆಯುತ್ತಿದ್ದಾರೆ. ಸ್ವಂತ ಮಗುವಾದರೆ ಮೆಟರ್ನಿಟಿ ರಜೆ (ಹೆರಿಗೆ ರಜೆ) ಸಿಗುತ್ತದೆ. ಆದರೆ, ದತ್ತು ಪಡೆದ ಮಗುವನ್ನು ನೋಡಿಕೊಳ್ಳಲು ರಜೆ ಸಿಗುವುದಿಲ್ಲವಲ್ಲ ಎಂದು ಕೊರಗುವವರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ.

ಗರ್ಭ ಧರಿಸುವ ಮಹಿಳೆಯರಿಗೆ ಮಾತೃತ್ವ ರಜೆ ನೀಡುವಂತೆ ಇನ್ನುಮುಂದೆ ಮಗುವನ್ನು ದತ್ತು ತೆಗೆದುಕೊಳ್ಳುವ ಸರ್ಕಾರಿ ನೌಕರರಿಗೂ 6 ತಿಂಗಳು ಮಾತೃತ್ವ ರಜೆ ಹಾಗೂ ಪುರುಷರಿಗೂ 15 ದಿನಗಳ ಪಿತೃತ್ವ ರಜೆ ನೀಡಲು ರಾಜ್ಯ ಸರಕಾರ ಮುಂದಾಗಿದೆ.

180 ದಿನಗಳ ಮಾತೃತ್ವ ರಜೆ ಹಾಗೂ 15 ದಿನಗಳ ಪಿತೃತ್ವ ರಜೆ ಕೇವಲ ಇಬ್ಬರು ದತ್ತು ಮಕ್ಕಳಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ. ಮಗುವನ್ನು ದತ್ತು ಪಡೆದ ದಿನದಿಂದ ರಜೆ ಅನ್ವಯವಾಗಲಿದೆ ಎಂದು ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ.