- ಭಾಗ್ಯ ದಿವಾಣ
ಕೊರೋನ ಮಹಾಮಾರಿಯು ವಿಶ್ವದೆಲ್ಲೆಡೆ ಆವರಿಸಿ ತಿಂಗಳುಗಳೇ ಕಳೆದಿವೆ. ಜನ ಮನೆ ಬಿಟ್ಟು ಹೊರಗೆ ಅಡಿಯಿಡಬೇಕಿದ್ದರೂ ಮಾಸ್ಕ್ , ಸ್ಯಾನಿಟೈಸರ್ ಬಗ್ಗೆ ಯೋಚಿಸಲೇ ಬೇಕಾದ ಕಾಲವೂ ಬಂದಿದೆ.

ಅದ್ರಲ್ಲೂ ಮಾಸ್ಕ್ ಧರಿಸದೇ ರಸ್ತೆಗಿಳಿದರೆ ದಂಡ ವಿಧಿಸುವ ಸರ್ಕಾರ ಹೊಸ ನಡೆಯಂತೂ ಮಾಸ್ಕ್ ಜನಜೀವನದ ಮೇಲೆ ಅದೆಷ್ಟು ಪರಣಾಮಕಾರಿ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತದೆ. ವೈದ್ಯರು ಹೇಳಿವಂತೆ,ಕೊರೋನಾ ರೋಗಕ್ಕೆ ಸರಿಯಾದ ಔಷಧಿ ಕಂಡುಹಿಡಿಯದ ಈ ವೇಳೆಯಲ್ಲಿ ಮಾಸ್ಕ್ ಬಳಕೆಯು ಜನಸಾಮಾನ್ಯ ರಿಗೆ ಲಸಿಕೆ ಯಂತೆ ಕಾರ್ಯ ನಿರ್ವಹಿಸುವುದಂತೆ..

ಇಷ್ಟಕ್ಕೂ ಈ ಮಾಸ್ಕ್ ವಿಚಾರ ಈಗ ಯಾಕೆ ಬಂದಿರೋದು ಗೊತ್ತಾ..? ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಒಂದು ಫೋಟೋ ವಿಚಾರವಾಗಿ..ಹೌದು, ಯುಎಇ ಮೂಲದ ವೈದ್ಯರೊಬ್ಬರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಶೇಷವಾದ ಫೋಟೋ ವೊಂದನ್ನು ಶೇರ್ ಮಾಡಿಕೊಂಡಿದ್ದು, ಎಲ್ಲರ ಚರ್ಚೆಗೆ ಕಾರಣವಾಗಿದೆ.

ಆಗಷ್ಟೇ ತಾಯಿಯ ಗರ್ಭದಿಂದ ಹೊರಬಂದು ಮಗುವೊಂದು, ತನ್ನನ್ನು ಹೊರಜಗತ್ತಿಗೆ ಕರೆತಂದ ವೈದ್ಯರ ಮುಖದಲ್ಲಿದ್ದ ಮಾಸ್ಕನ್ನು ಕಿತ್ತು ತೆಗೆಯುವ ಈ ಫೋಟೋವೀಗ ಎಲ್ಲರ ಚಿತ್ತ ತನ್ನತ್ತ ಸೆಳೆಯುವಂತೆ ಮಾಡಿದೆ.

ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ವೈದ್ಯರು, “ನಾವೂ ಕೂಡ ಆದಷ್ಟು ಬೇಗನೆ ಈಗ ಮಾಸ್ಕನ್ನು ಕಿತ್ತೊಗೆಯುವ ಕಾಲ ಬರಲಿ” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಇದು ಈ ವರ್ಷದ ಬೆಸ್ಟ್ ಫೋಟೋ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.