ಮಾಸ್ ಲುಕ್ ನಲ್ಲಿ ಎಂಟ್ರಿಕೊಟ್ಟ ಕಿಚ್ಚ : ಹೇಗಿದೆ ಗೊತ್ತಾ ಕೋಟಿಗೊಬ್ಬ -3 ಟೀಸರ್

0

ಚಂದನವನದ ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾದ ಟೀಸರ್ ಬಿಡುಗಡೆಯಾಗದೆ. ಶಿವರಾತ್ರಿಯ ದಿನದಂದು ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಮೋಷನ್ ಪಿಚ್ಚರ್ ಹಾಗೂ ಪೋಸ್ಟರ್ ಗಳಿಂದ ಕುತೂಹಲ ಹುಟ್ಟಿಸಿದ್ದ ಕೋಟಿಗೊಬ್ಬ-3 ಸಿನಿಮಾದ ಟೀಸರ್ ನೋಡಿರೋ ಅಭಿಮಾನಿಗಳು ಸಖತ್ ಫಿದಾ ಆಗಿದ್ದಾರೆ.

ಕೋಟಿಗೊಬ್ಬ-3 ಸಿನಿಮಾದ ಈಗಾಗಲೇ ಬಿಡುಗಡೆಯಾಗಿರೋ ಮೋಷನ್ ಪೋಸ್ಟರ್ ನಲ್ಲಿ ಅಭಿನಯ ಚಕ್ರವರ್ತಿಯ ಕನ್ನಡಕದ ಲುಕ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿತ್ತು.

ಟೀಸರ್ ನಲ್ಲಿ ಕಿಚ್ಚ ಡೈಲಾಗ್ ಇಲ್ಲದೇ ಫೈಟಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು, ಕಿಚ್ಚನ ಮಾಸ್ ಲುಕ್ ಪ್ರೇಕ್ಷಕರನ್ನು ಸೆಳೆಯುತ್ತಿದೆ.

ಕೋಟಿಗೊಬ್ಬ-3 ಸಿನಿಮಾದಲ್ಲಿ ಮಲಯಾಲಂ ಬೆಡಗಿ ಮಾಡೋನಾ ಸೆಬ್ಬಾಸ್ಟಿಯನ್ ಮೊದಲ ಬಾರಿಗೆ ಕನ್ನಡ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ಮಾಡೋನಾ ಜೊತೆಗೆ ಶ್ರದ್ದಾ ದಾಸ್ ಕೋಟಿಗೊಬ್ಬನಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ರವಿಶಂಕರ್ ಧ್ವನಿಯ ಖದರ್ ನಲ್ಲಿ ಮೂಡಿ ಬಂದಿರುವ ಟೀಸರ್ ನಲ್ಲಿ ಅಭಿನಯ ಚಕ್ರವರ್ತಿಯ ಆ್ಯಕ್ಷನ್ ಝಲಕ್ ಪ್ರೇಕ್ಷಕರನ್ನು ಮೋಡಿ ಮಾಡುವಂತಿದೆ.

ದುಬಾರಿ ಲೋಕೇಶನ್ ಗಳು ಹಾಗೂ ಮ್ಯಾಜಿಕ್ ಮಾಡುವ ಕಿಚ್ಚ ಸುದೀಪ್ ಲುಕ್ಸ್ . ಕತೆಯ ಎಳೆಯನ್ನು ಬಿಟ್ಟು ಕೊಡದೆ ಟೀಸರ್ ಅನ್ನು ಎರಡು ಶೆಡ್ ನಲ್ಲಿ ತೋರಿಸಲಾಗಿದೆ. ಅರ್ಜುನ್ ಜನ್ಯ ಸಂಗೀತ, ರವಿಶಂಕರ್ ರಾಗಡ್ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಸೂರಪ್ಪ ಬಾಬು ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶಿವಕಾರ್ತಿಕ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಚಿತ್ರದ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಕೋಟಿಗೊಬ್ಬ-3 ಸಿನಿಮಾ ಕೋಟಿಗೊಬ್ಬ-2 ಸಿನಿಮಾದ ಮುಂದುವರಿದ ಭಾಗದಂತೆ ಟೀಸರ್ ನಲ್ಲಿ ತೋರಿಸಲಾಗಿದೆ.

ದಬಾಂಗ್ ಸಿನಿಮಾ ನಂತರ ಕಿಚ್ಚ ಅಭಿನಯಿಸಿದ ಸಿನಿಮಾ ಕೋಟಿಗೊಬ್ಬ-3. ಎಪ್ರೀಲ್ ತಿಂಗಳಲ್ಲಿ ತೆರೆಗೆ ಬರೋದಕ್ಕೆ ಕೋಟಿಗೊಬ್ಬ-3 ರೆಡಿಯಾಗಿದೆ.

ಟೀಸರ್ ನೋಡಿರೋ ಪ್ರೇಕ್ಷಕರಿಗೆ ಕೋಟಿಗೊಬ್ಬ -3 ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ಚಿತ್ರದ ಬಿಡುಗಡೆಗಾಗಿ ಕಾತರರಾಗಿದ್ದಾರೆ.

Leave A Reply

Your email address will not be published.